AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್ ಪ್ರಶಸ್ತಿ ಗೆದ್ದ ಹಾಲಿವುಡ್ ನಟಿ ಅಮಂಡಾ ಸೀಫ್ರೈಡ್ ಬ್ಯಾಗ್​ನಲ್ಲಿ ಎದೆಹಾಲು ಹಿಂಡುವ ಪಂಪ್!

ಅಮಂಡಾ ಹಾಕಿರುವ ಇಮೇಜ್ ಮೆಚ್ಚದಿರುವುದು ಸಾಧ್ಯವೇ ಇಲ್ಲವೇನೋ? ಸೆಲಿಬ್ರಿಟಿಗಳು ಸಹ ಸಾಮಾನ್ಯ ತಂದೆತಾಯಿಗಳ ಹಾಗೆ ತಮ್ಮ ಮಕ್ಕಳ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ

ಆಸ್ಕರ್ ಪ್ರಶಸ್ತಿ ಗೆದ್ದ ಹಾಲಿವುಡ್ ನಟಿ ಅಮಂಡಾ ಸೀಫ್ರೈಡ್ ಬ್ಯಾಗ್​ನಲ್ಲಿ ಎದೆಹಾಲು ಹಿಂಡುವ ಪಂಪ್!
ಅಮಂಡಾ ಸೀಫ್ರೈಡ್‘
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Apr 27, 2021 | 7:31 PM

Share

ಹಾಲಿವುಡ್​ನ ಖ್ಯಾತ ನಟಿ ಅಮೆರಿಕಾದ ಅಮಂಡಾ ಸೀಫ್ರೈಡ್ ಯಾರಿಗೆ ಗೊತ್ತಿಲ್ಲ. ಈ ತೇಲುಗಣ್ಣಿನ ಸುಂದರಿ ತನ್ನ ಮಾದಕ ಸೌಂದರ್ಯ ಮತ್ತು ಅಂಗಸೌಷ್ಠವದಿಂದ ವಿಶ್ವದಾದ್ಯಂತ ಹದಿಹರೆಯದವರಲ್ಲದೆ ಪ್ರಾಯಕಳೆದವರಿಗೂ ನಿದ್ದೆಗೆಡಿಸುತ್ತಿದ್ದಾರೆ. ಸೋಮವಾರದಂದು ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಂತೂ ಆಕೆ ಕಡುಗೆಂಪು ಬಣ್ಣದ ಗೌನ್​ನಲ್ಲಿ ಅಪ್ಸರೆಯಂತೆ ಕಾಣುತ್ತಿದ್ದರು. ಆಕೆ ತೊಟ್ಟ ಜಾರ್ಜಿಯೋ ಅರ್ಮಾನಿ ಕೆಂಫು ಸ್ರ್ಯಾಪ್ ರಹಿತ ಉಡುಗೆ ಸ್ಪ್ರಿಂಗ್/ಸಮ್ಮರ್ 2021 ಕಲೆಕ್ಷನ್​ದಂತೆ. ಅದರ ತಯಾರಿ ಮತ್ತು ತೊಟ್ಟು ನಡೆಯುವ ಅಭ್ಯಾಸಕ್ಕೆ ಅಕೆ ತಿಂಗಳುಗಳನ್ನು ವ್ಯಯಿಸಿದ್ದಾರಂತೆ. ಅವಾರ್ಡ್ ಫಂಕ್ಷನ್​ಗೆ ನಿಜವಾದ ಕಳೆ ತಂದಿದ್ದು ಅಮಂಡಾ ಮತ್ತು ಆಕೆ ತೊಟ್ಟ ಗೌನ್ ಎಂದು ಸಮಾರಂಭದ ನಂತರ ಹಲವಾರು ಜನ ಉದ್ಗರಿಸಿದರು.

ಗಮ್ಮತ್ತಿನ ಸಂಗತಿಯೆಂದರೆ ಆ ಗೌನ್​ ತೊಡುವ ವಿಧಾನವನ್ನು ಆಕೆ ತನ್ನ ಇನ್​ಸ್ಟಾಗ್ರಾಮ್ ಅಕೌಂಟ್​ನಲ್ಲಿ ವಿವರಿಸಿದ್ದಾರೆ. ಇದೆಲ್ಲ ಆಕೆಯ ರೂಪ ಮತ್ತು ಗ್ಲಾಮರ್ ಕುರಿತಾದ ಮಾತುಗಳಾದವು, ಅಸಲಿಗೆ ನಾವು ಹೇಳಬಯಸುವ ವಿಷಯ ಬೇರೆಯದ್ದಾಗಿದೆ.

ಅಕೆ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿರುವ ಒಂದು ಪೋಸ್ಟ್ ಆಕೆಯನ್ನು ಫಾಲೋ ಮಾಡುವ ಕೊಟ್ಯಾಂತರ ಜನರ ಗಮನ ಸೆಳೆದಿವೆ, ನಟಿಯಾಗಿ, ಮಾಡೆಲ್ ಆಗಿ ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರೂ ತಾನೊಬ್ಬ ತಾಯಿ ಎನ್ನುವುದನ್ನು ಆಕೆಯ ಇನ್​ಸ್ಟಾಗ್ರಾಮ್ ಚಿತ್ರ ಸಾದರಪಡಿಸುತ್ತದೆ. ಆ ಚಿತ್ರದ ಮೂಲಕ ಆಕೆ ತಾನು ಹೊಸದಾಗಿ ತಾಯಿಯಾಗಿರುವ ಅಂಶವನ್ನು ಹೇಳಲು ಬಯಸಿದ್ದಾರೆ ಅಂತ ನೋಡಿದವರಿಗೆ ಅನಿಸುತ್ತದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡು, ರಂಗುರಂಗಿನ ಸಮಾರಂಭದಲ್ಲಿ ಇತರ ತಾರಾಮಣಿಗಳ ಚಮಕ್-ಧಮಕ್​ಗಳೊಂದಿಗೆ ಭಾಗಿಯಾಗಿದ್ದರೂ ಆಕೆ ತನ್ನ ಎಳೆಯ ಕಂದನನ್ನು ಮರೆತಿಲ್ಲ ಅನ್ನುವುದನ್ನು ಅದು ಸಾಬೀತು ಮಾಡುತ್ತದೆ. ನಿಮಗೆ ಗೊತ್ತಿದೆ, ಹಾಲಿವುಡ್​ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕಿಂತ ದೊಡ್ಡ ಈವೆಂಟ್​ ಮತ್ತೊಂದಿಲ್ಲ.

‘ಮ್ಯಾಂಕ್’ ಚತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅಮಂಡಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಮಾರಂಭದ ನಂತರ ನಡೆದ ಪಾರ್ಟಿಯಲ್ಲಿ ಭಾಗವಹಿಸಲು ಈ 35 ರ ಪ್ರಾಯದ ನಟಿ ಹೋದಾಗ ಅಕೆಯ ಬ್ಯಾಗ್​ನಲ್ಲಿ ಇದ್ದ ವಸ್ತುಗಳು ಯಾವು ಗೊತ್ತಾ? ಒಂದು ಲೋಟ ನೀರು, ಒಂದು ಚಿಕ್ಕ ಕೆಂಪು ವರ್ಣದ ಬ್ಯಾಗ್ ಮತ್ತು ಎದೆಹಾಲು ಹಿಂಡುವ ಪಂಪ್!

ಹೌದು ನೀವು ಓದಿದ್ದು ನಿಜ, ಎದೆಹಾಲು ಹಿಂಡಲು ಉಪಯೋಗಿಸುವ ಪಂಪ್!!

ಆಕೆಯ ಸಮಾರಂಭ ನಂತರದ ಪಾರ್ಟಿ ಎಲ್ಲರಂತಿರಲಿಲ್ಲ ಎನ್ನುವುದು ಇದರಿಂದ ವೇದ್ಯವಾಗುತ್ತದೆ. ಎದೆಹಾಲನ್ನು ತನ್ನ ಏಳು ತಿಂಗಳ ಮಗನಿಗೆ ಉಣಿಸಲು ಆಕೆ ಪಂಪ್​ನೊಂದಿಗೆ ಪಾರ್ಟಿಗೆ ಬಂದಿದ್ದರು. ಅಮಂಡಾ ಮತ್ತು ಥಾಮಸ್ ಸಡೋಸ್ಕಿ ದಂಪತಿಗಳಿಗೆ ಈ ಮಗುವಲ್ಲದೆ, 4 ವರ್ಷದ ಮಗಳೊಬ್ಬಳಿದ್ದಾಳೆ. ಅಮಂಡಾ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರುವ ಈ ಚಿತ್ರಕ್ಕೆ ‘ಆಫ್ಟರ್ ಪಾರ್ಟಿ’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಅಮಂಡಾ ಹಾಕಿರುವ ಇಮೇಜ್ ಮೆಚ್ಚದಿರುವುದು ಸಾಧ್ಯವೇ ಇಲ್ಲವೇನೋ? ಸೆಲಿಬ್ರಿಟಿಗಳು ಸಹ ಸಾಮಾನ್ಯ ತಂದೆತಾಯಿಗಳ ಹಾಗೆ ತಮ್ಮ ಮಕ್ಕಳ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ, ಆಸ್ಕರ್​ನಂಥ ಭಾರೀ ಪ್ರತಿಷ್ಠಿತ ಮತ್ತು ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡಿರುವಾಗಲೂ ಅವರು ತಮ್ಮ ಮಕ್ಕಳನ್ನು ಮರೆಯುವುದಿಲ್ಲ ಎನ್ನುವುದನ್ನು ಅದು ವಿವರಿಸುತ್ತದೆ. ತಾಯಿ ಶ್ರೀಮಂತೆಯಾಗಲೀ ಅಥವಾ ಬಡವಿ; ಸೆಲಿಬ್ರಿಟಿಯಾಗಿರಲಿ ಅಥವಾ ಸಾಮಾನ್ಯಮಹಿಳೆ-ಆಕೆ ಯಾವತ್ತಿಗೂ ಒಬ್ಬ ತಾಯಿಯೇ!

ಇದನ್ನೂ ಓದಿ: Oscars 2021: ಆಸ್ಕರ್​ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್​ಲ್ಯಾಂಡ್​; ಇಲ್ಲಿದೆ ವಿಜೇತರ ಫುಲ್​ ಲಿಸ್ಟ್​

ಇದನ್ನೂ ಓದಿ: Oscars 2021: ಅತ್ಯುತ್ತಮ ನಿರ್ದೇಶಕಿ ಆಸ್ಕರ್​ ಪ್ರಶಸ್ತಿ ಪಡೆದು ದಾಖಲೆ ಬರೆದ ಕ್ಲೋಯಿ ಜಾವ್​