
‘ಪುಷ್ಪ: ದಿ ರೈಸ್’ (Pushpa The Rise) ಚಿತ್ರ ನಾಯಕ ನಟ ಅಲ್ಲು ಅರ್ಜುನ್ಗೆ (Allu Arjun) ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ. ಬಾಕ್ಸಾಫೀಸ್ನಲ್ಲೂ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿರುವ ‘ಪುಷ್ಪ’ ನಂಬರ್ 1 ಸ್ಥಾನಕ್ಕೇರಿದೆ. ಈ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಹಿಂದಿಯಲ್ಲಿ ಪುಷ್ಪ ಬಾಲಿವುಡ್ ಚಿತ್ರಗಳ ಸ್ಪರ್ಧೆಯ ನಡುವೆಯೂ ಉತ್ತಮವಾಗಿ ಗಳಿಸಿದೆ. ಹಿಂದಿ ಅವತರಣಿಕೆಯಿಂದ 100 ಕೋಟಿ ರೂಗಳಿಗಿಂತಲೂ ಅಧಿಕ ಮೊತ್ತ ಬಾಚಿಕೊಂಡಿರುವುದು ಇದಕ್ಕೆ ಸಾಕ್ಷಿ. ಆದರೆ ಈ ಯಶಸ್ಸು ಸುಲಭವಾಗಿ ಲಭ್ಯವಾಗಿಲ್ಲ. ‘ಪುಷ್ಪ’ ಪಾತ್ರಕ್ಕಾಗಿ ಅಲ್ಲು ಅರ್ಜುನ್ ತಮ್ಮ ಪಾತ್ರವನ್ನು ಸಂಪೂರ್ಣ ಬದಲಾಯಿಸಿಕೊಂಡಿದ್ದರು. ಸ್ಟೈಲ್ ಐಕಾನ್ ಆಗಿದ್ದ ಅಲ್ಲು ಅರ್ಜುನ್, ರಗಡ್ ಆಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ನಡಿಗೆಯ ಶೈಲಿ, ಪ್ರಾದೇಶಿಕ ಭಾಷೆಯಲ್ಲಿ ಸಂಭಾಷಣೆ ಇವುಗಳ ಮೂಲಕ ಅವರು ತೀರಾ ಭಿನ್ನವಾಗಿ ಪ್ರೇಕ್ಷರನ್ನು ರಂಜಿಸಿದ್ದರು. ಇದು ಅಭಿಮಾನಿಗಳಿಗೆ ಇಷ್ಟವಾಗಿದ್ದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಟ್ರೆಂಡ್ ಆಗಿತ್ತು.
ಇದೀಗ ‘ಪುಷ್ಪ’ ಚಿತ್ರತಂಡ ತೆರೆಯ ಹಿಂದಿನ ನೈಜತೆಯನ್ನು ಅನಾವರಣ ಮಾಡಿದೆ. ಹೌದು. ಅಲ್ಲು ಅರ್ಜುನ್ ‘ಪುಷ್ಪ’ನಾಗಲು ಎಷ್ಟು ಮೇಕಪ್ ಮಾಡಲಾಗಿತ್ತು? ಇದಕ್ಕೆ ಅವರು ತಯಾರಾಗಿದ್ದು ಹೇಗೆ ಈ ಎಲ್ಲವನ್ನೂ ತೋರಿಸುವ 50 ಸೆಕೆಂಡ್ಗಳ ವಿಡಿಯೋವನ್ನು ‘ಪುಷ್ಪ’ ಚಿತ್ರತಂಡ ಹಂಚಿಕೊಂಡಿದೆ. ಅಲ್ಲು ಅರ್ಜುನ್ ಮೇಕಪ್ ಮೂಲಕ ಪುಷ್ಪನಾಗಿ ಬದಲಾಗುತ್ತಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳು ಅಲ್ಲು ಅವರು ಪಾತ್ರಕ್ಕಾಗಿ ಬದಲಾಗುತ್ತಿರುವುದನ್ನು ನೋಡಿ ಜೈಹೋ ಎಂದಿದ್ದಾರೆ. ಅಲ್ಲದೇ ‘ಪುಷ್ಪ: ದಿ ರೂಲ್’ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್ ‘ಪುಷ್ಪ’ನಾಗಿ ಬದಲಾಗುತ್ತಿರುವುದು; ವಿಡಿಯೋ ಇಲ್ಲಿದೆ:
ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿತ್ತು. ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ತಾರೆ ಧನಂಜಯ್, ಮಲಯಾಳಂ ನಟ ಫಹಾದ್ ಫಾಸಿಲ್ ಟಾಲಿವುಡ್ಗೆ ಪದಾರ್ಪಣೆ ಮಾಡಿದ್ದರು. ಪ್ರಸ್ತುತ ‘ಪುಷ್ಪ’ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಒಟಿಟಿಯಲ್ಲಿ ಬಿತ್ತರವಾಗುತ್ತಿದೆ. ‘ಪುಷ್ಪ’ ಚಿತ್ರದ ಎರಡನೇ ಭಾಗ ‘ಪುಷ್ಪ: ದಿ ರೂಲ್’ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಮಾರ್ಚ್ನಿಂದ ಚಿತ್ರೀಕರಣ ಆರಂಭಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ:
Sarkaru Vaari Paata: ಮಹೇಶ್ ಬಾಬು ಹೊಸ ಚಿತ್ರದಿಂದ ಬಿಗ್ ಅಪ್ಡೇಟ್; ಇಲ್ಲಿದೆ ಹೊಸ ಸಮಾಚಾರ
ತಾಯಿಯಾಗುತ್ತಿರುವ ಕಾಜಲ್ಗೂ ಎದುರಾಯ್ತು ಬಾಡಿ ಶೇಮಿಂಗ್; ಕೀಳು ಮನಸ್ಥಿತಿಗಳಿಗೆ ನಟಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?