AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಖಂಡ 2’ ಚಿತ್ರದಲ್ಲಿ ಬಾಲಯ್ಯ ಮೋಡಿ; ಇಲ್ಲಿದೆ ಪವರ್​ಫುಲ್ ಟ್ರೇಲರ್

ಅಖಂಡ 2 ಟ್ರೇಲರ್ ಬಿಡುಗಡೆಯಾಗಿದ್ದು, ನಂದಮೂರಿ ಬಾಲಕೃಷ್ಣ ಮತ್ತು ಬೋಯಪತಿ ಶ್ರೀನು ಕಾಂಬಿನೇಷನ್ ಮತ್ತೆ ತೆರೆಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಕೋವಿಡ್ ಸಮಯದಲ್ಲಿ ‘ಅಖಂಡ’ ಯಶಸ್ವಿಯಾಗಿತ್ತು. ‘ಅಖಂಡ 2’ ಬಗ್ಗೆ ಈಗಾಗಲೇ ಭಾರಿ ನಿರೀಕ್ಷೆಗಳಿದ್ದು, ಚಿತ್ರದ ಟ್ರೇಲರ್ ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಕರ್ನಾಟಕದಲ್ಲಿ ನಡೆದ ಈವೆಂಟ್ ವಿಶೇಷವಾಗಿತ್ತು.

‘ಅಖಂಡ 2’ ಚಿತ್ರದಲ್ಲಿ ಬಾಲಯ್ಯ ಮೋಡಿ; ಇಲ್ಲಿದೆ ಪವರ್​ಫುಲ್ ಟ್ರೇಲರ್
ಬಾಲಯ್ಯ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 22, 2025 | 10:01 AM

Share

ನಂದಮೂರಿ ಬಾಲಕೃಷ್ಣ ಅವರ ‘ಅಖಂಡ’ ಚಿತ್ರವು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಿತ್ತು. ಈ ಸಿನಿಮಾ ಬಿಡುಗಡೆ ಕಂದಿದ್ದು ಕೊವಿಡ್ ಸಂದರ್ಭದಲ್ಲಿ (2021) ಆದರೂ ಚಿತ್ರವು ಒಳ್ಳೆಯ ಗಳಿಕೆ ಮಾಡಿದ್ದನ್ನು ಕಾಣಬಹುದು. ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದೆ. ಅದುವೇ ‘ಅಖಂಡ 2’. ಈ ಸಿನಿಮಾವನ್ನು ಬೋಯಪತಿ ಶ್ರೀನು ನಿರ್ದೇಶಿಸಿದ್ದಾರೆ. ಈ ಹಿಂದೆ ಈ ಇಬ್ಬರ ಕಾಂಬಿನೇಷನ್‌ನಲ್ಲೇ ‘ಅಖಂಡ’ ಬಂದಿತ್ತು. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ.

‘ಅಖಂಡ 2’ ಸಿನಿಮಾದ ಬಗ್ಗೆ ಈಗಾಗಲೇ ಭಾರಿ ಹೈಪ್ ಇದೆ. ಕೆಲವು ತಿಂಗಳುಗಳಿಂದ ಚಿತ್ರೀಕರಣ ನಡೆಸುತ್ತಿರುವ ಈ ಸಿನಿಮಾದ ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಸಿನಿಮಾದಿಂದ ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು, ಹಾಡುಗಳು ಮತ್ತು ಟೀಸರ್ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳನ್ನು ಸೃಷ್ಟಿಸಿವೆ. ಈಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಸಿನಿಮಾದ ಮೇಲೆ ನಿರೀಕ್ಷೆಗಳನ್ನು ಸೃಷ್ಟಿಸಿದೆ.

ಸಾಮಾನ್ಯವಾಗಿ ತೆಲುಗು ಸಿನಿಮಾದ ಈವೆಂಟ್​ಗಳು ಹೈದರಾಬಾದ್​ನಲ್ಲಿ ನಡೆಯುತ್ತವೆ. ಆದರೆ, ಕರ್ನಾಟಕದ ಚಿಂತಾಮಣಿಯಲ್ಲಿ ಈ ಕಾರ್ಯಕ್ರಮವು ನಡೆಯಿತು. ಟ್ರೇಲರ್ ಈವೆಂಟ್​ಗೆ ಕನ್ನಡದ ವರನಟರಾಜ್​ಕುಮಾರ್ ಅವರ ಮಗ ಶಿವರಾಜ್​ಕುಮಾರ್ ಆಗಮಿಸಿದರು. ಟ್ರೇಲರ್ ನೋಡಿ ಎಲ್ಲರೂ ಖುಷಿಪಟ್ಟರು.

‘ಅಖಂಡ 2’ ಟ್ರೇಲರ್​ನಲ್ಲಿ ಬಾಲಯ್ಯ ಅವರ ಲುಕ್ ಅದ್ಭುತವಾಗಿವೆ. ಪ್ರತಿಯೊಂದು ಶಾಟ್ ಕೂಡ ರೋಮಾಂಚನಗೊಳಿಸುತ್ತದೆ. ನಂದಮೂರಿ ಬಾಲಕೃಷ್ಣ ಮತ್ತು ನಿರ್ದೇಶಕ ಬೋಯಪತಿ ಶ್ರೀನು ಅವರ ಕಾಂಬೊ ಮತ್ತೆ ಹಿಟ್ ಆಗುವ ಸೂಚನೆ ಸಿಕ್ಕಿದೆ. ಬಾಲಯ್ಯ ಮತ್ತೊಮ್ಮೆ ಇದರಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಅಲ್ಲದೆ, ಸಂಭಾಷಣೆಗಳು ಸಾಮಾನ್ಯವಲ್ಲ.. ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಈ ಸಂಭಾಷಣೆಗಳಿಂದ ಅದ್ಭುತವಾಗಿ ಪ್ರತಿಕ್ರಿಯಿಸುವುದು ಖಚಿತ. ಬಾಲಯ್ಯ ಅವರು ಸಾಮಾನ್ಯ ಸಿನಿಮಾಗಳನ್ನು ಮಾಡಿದರೆ ಯಾರೂ ನೋಡೋದಿಲ್ಲ. ಅವರು ಏನಿದ್ದರೂ ಅಸಮಾನ್ಯದ್ದನ್ನೇ ಮಾಬಡೇಕು. ಓಡುವ ಟ್ರೇನ್​ ಅನ್ನು ನಿಲ್ಲಿಸೋ ತಾಕತ್ತು ಅವರು ಬಿಟ್ಟು ಇನ್ಯಾರಿಗೆ ಇದೆ ಹೇಳಿ?

ಇದನ್ನೂ ಓದಿ: ವರ್ಷಾಂತ್ಯಕ್ಕೆ ‘ಅಖಂಡ 2’ ಅಬ್ಬರ: ಡಿಸೆಂಬರ್ 5ಕ್ಕೆ ಬಾಲಯ್ಯ ಸಿನಿಮಾ ರಿಲೀಸ್

‘ಅಖಂಡ 2’ ಚಿತ್ರದಲ್ಲಿ ಸಂಯುಕ್ತಾ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಜಾಜಿಕಾಯ ಹಾಡಿನಲ್ಲಿ ಸಂಯುಕ್ತಾ ತಮ್ಮ ಗ್ಲಾಮರ್ ತೋರಿಸಿದ್ದಾರೆ. ಈ ಚಿತ್ರದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದಿ ಪಿನಿಸೆಟ್ಟಿ ಕೂಡ ಪವರ್‌ಫುಲ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ತಮನ್ ಅವರ ಹಿನ್ನೆಲೆ ಸಂಗೀತ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಸದ್ದು ಮಾಡಲಿದೆ. ಈ ಚಿತ್ರಕ್ಕೆ ಹಿಂದಿಯ ‘ಬಜರಂಗಿ’ ಸಿನಿಮಾ ಖ್ಯಾತಿಯ ಹರ್ಷಾಲಿ ಮಲ್ಹೋತ್ರ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್
ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!
ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!