ಸೋಪ್ ಮಾರಿ ಜೀವನ ಮಾಡುತ್ತಿದ್ದಾರೆ ನಟಿ ಲಕ್ಷ್ಮೀ ಮಗಳು ಐಶ್ವರ್ಯಾ: ಟಾಯ್ಲೆಟ್ ತೊಳೆಯಲೂ ರೆಡಿ ಎಂದ ನಟಿ
ಬಹುಭಾಷ ನಟಿ ಲಕ್ಷ್ಮೀ ಅವರಿಗೆ ಐಶ್ವರ್ಯಾ ಹೆಸರಿನ ಮಗಳು ಇದ್ದಾರೆ. ಲಕ್ಷ್ಮೀ ಅವರು 1969ರಲ್ಲಿ ಭಾಸ್ಕರ್ ಅವರನ್ನು ಮದುವೆ ಆದರು. ಇವರ ಮಗಳೇ ಐಶ್ವರ್ಯಾ.
ಚಿತ್ರರಂಗದಲ್ಲಿ (Film Industry) ಏಳುಬೀಳುಗಳು ಸಾಮಾನ್ಯ. ಅದೆಷ್ಟೇ ದೊಡ್ಡ ಸ್ಟಾರ್ ಆದರೂ ಅವರಿಗೆ ಒಂದಲ್ಲಾ ಒಂದು ಕಡೆ ಸೋಲು ಎದುರಾಗುತ್ತದೆ. ಸತತ ಫ್ಲಾಪ್ನಿಂದ ಅಭಿಮಾನಿ ಬಳಗ ಚಿಕ್ಕದಾಗುತ್ತದೆ. ಅವಕಾಶ ಇಲ್ಲದೆ ಕಲಾವಿದರು ಬೇರೆ ಉದ್ಯೋಗ ಮಾಡಿ ಜೀವನ ನಡೆಸುತ್ತಿರುವ ಉದಾಹರಣೆ ಸಾಕಷ್ಟಿದೆ. ಈಗ ಇದಕ್ಕೆ ಹೊಸ ಸೇರ್ಪಡೆ ಹಿರಿಯ ನಟಿ ಲಕ್ಷ್ಮೀ ಅವರ ಮಗಳು ಐಶ್ವರ್ಯಾ ಭಾಸ್ಕರ್ (Aishwarya Bhaskar ) . ಅವರಿಗೆ ಅವಕಾಶಗಳು ಬರುತ್ತಿಲ್ಲ. ಹೀಗಾಗಿ, ಜೀವನ ನಡೆಸುವುದು ಕಷ್ಟವಾಗಿದೆ. ಇದಕ್ಕಾಗಿ ಅವರು ಅನಿವಾರ್ಯವಾಗಿ ಸೋಪ್ ಮಾರುವ ಕೆಲಸಕ್ಕೆ ಇಳಿದಿದ್ದಾರೆ.
ಬಹುಭಾಷ ನಟಿ ಲಕ್ಷ್ಮೀ ಅವರಿಗೆ ಐಶ್ವರ್ಯಾ ಹೆಸರಿನ ಮಗಳು ಇದ್ದಾರೆ. ಲಕ್ಷ್ಮೀ ಅವರು 1969ರಲ್ಲಿ ಭಾಸ್ಕರ್ ಅವರನ್ನು ಮದುವೆ ಆದರು. ಇವರ ಮಗಳೇ ಐಶ್ವರ್ಯಾ. ಭಾಸ್ಕರ್ ಹಾಗೂ ಲಕ್ಷ್ಮೀ ಇಬ್ಬರೂ 1974ರಲ್ಲಿ ಬೇರೆ ಆದರು. ಐಶ್ವರ್ಯಾ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಈಗ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಗಲಾಟ ತಮಿಳ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯಾ, ‘ನನಗೆ ಈಗ ಚಿತ್ರರಂಗದಲ್ಲಿ ಮೊದಲಿನ ಹಾಗೆ ಆಫರ್ಗಳು ಇಲ್ಲ. ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೇನೆ. ಸೋಪ್ ಮಾರಿ ಜೀವನ ಮಾಡುತ್ತಿದ್ದೇನೆ. ಶೂಟಿಂಗ್ ಇದ್ದಾಗ ಶೂಟಿಂಗ್ ಹೋಗುತ್ತೇನೆ. ಅವಕಾಶಗಳು ಬರುತ್ತಿಲ್ಲ ಹೀಗಾಗಿ ಜೀವನ ನಡೆಸಲು ಸೇಲ್ಸ್ಗರ್ಲ್ ಆಗಿದ್ದೀನೆ. ಒಂದೊಮ್ಮೆ ಟಾಯ್ಲೆಟ್ ಕ್ಲೀನ್ ಮಾಡುವ ಪರಿಸ್ಥಿತಿ ಬಂದರೂ ನಾನು ಮಾಡುತ್ತೇನೆ. ಅದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನೆ ಮಾಡುತ್ತಾರೆ ಅವರು.
‘ನಮ್ಮ ಮನೆಗೆ ಬಂದರೆ ಫರ್ನಿಚರ್ ಕಾಣಲ್ಲ, ಟಿವಿ ಕಾಣಲ್ಲ. ನಾನು ಒಂದೇ ಹೊತ್ತು ಊಟ ಮಾಡುತ್ತಿದ್ದೇನೆ. ನನ್ನ ಲೈಫ್ ಬದಲಾಗಬೇಕು ಎಂದರೆ ಒಂದೊ ದೊಡ್ಡ ಸೀರಿಯಲ್ ಆಫರ್ ಸಿಗಬೇಕು. ನಾನು ಎಲ್ಲರ ಎದುರು ನಗುತ್ತಿರುತ್ತೇನೆ. ಮನೆಗೆ ಹೋಗಿ ಅಳುತ್ತೇನೆ’ ಎಂದಿದ್ದಾರೆ ಅವರು.
1994ರಲ್ಲಿ ತನ್ವೀರ್ ಅಹಮ್ಮದ್ ಅವರನ್ನು ಪ್ರೀತಿಸಿ ಐಶ್ವರ್ಯಾ ಮದುವೆ ಆಗಿದ್ದರು. ಆದರೆ, ಅವರ ದಾಂಪತ್ಯ ಕೇವಲ 3 ವರ್ಷಗಳಲ್ಲಿ ಅಂತ್ಯವಾಯಿತು. ಈ ಬಗ್ಗೆಯೂ ಐಶ್ವರ್ಯಾ ಸಂದರ್ಶನದಲ್ಲಿ ಓಪನ್ ಆಗಿಯೇ ಮಾತನಾಡಿದ್ದಾರೆ. ಕನ್ನಡದ ‘ಹೊಸ ಕಾವ್ಯ’ ಸೇರಿ ತಮಿಳು, ತೆಲುಗು ಸಿನಿಮಾಗಳಲ್ಲಿ ಐಶ್ವರ್ಯಾ ನಟಿಸಿದ್ದಾರೆ. ಧಾರಾವಾಹಿಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:23 pm, Sat, 18 June 22