
ಅಲ್ಲು ಅರ್ಜುನ್ (Allu Arjun) ಮಗಳು ಅಲ್ಲು ಅರ್ಹಾ ಈಗಿನಿಂದಲೇ ಖ್ಯಾತಿ ಪಡೆದುಕೊಳ್ಳುತ್ತಿದ್ದಾಳೆ. ಸ್ಟಾರ್ ನಟನ ಮಗಳು ಎನ್ನುವ ಕಾರಣಕ್ಕೆ ಅಭಿಮಾನಿಗಳ ಗಮನ ಅವರ ಮೇಲಿದೆ. ಅಲ್ಲು ಅರ್ಜುನ್ ಕೂಡ ಮಗಳ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ. ಅವಳ ಫೋಟೋಗಳನ್ನು ಅಲ್ಲು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಮಗಳು ಅರ್ಹ ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅವಳ ಯೋಗ ನೋಡಿ ಸ್ವತಃ ಅವರೇ ಫ್ಯಾನ್ ಆಗಿದ್ದಾರೆ. ಅಭಿಮಾನಿಗಳ ಪೇಜ್ನಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.
ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅರ್ಹಾ ಯೋಗ ಮಾಡುತ್ತಿದ್ದರೆ, ಅಲ್ಲು ಅಲ್ಲೇ ಕುಳಿತು ಇದನ್ನು ನೋಡುತ್ತಿದ್ದಾರೆ. ಮಗಳ ಯೋಗ ನೋಡಿ ಅಲ್ಲು ಅರ್ಜುನ್ ಫ್ಯಾನ್ ಆಗಿದ್ದಾರೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಅಲ್ಲು ಅರ್ಜುನ್ ಮಗಳು; ಸಮಂತಾ ಜೊತೆ ಅಲ್ಲು ಅರ್ಹಾ ನಟನೆ
ಸ್ಟಾರ್ ನಟರ ಮಕ್ಕಳು ಸಣ್ಣ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಅವಕಾಶ ಪಡೆದುಕೊಳ್ಳುತ್ತಾರೆ. ಬಾಲ ಕಲಾವಿದರಾಗಿ ಗಮನ ಸೆಳೆದ ನಂತರ ಹೀರೋ/ಹೀರೋಯಿನ್ ಆಗಿ ಮಿಂಚುತ್ತಾರೆ. ಟಾಲಿವುಡ್ನ ಖ್ಯಾತ ನಟ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕೂಡ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾಳೆ. ಏಪ್ರಿಲ್ 14ರಂದು ರಿಲೀಸ್ ಆಗುತ್ತಿರುವ ಸಮಂತಾ ನಟನೆಯ ‘ಶಾಕುಂತಲಂ’ ಚಿತ್ರದ ಮೂಲಕ ಅಲ್ಲು ಅರ್ಹಾ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾಳೆ.
ಇದನ್ನೂ ಓದಿ: Samantha: ‘ಶಾಕುಂತಲಂ’ ಪ್ರಚಾರದಲ್ಲಿ ಸಮಂತಾ ಬ್ಯುಸಿ; ಮೊದಲಿನಂತೆ ಆ್ಯಕ್ಟೀವ್ ಆದ ಟಾಲಿವುಡ್ ಸುಂದರಿ
‘ಶಾಕುಂತಲಂ’ ಸಿನಿಮಾದಲ್ಲಿ ಶಾಕುಂತಲೆ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಶಾಕುಂತಲೆ ಮಗಳ ಪಾತ್ರದಲ್ಲಿ ಅಲ್ಲು ಅರ್ಹಾ ನಟಿಸುತ್ತಿದ್ದಾಳೆ ಎನ್ನಲಾಗಿದೆ. ಅಲ್ಲು ಅರ್ಹಾ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಟ್ರೇಲರ್ ನೋಡಿದ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ಜುಲೈ 2021ರಲ್ಲಿ ಅಲ್ಲು ಅರ್ಹಾ ಸಿನಿಮಾದಲ್ಲಿ ನಟಿಸುವ ಬಗ್ಗೆ ಅಲ್ಲು ಅರ್ಜುನ್ ಘೋಷಣೆ ಮಾಡಿದರು. ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಕಲಾವಿದೆಯಾಗಿ ಅರ್ಹಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಎಂದು ಅಲ್ಲು ಅರ್ಜುನ್ ಹೆಮ್ಮೆ ವ್ಯಕ್ತಪಡಿಸಿದ್ದರು. ‘ಶಾಕುಂತಲಂ’ ಸಿನಿಮಾಗೆ ಗುಣಶೇಖರ್ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ