- Kannada News Photo gallery Actor Dwarkish Celebrate his 81st Birthday With Karnataka Film Chamber rmd
81ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್
ದ್ವಾರಕೀಶ್ ಅವರಿಗೆ ಚಿತ್ರರಂಗದಲ್ಲಿ ಇರುವ ಅನುಭವ ಅಪಾರ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಚಿತ್ರರಂಗದ ಹಲವು ಖ್ಯಾತ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಅವರು ಮಾಡಿದ ಸಿನಿಮಾಗಳು ಈಗಲೂ ಅನೇಕರ ಫೇವರಿಟ್ ಲಿಸ್ಟ್ನಲ್ಲಿದೆ.
Updated on: Aug 19, 2023 | 1:13 PM

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರಿಗೆ ಇಂದು (ಆಗಸ್ಟ್ 19) ಜನ್ಮದಿನದ ಸಂಭ್ರಮ. ಅವರು 81ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರಿಗೆ ಚಿತ್ರರಂಗದ ಅನೇಕರು ಶುಭ ಹಾರೈಸಿದ್ದಾರೆ.

ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ. ಹರೀಶ್ ಹಾಗೂ ಇತರ ಪದಾಧಿಕಾರಿಗಳು ದ್ವಾರಕೀಶ್ ಮನೆಗೆ ಭೇಟಿ ನೀಡಿದ್ದಾರೆ. ದ್ವಾರಕೀಶ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿ ಅವರನ್ನು ಸನ್ಮಾನಿಸಲಾಯಿತು.

ದ್ವಾರಕೀಶ್ ಅವರಿಗೆ ಚಿತ್ರರಂಗದಲ್ಲಿ ಇರುವ ಅನುಭವ ಅಪಾರ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಚಿತ್ರರಂಗದ ಹಲವು ಖ್ಯಾತ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಅವರು ಮಾಡಿದ ಸಿನಿಮಾಗಳು ಈಗಲೂ ಅನೇಕರ ಫೇವರಿಟ್ ಲಿಸ್ಟ್ನಲ್ಲಿದೆ.

ದ್ವಾರಕೀಶ್ ಅವರು ಹಾಸ್ಯ ಪಾತ್ರದ ಮೂಲಕ ಜನಮನ ಗೆದ್ದಿದ್ದಾರೆ. ಅವರು ಮಾಡುತ್ತಿದ್ದ ಕಾಮಿಡಿಗೆ ಪ್ರೇಕ್ಷಕರು ಹೊಟ್ಟೆಹುಣ್ಣಾಗುವಂತೆ ನಕ್ಕಿದ್ದಿದೆ. ಅವರು ಮಾಡಿರುವ ಪಾತ್ರಗಳು ಈಗಲೂ ಜನಮನದಲ್ಲಿ ಉಳಿದುಕೊಂಡಿವೆ.

1964ರಲ್ಲಿ ರಿಲೀಸ್ ಆದ ‘ವೀರ ಸಂಕಲ್ಪ’ ಚಿತ್ರದ ಮೂಲಕ ದ್ವಾರಕೀಶ್ ಅವರು ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಪಡೆದರು. ನಂತರ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಬಳಿಕ ಅವರು ಸಿನಿಮಾ ನಿರ್ಮಾಣಕ್ಕೂ ಇಳಿದರು.

1996ರ ‘ಮಮತೆಯ ಬಂಧನ’ ಚಿತ್ರದ ಮೂಲಕ ದ್ವಾರಕೀಶ್ ಅವರು ನಿರ್ಮಾಪಕರಾದರು. ‘ನೀ ಬರೆದ ಕಾದಂಬರಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿ ನಿರ್ದೇಶಕನ ಕ್ಯಾಪ್ ತೊಟ್ಟರು. ಸಾಕಷ್ಟು ಚಿತ್ರಗಳನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.



















