ತಮಿಳಿಗೆ ಕಾಲಿಟ್ಟ ‘ಆಹಾ’ ಒಟಿಟಿ; ವಿಶ್ ಮಾಡಿದ ನಟ ಅಲ್ಲು ಅರ್ಜುನ್, ಸಿಎಂ ಸ್ಟಾಲಿನ್

‘ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ತಮಿಳು ಹೊಸ ವರ್ಷದ ಶುಭಾಶಯ. ‘ಆಹಾ’ ತಂಡಕ್ಕೆ ಶುಭಾಶಯ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಕಂಗ್ರಾಜ್ಯುಲೇಷನ್’ ಎಂದಿದ್ದಾರೆ ಅಲ್ಲು ಅರ್ಜುನ್​.

ತಮಿಳಿಗೆ ಕಾಲಿಟ್ಟ ‘ಆಹಾ’ ಒಟಿಟಿ; ವಿಶ್ ಮಾಡಿದ ನಟ ಅಲ್ಲು ಅರ್ಜುನ್, ಸಿಎಂ ಸ್ಟಾಲಿನ್
ಆಹಾಗೆ ಅಲ್ಲು ಅರ್ಜುನ್ ವಿಶ್
Follow us
TV9 Web
| Updated By: ಆಯೇಷಾ ಬಾನು

Updated on:Apr 14, 2022 | 10:17 PM

ಅಲ್ಲು ಅರ್ಜುನ್ (Allu Arjun) ತಂದೆ ಅಲ್ಲು ಅರವಿಂದ್ (Allu Aravind) ಹಾಗೂ ರಾಮೇಶ್ವರ್ ರಾವ್ ಅವರು ‘ಆಹಾ’ ಒಟಿಟಿಯನ್ನು ತೆಲುಗಿನಲ್ಲಿ ಆರಂಭಿಸಿದ್ದರು. ಈಗ ಅದು ತಮಿಳಿಗೂ ವಿಸ್ತರಣೆ ಆಗಿದೆ. ಹಲವು ತಿಂಗಳ ಕಾಲ ತಮಿಳು ‘ಆಹಾ’ಗಾಗಿ ಕೆಲಸಗಳು ನಡೆದಿದ್ದವು. ಇಂದು (ಏಪ್ರಿಲ್ 14) ಚೆನ್ನೈನಲ್ಲಿ ಅದ್ದೂರಿಯಾಗಿ ಇದರ ಲಾಂಚ್​ ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಮಿಳು ‘ಆಹಾ’ವನ್ನು ಇಂದು ರಾತ್ರಿ ಲೋಕಾರ್ಪಣೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮುಂದಿನ ದಿನಗಳಲ್ಲಿ ಹಲವು ತಮಿಳು ಸಿನಿಮಾಗಳು ಈ ಒಟಿಟಿ ಮೂಲಕ ಪ್ರಸಾರ ಕಾಣಲಿದೆ.

ಅಲ್ಲು ಅರ್ಜುನ್ ಅವರು ಈ ತಂಡಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಅಲ್ಲದೆ, ಮುಂದಿನ ಪಯಣಕ್ಕೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ತಮಿಳು ಹೊಸ ವರ್ಷದ ಶುಭಾಶಯ. ‘ಆಹಾ’ ತಮಿಳು ತಂಡಕ್ಕೆ ಶುಭಾಶಯ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಧನ್ಯವಾದ’ ಎಂದಿದ್ದಾರೆ ಅಲ್ಲು ಅರ್ಜುನ್​.

‘ಆಹಾ ತಮಿಳು ವರ್ಷನ್ ಅನಾವರಣ ಮಾಡಲು ನಾವು ಉತ್ಸುಕರಾಗಿದ್ದೇವೆ. ಇಲ್ಲಿ ವೆಬ್ ಸರಣಿಗಳು ಮತ್ತು ಸಿನಿಮಾಗಳ ಸಂಗ್ರಹ ಇರಲಿದೆ. ತಮಿಳು ವರ್ಷನ್​ನಲ್ಲಿ ನಿರ್ದೇಶಕ ವೆಟ್ರಿಮಾರನ್‌ ಅವರ ‘ಪೆಟ್ಟಕಾಳೈ’, ಪ್ರಿಯಾಮಣಿ ಅವರ ‘ಭಾಮಾಕಲಾಪಂ’, ‘ಅಮ್ಮುಚಿ 2’, ‘ರಮಣಿ vs ರಮಣಿ 3’ ಮುಂತಾದ ಚಿತ್ರಗಳು ಇದರಲ್ಲಿವೆ. ಥಿಯೇಟರ್​ನಲ್ಲಿ ರಿಲೀಸ್ ಆದ ಹಲವು ಸಿನಿಮಾಗಳ ಒಟಿಟಿ ಹಕ್ಕು ತಮ್ಮ ಬಳಿ ಇವೆ. ನಮ್ಮ ಒಟಿಟಿಯಿಂದ ಹಲವು ಪ್ರತಿಭೆಗಳು ಮುನ್ನೆಲೆಗೆ ಬರುತ್ತಾರೆ’ ಎಂದಿದ್ದಾರೆ ಅಲ್ಲು ಅರವಿಂದ್.

‘ಆಹಾಗೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಲವು ಸಿನಿಮಾಗಳನ್ನು ಜನರಿಗೆ ತಲುಪಿಸಲು ಯಶಸ್ವಿ ಆಗಿದ್ದೇವೆ. ಆಹಾ ಈಗಷ್ಟೇ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದೆ. ಶೀಘ್ರದಲ್ಲೇ ಜಾಗತಿಕವಾಗಿ ತಮಿಳು ಭಾಷೆಯವರಿಗೆ ಮನರಂಜನೆ ನೀಡಲು ನಮ್ಮ ವೇದಿಕೆ ಮುಂದಿರುತ್ತದೆ ಎಂದು ನಾವು ಭರವಸೆ ನೀಡುತ್ತೇವೆ’ ಎಂದಿದ್ದಾರೆ ಆಹಾ ಸಿಇಒ ಅಜಿತ್ ಠಾಕೂರ್.

ಇದನ್ನೂ ಓದಿ:  ವಿಶ್ವದಾದ್ಯಂತ ಬಿಡುಗಡೆಯಾಗಿ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ಕೆಜಿಎಫ್ ನಲ್ಲೇ ಬಿಡುಗಡೆಯಾಗಿಲ್ಲ, ಯಾಕೆ ಗೊತ್ತಾ?

ತಮಿಳುನಾಡಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ಸಮಾನತೆಯ ದಿನವನ್ನಾಗಿ ಆಚರಿಸಲಾಗುವುದು: ಎಂಕೆ ಸ್ಟಾಲಿನ್

Published On - 10:04 pm, Thu, 14 April 22

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು