DJ Martin: ಡಿಜೆ ಜೊತೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್: ಯಾರೀ ಸೆಲೆಬ್ರಿಟಿ ಡಿಜೆ ಮಾರ್ಟಿನ್?

ಪುಷ್ಪ 2 ಚಿತ್ರೀಕರಣ ಶುರುವಾದ ಬಳಿಕ ಹೊರಗೆಲ್ಲೂ ಕಾಣಿಸಿಕೊಳ್ಳದ ಅಲ್ಲು ಅರ್ಜುನ್ ಡಿಜೆ ಮಾರ್ಟಿನ್​ನ ಕಾನ್ಸರ್ಟ್ ನಲ್ಲಿ ಭಾಗವಹಿಸಿದ್ದಾರೆ. ಯಾರು ಈ ಡಿಜೆ ಮಾರ್ಟಿನ್ ಗ್ಯಾರಿಕ್ಸ್

DJ Martin: ಡಿಜೆ ಜೊತೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್: ಯಾರೀ ಸೆಲೆಬ್ರಿಟಿ ಡಿಜೆ ಮಾರ್ಟಿನ್?
ಅಲ್ಲು ಅರ್ಜುನ್-ಡಿಜೆ ಮಾರ್ಟಿನ್
Follow us
ಮಂಜುನಾಥ ಸಿ.
|

Updated on: Mar 05, 2023 | 9:11 PM

ಪುಷ್ಪ‘ (Pushpa) ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ (Allu Arjun) ರೇಂಜ್ ಬದಲಾಗಿದೆ. ಈಗ ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಪ್ರಾರಂಭವಾದ ಬಳಿಕವಂತೂ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಶಾರುಖ್ ಖಾನ್​ರ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶವನ್ನೂ ನಿರಾಕರಿಸಿದ್ದಾರೆ. ಆದರೆ ಹಠಾತ್ತನೇ ವಿದೇಶಿ ಡಿಜೆ ಒಬ್ಬರ ಕಾನ್ಸರ್ಟ್​ನಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲ ಅವರೊಟ್ಟಿಗೆ ಹೆಜ್ಜೆ ಸಹ ಹಾಕಿದ್ದಾರೆ.

ಡಿಕೆ ಮಾರ್ಟಿನ್ ಗಾರಿಕ್ಸ್ (DJ Martin Garrix) ಹೈದರಾಬಾದ್​ನಲ್ಲಿ ಅದ್ಧೂರಿ ಕಾನ್ಸರ್ಟ್ ನಡೆಸಿದ್ದರು. ಶೋಗೆ ಕಿಕ್ಕಿರಿದು ಜನ ಸೇರಿ ಸಂಗೀತವನ್ನು ಎಂಜಾಯ್ ಮಾಡಿದ್ದಾರೆ. ಶೋ ನಡೆಯುವಾಗ ಧುತ್ತನೆ ವೇದಿಕೆ ಏರಿದ ನಟ ಅಲ್ಲು ಅರ್ಜುನ್ ತಮ್ಮದೇ ‘ಪುಷ್ಪ’ ಸಿನಿಮಾದ ‘ಊ ಅಂಟಾವ ಊ ಹು ಅಂಟಾವ’ ಹಾಡಿಗೆ ಲಘುವಾಗಿ ಹೆಜ್ಜೆ ಹಾಕಿದರು. ಅದನ್ನು ಡಿಜೆ ಮಾರ್ಟಿನ್ ಮೊಬೈಲ್​ನಲ್ಲಿ ವಿಡಿಯೋ ಮಾಡಿದರು. ಬಳಿಕ ಇಬ್ಬರೂ ಫೋಟೊಕ್ಕೆ ಫೋಸು ಸಹ ನೀಡಿದರು.

ಇತ್ತೀಚೆಗೆ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳದ ಅಲ್ಲು ಅರ್ಜುನ್ ಡಿಜೆಯ ಸಂಗೀತ ಕಾರ್ಯಕ್ರಮದ ವೇದಿಕೆ ಏರಿದ್ದು ಏಕೆ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅಲ್ಲು ಅರ್ಜುನ್ ವೇದಿಕೆ ಹಂಚಿಕೊಂಡ ಡಿಜೆ ಮಾರ್ಟಿನ್ ಸಾಮಾನ್ಯ ಡಿಜೆಯಲ್ಲ. ವಿಶ್ವದ ಟಾಪ್ ಡಿಜೆಗಳಲ್ಲಿ ಒಬ್ಬರು.

ಡಿಜೆ ಮಾರ್ಟಿನ್ ಗಾರಿಕ್ಸ್ ವಿಶ್ವದ ಟಾಪ್ ಡಿಜೆ ಆಗಿರುವ ಜೊತೆಗೆ ಒಳ್ಳೆಯ ಸಂಗೀತಗಾರರೂ ಹೌದು. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಮಾರ್ಟಿನ್ ಹೊಂದಿದ್ದಾರೆ. ಇದೀಗ ಭಾರತದಲ್ಲಿ ಟೂರ್ ಮಾಡುತ್ತಿದ್ದಾರೆ.

ಅನಿಮಲ್ ಹಾಡಿನ ಮೂಲಕ ಜನಪ್ರಿಯತೆ ಗಳಿಸಿದ ಡಿಜೆ ಮಾರ್ಟಿನ್ 100 ಟಾಪ್ ಡಿಜೆಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದ ಅತ್ಯಂತ ಯುವ ಡಿಜೆ ಎಂಬ ಖ್ಯಾತಿ ಗಳಿಸಿದವರು. ಚಳಿಗಾಲದ ಒಲಿಂಪಿಕ್ಸ್ ಸೇರಿದಂತೆ ಇನ್ನೂ ಹಲವು ವಿಶ್ವ ಪ್ರಮುಖ ಸಮಾರಂಭಗಳಲ್ಲಿ ಇವರು ಕಾರ್ಯಕ್ರಮ ನೀಡಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆವ ಹಾಗೂ ಸಂಪಾದನೆ ಮಾಡುವ ಡಿಜೆಗಳಲ್ಲಿ ಪ್ರಮುಖರು ಮಾರ್ಟಿನ್ ಗಾರೆಕ್ಸ್. ಇವರ ನೆಟ್​ವರ್ತ್​ ಬಾಲಿವುಡ್​ನ ಸಲ್ಮಾನ್ ಖಾನ್​ಗಿಂತಲೂ ಹೆಚ್ಚಿದೆ. ವಿದೇಶಿ ಟಾಪ್ ಡಿಜೆ ಆಗಿರುವ ಕಾರಣಕ್ಕೆ ನಟ ಅಲ್ಲು ಅರ್ಜುನ್ ಅವರೊಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಹೈದರಾಬಾದ್​ನ ಕಾರ್ಯಕ್ರಮದಲ್ಲಿ ಡಿಜೆ ಮಾರ್ಟಿನ್ ತೆಲುಗಿನ ಕೆಲವು ಹಾಡುಗಳನ್ನು ಸಹ ರೀಮಿಕ್ಸ್ ಮಾಡಿದ್ದಾರೆ. ಅದರಲ್ಲಿ ಪುಷ್ಪ ಸಿನಿಮಾದ ಊ ಅಂಟಾವ ಹಾಡು ಸಹ ಒಂದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ