Aamir Khan: ಅಲ್ಲು ಅರ್ಜುನ್​ ಮನೆಗೆ ಬಂದ ಆಮಿರ್ ಖಾನ್​; ಸಡನ್​ ಭೇಟಿಯ ಬಗ್ಗೆ ಮೂಡಿದೆ ಕೌತುಕ

Aamir Khan Meets Allu Arjun: ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಆಮಿರ್ ಖಾನ್ ಅವರನ್ನು ಕರೆದುಕೊಂಡು ಹೋಗಲು ಅಲ್ಲು ಅರ್ಜುನ್​ ಅವರ ಕಾರು ಬಂದಿದೆ. ಈ ಭೇಟಿಯಿಂದಾಗಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

Aamir Khan: ಅಲ್ಲು ಅರ್ಜುನ್​ ಮನೆಗೆ ಬಂದ ಆಮಿರ್ ಖಾನ್​; ಸಡನ್​ ಭೇಟಿಯ ಬಗ್ಗೆ ಮೂಡಿದೆ ಕೌತುಕ
ಅಲ್ಲು ಅರ್ಜುನ್, ಆಮಿರ್ ಖಾನ್
Follow us
ಮದನ್​ ಕುಮಾರ್​
|

Updated on:Mar 07, 2023 | 4:35 PM

ಬಾಲಿವುಡ್​ (Bollywood) ಸೆಲೆಬ್ರಿಟಿಗಳು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸುತ್ತಿದ್ದಾರೆ. ಹಿಂದಿಯ ಸ್ಟಾರ್​ ಕಲಾವಿದರು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೆಲೆಬ್ರಿಟಿಗಳ ಜೊತೆ ಬೆರೆಯುವ ಟ್ರೆಂಡ್​ ಹೆಚ್ಚಾಗಿದೆ. ಬಿ-ಟೌನ್​ ತಾರೆಯರು ದಕ್ಷಿಣದ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುವುದು ಕೂಡ ಹೆಚ್ಚಿದೆ. ಈ ನಡುವೆ ಆಮಿರ್​ ಖಾನ್​ (Aamir Khan) ಅವರು ಅಲ್ಲು ಅರ್ಜುನ್​ (Allu Arjun) ಅವರನ್ನು ಭೇಟಿ ಆಗಿದ್ದಾರೆ. ಈ ಸಡನ್​ ಭೇಟಿಯ ಹಿಂದಿರುವ ಉದ್ದೇಶ ಏನೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ ಅಭಿಮಾನಿಗಳಿಗಂತೂ ಅಚ್ಚರಿ ಮೂಡಿಸಿದೆ.

‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಸೋಲಿನ ಬಳಿಕ ಆಮಿರ್​ ಖಾನ್​ ಅವರು ಬ್ರೇಕ್​ ಪಡೆದುಕೊಂಡಿದ್ದಾರೆ. ಈಗ ಮುಂಬೈನಿಂದ ಹೈದರಾಬಾದ್​ಗೆ ಅವರು ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಅವರನ್ನು ಕರೆದುಕೊಂಡು ಹೋಗಲು ಅಲ್ಲು ಅರ್ಜುನ್​ ಅವರ ಕಾರು ಬಂದಿದೆ. ಸೀದಾ ಅವರು ಅಲ್ಲಿಂದ ಅಲ್ಲು ಅರ್ಜುನ್​ ನಿವಾಸಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಭೇಟಿ ಆಗಿರುವ ಫೋಟೋ ಇನ್ನಷ್ಟೇ ಲಭ್ಯವಾಗಬೇಕಿದೆ.

ಇದನ್ನೂ ಓದಿ: Aamir Khan: ‘ನನಗೆ ಭಾರತ ಇಷ್ಟವಿಲ್ಲ ಅನ್ನೋದು ಸುಳ್ಳು, ನನ್ನ ಸಿನಿಮಾ ಬಹಿಷ್ಕಾರ ಮಾಡಬೇಡಿ ಪ್ಲೀಸ್​’: ಆಮಿರ್​ ಖಾನ್​

ಇದನ್ನೂ ಓದಿ
Image
‘ಸೈಮಾ’ ಅವಾರ್ಡ್ಸ್​ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್​; ವಿಡಿಯೋ ನೋಡಿ
Image
Pushpa 2: ಮತ್ತೆ ಫೀಲ್ಡ್​ಗೆ ಇಳಿದ ಪುಷ್ಪರಾಜ್​; ಇಲ್ಲಿದೆ ರಶ್ಮಿಕಾ, ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​
Image
Allu Arjun: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಲುಕ್​ ಹೀಗಿರುತ್ತಾ? ವೈರಲ್​ ಆಗಿದೆ ಹೊಸ ಫೋಟೋ
Image
ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​

‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಅಲ್ಲು ಅರ್ಜುನ್​ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸುಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಬ್ಯುಸಿ ಸಮಯದಲ್ಲಿ ಅಲ್ಲು ಅರ್ಜುನ್​ ಅವರನ್ನು ಭೇಟಿಯಾಗಲು ಆಮಿರ್​ ಖಾನ್ ಬಂದಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

ಕೆಲವೇ ತಿಂಗಳ ಹಿಂದೆ ತೆಲುಗಿನ ಅಕ್ಕಿನೇನಿ ಕುಟುಂಬದ ಜೊತೆ ಆಮಿರ್​ ಖಾನ್​ ಅವರು ಕಾಣಿಸಿಕೊಂಡಿದ್ದರು. ಅಕ್ಕಿನೇನಿ ನಾಗ ಚೈತನ್ಯ ನಿವಾಸದಲ್ಲಿ ಅವರು ಭೋಜನ ಸವಿದಿದ್ದರು. ಈಗ ಅವರು ಅಲ್ಲು ಅರ್ಜುನ್​ ಮನೆಗೆ ಬಂದಿರುವುದು ಕೌತುಕಕ್ಕೆ ಕಾರಣ ಆಗಿದೆ. ‘ಪುಷ್ಪ 2’ ಸಿನಿಮಾದಲ್ಲಿ ಆಮಿರ್​ ಖಾನ್​ ನಟಿಸುತ್ತಿದ್ದಾರಾ? ಆ ಕಾರಣದಿಂದಲೇ ಅವರು ಹೈದರಾಬಾದ್​ಗೆ ಬಂದಿದ್ದಾರಾ? ಇಂಥ ಹಲವು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿವೆ.

‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಮೇಲೆ ಆಮಿರ್​ ಖಾನ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂದುಕೊಂಡ ರೀತಿಯಲ್ಲಿ ಆ ಸಿನಿಮಾ ಕಲೆಕ್ಷನ್​ ಮಾಡಲಿಲ್ಲ. ಹಾಕಿದ ಬಂಡವಾಳವೂ ವಾಪಸ್​ ಬರಲಿಲ್ಲ. ಅದು ಆಮಿರ್​ ಖಾನ್​ಗೆ ದೊಡ್ಡ ಪೆಟ್ಟು ನೀಡಿತು. ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ವಿಳಂಬ ಆಗುತ್ತಿದೆ. ಅವರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:35 pm, Tue, 7 March 23

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ