ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರು ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ತೆಲುಗು ಮಾತ್ರವಲ್ಲದೆ, ಪರಭಾಷೆಯಲ್ಲೂ ಅವರು ಖ್ಯಾತಿ ಹೊಂದಿದ್ದಾರೆ. ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ (Allu Arha) ಕೂಡ ಸಾಕಷ್ಟು ಫೇಮಸ್ ಆಗಿದ್ದಾಳೆ. ಅವಳಿಗೆ ಇಂದು (ನವೆಂಬರ್ 21) ಬರ್ತ್ಡೇ ಸಂಭ್ರಮ. ಆಕೆ ಆರನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ವಿಶೇಷ ದಿನದಂದು ಅಲ್ಲು ಅರ್ಜುನ್ ಅವರು ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಫ್ಯಾನ್ಸ್ಗೆ ನೆಚ್ಚಿನ ಸೆಲೆಬ್ರಿಟಿ ಮೇಲೆ ಎಷ್ಟು ಗಮನ ಇರುತ್ತದೆಯೋ ಅಷ್ಟೇ ಗಮನ ಅವರ ಕುಟುಂಬದವರ ಮೇಲೂ ಇರುತ್ತದೆ. ಸೆಲೆಬ್ರಿಟಿಗಳ ಮಕ್ಕಳು ಮಾಡುವ ತುಂಟಾಟ ಅನೇಕರಿಗೆ ಇಷ್ಟವಾಗುತ್ತದೆ. ಈ ಕಾರಣಕ್ಕೆ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಗ ಮಕ್ಕಳ ವಿಡಿಯೋ ಹಾಗೂ ಫೋಟೋ ಹಂಚಿಕೊಳ್ಳುತ್ತಾರೆ. ಅಲ್ಲು ಅರ್ಜುನ್ ಕೂಡ ಮಗಳ ಒಂದು ಅಪರೂಪದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಜೇನುನೊಣಗಳು ಅಲ್ಲು ಅರ್ಹಾಗೆ ತೊಂದರೆ ಕೊಟ್ಟಿವೆ. ಇದು ಆಕೆಗೆ ಭಯ ಹುಟ್ಟಿಸಿದೆ. ತಲೆ ಕೂದಲ ಒಳಗೆ ನೊಣಗಳು ಹೊಕ್ಕಿಬಿಡಬಹುದು ಎನ್ನುವ ಭಯ ಆಕೆಯನ್ನು ಕಾಡಿದೆ. ‘ನನ್ನ ಮುದ್ದಾದ ಜೀವಕ್ಕೆ ಹುಟ್ಟುಹಬ್ಬದ ಶುಭಾಶಯ’ ಎಂದು ಅಲ್ಲು ಅರ್ಜುನ್ ಅವರು ಈ ವಿಡಿಯೋಗೆ ಅಡಿಬರಹ ನೀಡಿದ್ದಾರೆ.
ಸಮಂತಾ ನಟನೆಯ ‘ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಅರ್ಹಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಈ ಚಿತ್ರಕ್ಕೆ ಗುಣಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಸಮಂತಾ ಜೊತೆ ಅಲ್ಲು ಅರ್ಹಾ ತೆರೆ ಹಂಚಿಕೊಂಡಿದ್ದಾಳೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರ ಮಾಡಿದ್ದು, ಶಕುಂತಲೆ ಪುತ್ರ ಭರತನ ಪಾತ್ರಕ್ಕೆ ಅಲ್ಲು ಅರ್ಹಾ ಬಣ್ಣ ಹಚ್ಚಿದ್ದಾಳೆ.
ಇದನ್ನೂ ಓದಿ: ಕರ್ನಾಟಕದಲ್ಲಿ ‘ಪುಷ್ಪ 2’ ವಿರುದ್ಧ ಬೀದಿಗಿಳಿದ ಅಲ್ಲು ಅರ್ಜುನ್ ಫ್ಯಾನ್ಸ್; ಇದಕ್ಕಿದೆ ಅಚ್ಚರಿಯ ಕಾರಣ
ಅಲ್ಲು ಅರ್ಜುನ್ ಅವರು ‘ಪುಷ್ಪ’ ಚಿತ್ರ ಹಿಟ್ ಆಗಿದೆ. ಹೀಗಾಗಿ, ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಲಿದ್ದಾರೆ. ಡಿಸೆಂಬರ್ ತಿಂಗಳಿಂದ ಅವರು ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸುಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.