‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ ಪಡೆಯುವ ಸಂಭಾವನೆ ಇಷ್ಟೊಂದಾ? ಶಾರುಖ್​ ಖಾನ್​ಗಿಂತಲೂ ಹೆಚ್ಚು

Allu Arjun Remunaration: ‘ಪುಷ್ಪ’ ಸಿನಿಮಾದ ಒಟ್ಟಾರೆ ಕಲೆಕ್ಷನ್​ 300 ಕೋಟಿ ರೂಪಾಯಿ ಮೀರಿದೆ. ಈ ಕಾರಣಕ್ಕೆ ಎರಡನೇ ಚಾಪ್ಟರ್ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಬಹುದು ಎಂಬುದು ಚಿತ್ರತಂಡದವರ ಊಹೆ.

‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ ಪಡೆಯುವ ಸಂಭಾವನೆ ಇಷ್ಟೊಂದಾ? ಶಾರುಖ್​ ಖಾನ್​ಗಿಂತಲೂ ಹೆಚ್ಚು
ಅಲ್ಲು ಅರ್ಜುನ್

Updated on: Mar 09, 2023 | 11:59 AM

ಕೆಲ ಸ್ಟಾರ್​​ಗಳು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಅಕ್ಷಯ್ ಕುಮಾರ್, ಶಾರುಖ್ ಖಾನ್, ಸಲ್ಮಾನ್ ಖಾನ್, ದಳಪತಿ ವಿಜಯ್ ಮೊದಲಾದವರು ಈ ಸಾಲಿನಲ್ಲಿದ್ದಾರೆ. ಈಗ ಅಲ್ಲು ಅರ್ಜುನ್ (Allu Arjun) ಅವರು ಇವರೆಲ್ಲರನ್ನೂ ಮೀರಿಸಿದ್ದಾರೆ. ‘ಪುಷ್ಪ 2’ ಚಿತ್ರಕ್ಕಾಗಿ (Pushpa 2 Movie) ಅವರು ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಯನ್ನು ಪೂರ್ತಿಯಾಗಿ ಈಡೇರಿಸೋಕೆ ಮೈತ್ರಿ ಮೂವಿ ಮೇಕರ್ಸ್​ ನಿರಾಕರಿಸಿದೆ ಎಂದು ವರದಿ ಆಗಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

‘ಕೆಜಿಎಫ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಹಿಂದಿಯಲ್ಲಿ ಬಾಚಿದ್ದು 44 ಕೋಟಿ ರೂಪಾಯಿ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ಜೋರಾಗಿಯೇ ಆಗಿತ್ತು. ‘ಕೆಜಿಎಫ್​’ ನೋಡಿದವರಿಗೆ ಎರಡನೇ ಚಾಪ್ಟರ್ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿತ್ತು. ‘ಕೆಜಿಎಫ್ 2’ ಹಿಂದಿಯಲ್ಲಿ 433 ಕೋಟಿ ರೂಪಾಯಿ ಬಾಚಿಕೊಂಡಿತು. ಇನ್ನು ಚಿತ್ರದ ಒಟ್ಟಾರೆ ಬಿಸ್ನೆಸ್​ 1250 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಈ ಕಾರಣಕ್ಕೆ ‘ಪುಷ್ಪ 2’ ತಂಡದವರಿಗೆ ಹೊಸ ಹುಮ್ಮಸ್ಸು ಬಂದಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿದ ದಕ್ಷಿಣದ ಹೀರೋಗಳಲ್ಲಿ ಅಲ್ಲು ಅರ್ಜುನ್​​ ಫಸ್ಟ್​; ಯಶ್​ಗೆ ಎಷ್ಟನೇ ಸ್ಥಾನ?

ಇದನ್ನೂ ಓದಿ
Aamir Khan: ಅಲ್ಲು ಅರ್ಜುನ್​ ಮನೆಗೆ ಬಂದ ಆಮಿರ್ ಖಾನ್​; ಸಡನ್​ ಭೇಟಿಯ ಬಗ್ಗೆ ಮೂಡಿದೆ ಕೌತುಕ
DJ Martin: ಡಿಜೆ ಜೊತೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್: ಯಾರೀ ಸೆಲೆಬ್ರಿಟಿ ಡಿಜೆ ಮಾರ್ಟಿನ್?
ಸದ್ದಿಲ್ಲದೆ ಘೋಷಣೆ ಆಯ್ತು ಅಲ್ಲು ಅರ್ಜುನ್ ಹೊಸ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಕ್ಕೆ ಹಣ ಹೂಡಿದ ಹಿಂದಿ ನಿರ್ಮಾಪಕ

‘ಪುಷ್ಪ’ ಸಿನಿಮಾ ಹಿಂದಿಯಲ್ಲಿ 100 ಕೋಟಿ ರೂಪಾಯಿ ಗಳಿಸಿತ್ತು. ಚಿತ್ರದ ಒಟ್ಟಾರೆ ಕಲೆಕ್ಷನ್​ 300 ಕೋಟಿ ರೂಪಾಯಿ ಮೀರಿದೆ. ಈ ಕಾರಣಕ್ಕೆ ಎರಡನೇ ಚಾಪ್ಟರ್ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಬಹುದು ಎಂಬುದು ಚಿತ್ರತಂಡದವರ ಊಹೆ. ಇದರ ಜೊತೆ ಟಿವಿ ಹಕ್ಕು, ಹಂಚಿಕೆ ಹಕ್ಕು ಹಾಗೂ ಒಟಿಟಿ ಹಕ್ಕಿನಿಂದ ನಿರ್ಮಾಪಕರಿಗೆ ದುಡ್ಡಿನ ಹೊಳೆ ಹರಿಯಲಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಲ್ಲು ಅರ್ಜುನ್ 150 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಂತೆ!

ಒಬ್ಬ ಹೀರೋಗೆ 150 ಕೋಟಿ ರೂಪಾಯಿ ನೀಡೋದು ಎಂದರೆ ಅದು ಸುಲಭದ ಮಾತಲ್ಲ. ಹೀರೋ ಸಂಭಾವನೆ ಬಿಟ್ಟು ಸಿನಿಮಾ ಇತರ ಕಲಾವಿದರಿಗೆ ನೀಡುವ ರೆಮ್ಯುನರೇಷನ್ ಬೇರೆ ಇರುತ್ತದೆ. ಮೇಕಿಂಗ್ ಖರ್ಚು, ನಿರ್ದೇಶಕರ ಸಂಭಾವನೆ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಅಲ್ಲು ಅರ್ಜುನ್​ಗೆ 125 ಕೋಟಿ ರೂಪಾಯಿ ನೀಡಲು ಒಪ್ಪಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: Aamir Khan: ಅಲ್ಲು ಅರ್ಜುನ್​ ಮನೆಗೆ ಬಂದ ಆಮಿರ್ ಖಾನ್​; ಸಡನ್​ ಭೇಟಿಯ ಬಗ್ಗೆ ಮೂಡಿದೆ ಕೌತುಕ

ಅಲ್ಲು ಅರ್ಜುನ್ ಬೇಡಿಕೆ ಇಟ್ಟಷ್ಟು ನಿರ್ಮಾಪಕರು ಕೊಡದೇ ಇದ್ದರೂ ಅವರಿಗೆ ಈಗ ನೀಡಿರುವ ಮೊತ್ತ ಸಣ್ಣದೇನಲ್ಲ. ಸಂಭಾವನೆ ವಿಚಾರದಲ್ಲಿ ಅವರು ಕೆಲ ಸ್ಟಾರ್ ಹೀರೋಗಳನ್ನು ಮೀರಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. ಅಂದಹಾಗೆ, ಅವರ ಸಂಭಾವನೆ ವಿಚಾರದಲ್ಲಿ ಯಾರೊಬ್ಬರೂ ಅಧಿಕೃತವಾಗಿ ಮಾತನಾಡಿಲ್ಲ.

ಇದನ್ನೂ ಓದಿ: ಸದ್ದಿಲ್ಲದೆ ಘೋಷಣೆ ಆಯ್ತು ಅಲ್ಲು ಅರ್ಜುನ್ ಹೊಸ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಕ್ಕೆ ಹಣ ಹೂಡಿದ ಹಿಂದಿ ನಿರ್ಮಾಪಕ

ಅಲ್ಲು ಅರ್ಜುನ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ.  ‘ಪುಷ್ಪ 2’ ಪಾತ್ರವರ್ಗ ಹಿರಿದಾಗಲಿದೆ. ಬಹಳ ಅದ್ದೂರಿಯಾಗಿ ಈ ಚಿತ್ರವನ್ನು ತೆರೆಮೇಲೆ ತರಲು ನಿರ್ದೇಶಕ ಸುಕುಮಾರ್ ಪ್ಲ್ಯಾನ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ