ಯಶ್ ಥಿಯರಿಯನ್ನೇ ಫಾಲೋ ಮಾಡಿದ ಅಲ್ಲು ಅರ್ಜುನ್; ಏನಿದರ ಸೀಕ್ರೆಟ್?

ಯಶ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರಕ್ಕಾಗಿ ಸುಮಾರು 6-7 ವರ್ಷ ಮುಡಿಪಿಟ್ಟಿದ್ದಾರೆ. ಅದರಲ್ಲೂ ‘ಕೆಜಿಎಫ್’ ಸಿನಿಮಾ ಹಿಟ್ ಆದ ನಂತರದಲ್ಲಿ ಅವರ ಸಂಪೂರ್ಣ ಗಮನ ‘ಕೆಜಿಎಫ್ 2’ ಬಗ್ಗೆ ಇತ್ತು. ಹೀಗಾಗಿ, ಅವರು ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ.

ಯಶ್ ಥಿಯರಿಯನ್ನೇ ಫಾಲೋ ಮಾಡಿದ ಅಲ್ಲು ಅರ್ಜುನ್; ಏನಿದರ ಸೀಕ್ರೆಟ್?
ಅಲ್ಲು ಅರ್ಜನ್-ಯಶ್
Updated By: ರಾಜೇಶ್ ದುಗ್ಗುಮನೆ

Updated on: Jun 18, 2022 | 1:35 PM

ಯಶ್ ಅವರು (Yash) ‘ಕೆಜಿಎಫ್’ ಸರಣಿಯ ಸಿನಿಮಾದಿಂದ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದಾರೆ. ಅವರಿಗೆ ಹಲವು ಕಡೆಗಳಿಂದ ಆಫರ್​ಗಳು ಬರುತ್ತಿವೆ. ಬಾಲಿವುಡ್ ಒಂದರಲ್ಲೇ 430+ ಕೋಟಿ ಗಳಿಸಿದ್ದು ಈ ಚಿತ್ರದ ಹೆಚ್ಚುಗಾರಿಕೆ. ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ರೀತಿಯ ಊಹೆಗಳು ಹುಟ್ಟಿಕೊಂಡಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈಗ ಯಶ್ ಅವರ ಥಿಯರಿಯನ್ನೇ ಅಲ್ಲು ಅರ್ಜುನ್ (Allu Arjun) ಕೂಡ ಫಾಲೋ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಯಶ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರಕ್ಕಾಗಿ ಸುಮಾರು 6-7 ವರ್ಷ ಮುಡಿಪಿಟ್ಟಿದ್ದಾರೆ. ಅದರಲ್ಲೂ ‘ಕೆಜಿಎಫ್’ ಸಿನಿಮಾ ಹಿಟ್ ಆದ ನಂತರದಲ್ಲಿ ಅವರ ಸಂಪೂರ್ಣ ಗಮನ ‘ಕೆಜಿಎಫ್ 2’ ಬಗ್ಗೆ ಇತ್ತು. ಹೀಗಾಗಿ, ಅವರು ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಅಲ್ಲು ಅರ್ಜುನ್ ಕೂಡ ಇದೇ ಥಿಯರಿ ಫಾಲೋ ಮಾಡುತ್ತಿದ್ದಾರೆ.

ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾ ಹಿಟ್ ಆಗಿದೆ. ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 100 ಕೋಟಿ ಗಳಿಸಿದ್ದು, ಒಟ್ಟಾರೆ ಗಳಿಕೆ 300 ಕೋಟಿ ರೂಪಾಯಿ ದಾಟಿತ್ತು. ಹೀಗಾಗಿ, ‘ಪುಷ್ಪ 2’ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚುವಂತಾಗಿದೆ. ಹೀಗಾಗಿ, ಅಲ್ಲು ಅರ್ಜುನ್ ಯಾವುದೇ ಸಿನಿಮಾ ಒಪ್ಪಿಕೊಳ್ಳದೆ, ಸಂಪೂರ್ಣ ಸಮಯವನ್ನು ‘ಪುಷ್ಪ 2’ಗೆ ಮೀಸಲಿಡಲು ನಿರ್ಧರಿಸಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ
ಸ್ನೇಹಾ ರೆಡ್ಡಿ ಜತೆ ಲಂಡನ್​ನಲ್ಲಿ ಅಲ್ಲು ಅರ್ಜುನ್ ಹಾಲಿಡೇ; ಹೇಗಿದೆ ನೋಡಿ ಸ್ಟೈಲಿಶ್ ಸ್ಟಾರ್ ಮಕ್ಕಳ ಪೋಸ್
‘ಪುಷ್ಪ 2’ ಚಿತ್ರದ ಬಗ್ಗೆ ಮೂಡಿದೆ ಎರಡು ಅನುಮಾನ; ಇದಕ್ಕೆಲ್ಲ ಕಾರಣ ಅಲ್ಲು ಅರ್ಜುನ್​ ಹೊಸ ಲುಕ್​
ತಮಿಳಿಗೆ ಕಾಲಿಟ್ಟ ‘ಆಹಾ’ ಒಟಿಟಿ; ವಿಶ್ ಮಾಡಿದ ನಟ ಅಲ್ಲು ಅರ್ಜುನ್, ಸಿಎಂ ಸ್ಟಾಲಿನ್
ವಿದೇಶದಲ್ಲಿ ಅಲ್ಲು ಅರ್ಜುನ್ ಬರ್ತ್​​ಡೇ ಸೆಲಬ್ರೇಷನ್; ಇಲ್ಲಿದೆ ಫೋಟೋ ಗ್ಯಾಲರಿ

ಈ ಚಿತ್ರದ ಮಧ್ಯೆ ಬೇರೆ ಸಿನಿಮಾ ಒಪ್ಪಿಕೊಂಡರೆ ಆ ತಂಡಕ್ಕೂ ಡೇಟ್ಸ್ ಕೊಡಬೇಕಾಗುತ್ತದೆ. ಇದಲ್ಲದೆ, ‘ಪುಷ್ಪ 2’ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಬೇರೆ ರೀತಿಯ ಗೆಟಪ್​ನಲ್ಲಿ ಬರಲಿದ್ದಾರೆ. ಮತ್ತೊಂದು ಸಿನಿಮಾ ಒಪ್ಪಿಕೊಂಡರೆ ಆ ಚಿತ್ರಕ್ಕಾಗಿ ಗೆಟಪ್​ ಬದಲಾಯಿಸಬೇಕಾಗುತ್ತದೆ. ಈ ಎಲ್ಲಾ ಕಾರಣಕ್ಕೆ ಅಲ್ಲು ಅರ್ಜುನ್​ ಕೆಲ ಪ್ರಾಜೆಕ್ಟ್​ಗಳನ್ನು ರಿಜೆಕ್ಟ್ ಮಾಡಿದ್ದಾರೆ. ಯಶ್ ಕೂಡ ಇದೇ ರೀತಿ ಮಾಡಿದ್ದರು.

ಇದನ್ನೂ ಓದಿ: ‘ಕೆಜಿಎಫ್ 2’ ಸಿನಿಮಾ ನೋಡಿ ಭೇಷ್ ಎಂದ ಅಲ್ಲು ಅರ್ಜುನ್; ಯಶ್ ಪರ್ಫಾರ್ಮೆನ್ಸ್​​ಗೆ ಸ್ಟೈಲಿಶ್ ಸ್ಟಾರ್ ಫಿದಾ

‘ಪುಷ್ಪ 2’ ಚಿತ್ರದಲ್ಲಿ ಬರುವ ಕೆಲ ಹೊಸ ಪಾತ್ರಗಳಿಗೆ ಸದ್ಯ ಆಡಿಷನ್ ನಡೆಯುತ್ತಿದೆ. ಮುಂದಿನ ತಿಂಗಳು ಈ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. 2023ರಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:35 pm, Sat, 18 June 22