AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಅಜಿತ್ ಕುಮಾರ್ ಟ್ಯಾಲೆಂಟ್ ಬಗ್ಗೆ ನಿಮಗೆಷ್ಟು ಗೊತ್ತು? ಇವರು ಫ್ಲೈಟ್ ಕೂಡ ಓಡಿಸ್ತಾರೆ

ಅಜಿತ್ ಕುಮಾರ್ ಅವರು ಓದಿದ್ದು 10ನೇ ತರಗತಿವರೆಗೆ ಮಾತ್ರ. ನಂತರ ಅವರು 6 ತಿಂಗಳ ಕಾಲ ಮೆಕ್ಯಾನಿಕ್ ಆಗಿ ಕೆಲಸ ಮಾಡಿದರು. ಅಜಿತ್ ಕುಮಾರ್ ರೇಸರ್ ಕೂಡ ಹೌದು. 2004ರ ಬ್ರಿಟಿಷ್ ಫಾರ್ಮುಲಾ 3 ಹಾಗೂ ಫಾರ್ಮುಲಾ 2 ರೇಸರ್ ಆಗಿ ಸ್ಪರ್ಧಿಸಿದರು. ಆದರೂ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ.

ನಟ ಅಜಿತ್ ಕುಮಾರ್ ಟ್ಯಾಲೆಂಟ್ ಬಗ್ಗೆ ನಿಮಗೆಷ್ಟು ಗೊತ್ತು? ಇವರು ಫ್ಲೈಟ್ ಕೂಡ ಓಡಿಸ್ತಾರೆ
ಅಜಿತ್ ಕುಮಾರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 19, 2023 | 12:00 PM

Share

ಅಜಿತ್ ಕುಮಾರ್ ಅವರು ತಮಿಳು ಚಿತ್ರರಂಗದ ಸ್ಟಾರ್ ಹೀರೋ. ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಜಿತ್ ಕುಮಾರ್ (Ajith Kumar) ಅವರ ತಂದೆ ಪಿ. ಸುಬ್ರಮಣ್ಯಂ ಕೇರಳದ ಪಾಲಕ್ಕಾಡ್ ಮೂಲದವರು. ಅವರು ಕೋಲ್ಕತ್ತಾದ ಮೋಹಿನಿ ಅವರನ್ನು ವಿವಾಹವಾದರು. ಅಜಿತ್ ಕುಮಾರ್ 1971ರ ಮೇ 1ರಂದು ಜನಿಸಿದರು. ಅಜಿತ್​ಗೆ ಅನುಪ್ ಕುಮಾರ್ ಮತ್ತು ಅನಿಲ್ ಕುಮಾರ್ ಹೆಸರಿನ ಇಬ್ಬರು ಸಹೋದರರಿದ್ದಾರೆ. ಅಜಿತ್ ಕುಮಾರ್ ಅವರ ತಂದೆ ಪಿ. ಸುಬ್ರಮಣ್ಯಂ ಈ ವರ್ಷ ನಿಧನರಾದರು. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.

ಅಜಿತ್ ಕುಮಾರ್ ಅವರು ಓದಿದ್ದು 10ನೇ ತರಗತಿವರೆಗೆ ಮಾತ್ರ. ನಂತರ ಅವರು 6 ತಿಂಗಳ ಕಾಲ ಮೆಕ್ಯಾನಿಕ್ ಆಗಿ ಕೆಲಸ ಮಾಡಿದರು. ಅಜಿತ್ ಕುಮಾರ್ ರೇಸರ್ ಕೂಡ ಹೌದು. 2004ರ ಬ್ರಿಟಿಷ್ ಫಾರ್ಮುಲಾ 3 ಹಾಗೂ ಫಾರ್ಮುಲಾ 2 ರೇಸರ್ ಆಗಿ ಸ್ಪರ್ಧಿಸಿದರು. ಆದರೂ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಅವರು ಶೂಟರ್ ಕೂಡ ಹೌದು. ತಮಿಳುನಾಡಿನಲ್ಲಿ ನಡೆದ ಚಾಂಪಿಯನ್​ಶಿಪ್​ನಲ್ಲಿ 4 ಚಿನ್ನದ ಪದಕ ಗೆದ್ದಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೆ ಅಜಿತ್ ಹೊಸ ಸಾಧನೆ ಮಾಡಿದ್ದಾರೆ.

ಅಜಿತ್ ಅವರು ಫ್ಲೈಟ್ ಓಡಿಸಬಲ್ಲರು! ಅವರು ವಿಮಾನ ಓಡಿಸುವ ತರಬೇತಿ ಪಡೆದಿದ್ದಾರೆ. ಬೈಕ್ ಬಗ್ಗೆ ಅಜಿತ್​ಗೆ ಸಾಕಷ್ಟು ಆಸಕ್ತಿ ಇದೆ. ಇವರು ಸಿನಿಮಾ ಮಧ್ಯೆ ಬ್ರೇಕ್ ತೆಗೆದುಕೊಂಡು ಈಶಾನ್ಯ ಭಾರತ ಹಾಗೂ ವಿದೇಶಗಳಲ್ಲಿ ಬೈಕ್​ನಲ್ಲಿ ಸುತ್ತಾಡುತ್ತಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಈ ಮೊದಲು ವೈರಲ್ ಆಗಿತ್ತು.

ಅಜಿತ್ ಕುಮಾರ್ ಅವರ ಪತ್ನಿ ಶಾಲಿನಿ ಕೂಡ ದಕ್ಷಿಣ ಭಾರತದಲ್ಲಿ ಗುರುತಿಸಿಕೊಂಡವರು. ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರ ಮಧ್ಯೆ ಪ್ರೀತಿ ಮೂಡಿದ್ದು ಸೆಟ್‌ನಲ್ಲಿಯೇ ಎನ್ನಲಾಗಿದೆ. ಮದುವೆಯಾಗಿ 21 ವರ್ಷ ಕಳೆದಿದೆ. ಇವರಿಗೆ ಇಬ್ಬರು ಮಕ್ಕಳು. ಅಜಿತ್ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಆದರೆ ಅವರ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ: ನೇಪಾಳದಲ್ಲಿ ಶೆಫ್ ಆದ ತಮಿಳು ನಟ ಅಜಿತ್ ಕುಮಾರ್​; ಇಲ್ಲಿದೆ ವಿಡಿಯೋ

ಅಜಿತ್ ಅವರ ಸಿನಿಮಾಗಳು ಕೋಟಿ ಕೋಟಿ ಗಳಿಸುತ್ತದೆ. ಆದಾಗ್ಯೂ ಅಜಿತ್ ಅವರು ತಮ್ಮ ಸಿನಿಮಾಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವುದಿಲ್ಲ. ನಟ ಅಜಿತ್ ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ ಚಿತ್ರಗಳಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಅವರ ನಟನೆಯ ‘ತುನಿವು’ ಸಿನಿಮಾ ರಿಲೀಸ್ ಆಗಿ ಗಮನ ಸೆಳೆಯಿತು. ಈಗ ಅವರು ‘ವಿದಾ ಮುಯರ್ಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!