‘ಮಹಾಕಾಳಿ’ ಚಿತ್ರದಲ್ಲಿ ಶುಕ್ರಾಚಾರ್ಯನಾಗಿ ಅಕ್ಷಯ್ ಖನ್ನಾ ಅಬ್ಬರ: ಹೊಸ ಲುಕ್ ವೈರಲ್

ಖ್ಯಾತ ನಟ ಅಕ್ಷಯ್ ಖನ್ನಾ ಅವರಿಗೆ ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಬೇಡಿಕೆ ಇದೆ. ‘ಮಹಾಕಾಳಿ’ ಸಿನಿಮಾದಲ್ಲಿ ಅವರು ಶುಕ್ರಾಚಾರ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಝಲಕ್ ತೋರಿಸಲು ಹೊಸ ಫೋಟೋ ಹಂಚಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಲುಕ್ ನೋಡಿ ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ.

‘ಮಹಾಕಾಳಿ’ ಚಿತ್ರದಲ್ಲಿ ಶುಕ್ರಾಚಾರ್ಯನಾಗಿ ಅಕ್ಷಯ್ ಖನ್ನಾ ಅಬ್ಬರ: ಹೊಸ ಲುಕ್ ವೈರಲ್
Akshaye Khanna

Updated on: Aug 19, 2026 | 7:26 PM

ಬಾಲಿವುಡ್‌ನ ಪ್ರತಿಭಾವಂತ ನಟ ಅಕ್ಷಯ್ ಖನ್ನಾ (Akshaye Khanna) ಅವರು ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ‘ದೃಶ್ಯಂ 2’, ‘ಚಾವಾ’ ಹಾಗೂ ‘ಧುರಂಧರ್’ ಸಿನಿಮಾಗಳ ಯಶಸ್ಸಿನ ನಂತರ ಇದೀಗ ಅವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ ಬಹುನಿರೀಕ್ಷಿತ ‘ಮಹಾಕಾಳಿ’ (Mahakali) ಚಿತ್ರದ ಮೂಲಕ ಅಕ್ಷಯ್ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದು, ಚಿತ್ರದಲ್ಲಿ ಅವರ ಶುಕ್ರಾಚಾರ್ಯನ ಪಾತ್ರದ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಚಿತ್ರತಂಡ ‘24th August – The End Begins’ ಎಂದು ಬರೆದುಕೊಂಡು ಅಕ್ಷಯ್ ಖನ್ನಾ ಅವರ ಖಡಕ್ ಲುಕ್ ಹಂಚಿಕೊಂಡಿದ್ದು, ಆಗಸ್ಟ್ 24ರಂದು ಸಿನಿಮಾದ ವಿಶೇಷ ಗ್ಲಿಂಪ್ಸ್ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಈ ಪೋಸ್ಟ್ ಜೊತೆ ಹಂಚಿಕೊಂಡಿರುವ ಪೋಸ್ಟರ್​ನಲ್ಲಿ ಅಕ್ಷಯ್ ಖನ್ನಾ ಅವರ ಲುಕ್ ಗಮನ ಸೆಳೆಯುತ್ತಿದೆ. ಸಿನಿಮಾ ಬಗ್ಗೆ ಕೌತುಕ ಹೆಚ್ಚುವಂತಾಗಿದೆ.

ಗುರುತಿಸಲಾಗದ ಲುಕ್​ನಲ್ಲಿ ಅಕ್ಷಯ್ ಖನ್ನಾ

ಹಿಂದೂ ಪುರಾಣಗಳಲ್ಲಿ ಅಸುರರ ಗುರುವಾದ ಶುಕ್ರಾಚಾರ್ಯನ ಗಂಭೀರ ಹಾಗೂ ಶಕ್ತಿಶಾಲಿ ಪಾತ್ರವನ್ನು ಅಕ್ಷಯ್ ಖನ್ನಾ ಪೋಷಿಸುತ್ತಿದ್ದಾರೆ. ಹಂಚಿಕೊಳ್ಳಲಾದ ಫೋಟೋದಲ್ಲಿ ಉದ್ದನೆಯ ಗಡ್ಡ, ಸಿಕ್ಕು ಗಂಟಿಕ್ಕಿದ ಕೂಡಲು, ಹಣೆಯ ಮೇಲೆ ಪ್ರಖರವಾದ ತಿಲಕ ಹಾಗೂ ಸಾಂಪ್ರದಾಯಿಕ ಆಭರಣಗಳೊಂದಿಗೆ ಅಕ್ಷಯ್ ಖನ್ನಾ ಅವರು ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಅವರ ಈ ಭೀಕರ ಹಾಗೂ ತೇಜಸ್ವಿ ಲುಕ್ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್

‘ಹನು-ಮಾನ್’ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ನಿರ್ದೇಶಕ ಪ್ರಶಾಂತ್ ವರ್ಮಾ ಭಾರತೀಯ ಪೌರಾಣಿಕ ಕಥೆಗಳನ್ನು ಆಧುನಿಕ ತಂತ್ರಜ್ಞಾನ ಹಾಗೂ ವಿಎಫ್‌ಎಕ್ಸ್‌ ಜೊತೆ ಸಂಯೋಜಿಸಿ ‘ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್’ ಬೆಳೆಸುತ್ತಿದ್ದಾರೆ. ಈ ಸರಣಿಯಲ್ಲಿ ‘ಮಹಾಕಾಳಿ’ ಪ್ರಮುಖ ಚಿತ್ರವಾಗಿದ್ದು, ಆರ್.ಕೆ.ಡಿ. ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಸಿನಿಮಾಗಳ ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ!

ಈ ವರ್ಷ ಅಕ್ಷಯ್ ಖನ್ನಾ ಅವರ ಜನ್ಮದಿನದಂದು ಪ್ರಶಾಂತ್ ವರ್ಮಾ ಶುಭಕೋರುತ್ತಾ, ‘ಅಕ್ಷಯ್ ಖನ್ನಾ ಅವರ ನಟನೆಗೆ ಯಾವುದೇ ಗದ್ದಲದ ಹಂಗಿಲ್ಲ. ಅವರ ಪ್ರಭಾವಶಾಲಿ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅದ್ಭುತ. ಅವರೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ಸಂದ ಗೌರವ’ ಎಂದು ಹೊಗಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us