ನಟಿ ಬಳಿ ಇವೆ 400 ಬ್ಯಾಗ್​ಗಳು; ಇದನ್ನು ಮಾರಿದರೆ ಒಂದು ಮನೆ ಖರೀದಿಸಬಹುದು

ಅಮೀಷಾ ಪಟೇಲ್ ಅವರ ಬಳಿ 300-400 ಐಷಾರಾಮಿ ಬ್ಯಾಗ್‌ಗಳಿವೆ ಎಂದು ತಿಳಿದುಬಂದಿದೆ. ಇವುಗಳ ಒಟ್ಟು ಮೌಲ್ಯ 2-3 ಕೋಟಿ ರೂಪಾಯಿಗಳಷ್ಟು ಇರಬಹುದು. ಫರಾ ಖಾನ್ ಅವರ ವ್ಲಾಗ್‌ನಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಅಮೀಷಾ ಅವರ ಬ್ಯಾಗ್‌ಗಳ ಸಂಗ್ರಹವು ಅಪರೂಪದ ಮತ್ತು ಸೀಮಿತ ಆವೃತ್ತಿಯ ಬ್ರಾಂಡ್‌ಗಳನ್ನು ಒಳಗೊಂಡಿದೆ.

ನಟಿ ಬಳಿ ಇವೆ 400 ಬ್ಯಾಗ್​ಗಳು; ಇದನ್ನು ಮಾರಿದರೆ ಒಂದು ಮನೆ ಖರೀದಿಸಬಹುದು
ಫರಾ-ಅಮೀಷಾ
Edited By:

Updated on: Aug 19, 2025 | 8:06 AM

ಸೆಲೆಬ್ರಿಟಿಗಳ ಬಳಿ ಇರುವ ವಸ್ತುಗಳು ಯಾವಾಗಲೂ ಚರ್ಚೆಯಲ್ಲಿ ಇರುತ್ತವೆ. ಅದರಲ್ಲೂ ನಟಿಯರ ಬಳಿ ಇರುವ ಬ್ಯಾಗ್‌ಗಳು, ಡಿಸೈನರ್ ಬಟ್ಟೆಗಳು ಅಥವಾ ಆಭರಣಗಳು ಲಕ್ಷದಿಂದ ಆರಂಭ ಆಗಿ ಕೋಟಿ ಮೌಲ್ಯದ್ದಾಗಿರುತ್ತವೆ. 400 ಐಷಾರಾಮಿ ಬ್ಯಾಗ್‌ಗಳನ್ನು ಹೊಂದಿರುವ ಒಬ್ಬ ನಟಿ ಇದ್ದಾರೆ. ಅವುಗಳ ಮೌಲ್ಯ ಎಷ್ಟೆಂದರೆ ಆ ಬ್ಯಾಗ್‌ಗಳನ್ನು ಮಾರಿ ಮುಂಬೈನಲ್ಲಿ ಐಷಾರಾಮಿ ಮನೆ ಅಥವಾ ಪೆಂಟ್‌ಹೌಸ್ ಖರೀದಿಸಬಹುದು! ಅವರು ಬೇರಾರು ಅಲ್ಲ ನಟಿ ಅಮೀಷಾ ಪಟೇಲ್.

ಅಮೀಷಾ ಪಟೇಲ್ ಅವರ ಐಷಾರಾಮಿ ಜೀವನದ ಬಗ್ಗೆ ಆಗಾಗ ಸುದ್ದಿ ಆಗುತ್ತದೆ. ಚೊಚ್ಚಲ ಚಿತ್ರದ ಸಮಯದಲ್ಲೇ ಅವರು ಮರ್ಸಿಡಿಸ್ ಕಾರಿನಲ್ಲಿ ಬರುತ್ತಿದ್ದರು. ಅವರು ವಜ್ರಗಳನ್ನು ಧರಿಸುತ್ತಿದ್ದರು. ಈಗ ಫರಾ ಖಾನ್ ಅವರ ಮನೆಗೆ ಬಂದಿದ್ದಾರೆ. ಅವರ ಬ್ಯಾಗ್‌, ಬೆಲ್ಟ್‌, ವಾಚ್ ಮತ್ತು ಶೂಗಳ ಐಷಾರಾಮಿ ಸಂಗ್ರಹವನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

ಅಮೀಷಾ ತನ್ನ ಬ್ಯಾಗ್‌ಗಳನ್ನು ಫರಾಗೆ ತೋರಿಸಿದರು. ಫರಾಹ್ ವ್ಲಾಗ್‌ನಲ್ಲಿ, ‘ಅಮೀಷಾ ಪ್ರತಿ ಬಾರಿ ಹೊಸ ಬ್ಯಾಗ್ ಹಾಕುತ್ತಾರೆ’ ಎಂದು ಫರಾ ಹೇಳಿದರು. ಇದಕ್ಕೆ ಅಮೀಷಾ ತನ್ನ ಬಳಿ 300 ರಿಂದ 400 ಐಷಾರಾಮಿ ಬ್ಯಾಗ್‌ಗಳಿವೆ ಎಂದು ಹೇಳಿದರು. ಇದರ ಹೊರತಾಗಿ, ಅವಳ ಬಳಿ ವಿವಿಧ ರೀತಿಯ ಬೆಲ್ಟ್, ಬ್ಯಾಗ್‌ಗಳಿವೆ. ಭಾರತದಲ್ಲಿ ದೊಡ್ಡ ಬ್ರಾಂಡ್ ಬ್ಯಾಗ್‌ಗಳು ಬಿಡುಗಡೆಯಾದ ತಕ್ಷಣ, ಇವರ ಕೈಗೆ ಒಂದು ಸೇರುತ್ತದೆ.

ಇದನ್ನೂ ಓದಿ
ಅಂದು ಹೇಳಿದ್ದು ನಿಜವಾಯ್ತು; ಮಹೇಶ್ ಬಾಬು ಹಳೆಯ ಹೇಳಿಕೆ ವೈರಲ್
ತೀವ್ರವಾಗಿ ಕುಸಿದ ‘ಕೂಲಿ’ ಕಲೆಕ್ಷನ್; ಒಂದಂಕಿಗೆ ಬಂತು ‘ವಾರ್ 2’ ಗಳಿಕೆ
ಬಿಗ್ ಬಾಸ್​ಗೆ ಎಂಟ್ರಿ ಕೊಡಲಿದೆ ಸೆನ್ಸೇಷನ್ ಸೃಷ್ಟಿಸಿದ ಜೋಡಿ
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ

ಅಮೀಷಾ ಪಟೇಲ್ ಬಳಿ ವಿವಿಧ ಬ್ಯಾಗ್​ಗಳಿವೆ. ಇವುಗಳ ಒಟ್ಟೂ ಬೆಲೆ 2 ರಿಂದ 3 ಕೋಟಿ ರೂ.ಗಳವರೆಗೆ ಇರಬಹುದು.  ‘ಬಹುಶಃ ಉದ್ಯಮದಲ್ಲಿ ನನ್ನಷ್ಟು ಡಿಸೈನರ್ ಬ್ಯಾಗ್‌ಗಳು ಬೇರೆ ಯಾರೂ ಇಲ್ಲ’ ಎಂದು ಅಮೀಷಾ ಹೇಳಿದರು. ಈ ಬ್ಯಾಗ್‌ಗಳನ್ನು ಖರೀದಿಸದಿದ್ದರೆ, ಆ ಹಣದಿಂದ ಮುಂಬೈನಲ್ಲಿ ಇನ್ನೊಂದು ಪೆಂಟ್‌ಹೌಸ್ ಖರೀದಿಸಬಹುದಿತ್ತು.

ಅಮೀಷಾ ಬಳಿ ಇರುವ ಬ್ಯಾಗ್‌ಗಳಲ್ಲಿ ಹೆಚ್ಚಿನವು ಸೀಮಿತ ಆವೃತ್ತಿಯವು ಎಂದು ಅಮೀಷಾ ಹೇಳಿದರು. ಅದು ಬೇರೆ ಯಾರ ಬಳಿಯೂ ಇಲ್ಲ. ಅಮೀಷಾ ಫರಾ ಖಾನ್‌ಗೆ ತಿಳಿ ಗುಲಾಬಿ ಬಣ್ಣದ ಬ್ಯಾಗ್ ಅನ್ನು ತೋರಿಸಿದರು. ಅದರ ಬಣ್ಣ ಕ್ರಮೇಣ ಕಪ್ಪಾಗುತ್ತಿದೆ. ಅದು ಮೊಸಳೆಯ ಚರ್ಮದಿಂದ ಮಾಡಲ್ಪಟ್ಟಿದೆ ಎಂದು ಅಮೀಷಾ ಹೇಳಿದರು.

ಇದನ್ನೂ ಓದಿ: ತೆಲ್ಗಿ 93 ಲಕ್ಷ ರೂಪಾಯಿ ಹಣ ಚೆಲ್ಲಿದ್ದು ತಮನ್ನಾ ಭಾಟಿಯಾ ಮೇಲಾ?

ಅಮಿಷಾ ಸಿನಿಮಾಗಳಲ್ಲಿ ಸಕ್ರಿಯವಾಗಿಲ್ಲದಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರು ಇಂದಿಗೂ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.