AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೀವ್ರವಾಗಿ ಕುಸಿದ ‘ಕೂಲಿ’ ಕಲೆಕ್ಷನ್; ಒಂದಂಕಿಗೆ ಬಂತು ‘ವಾರ್ 2’ ಗಳಿಕೆ

ರಜನಿಕಾಂತ್ ನಟನೆಯ ‘ಕೂಲಿ’ ಮತ್ತು ಹೃತಿಕ್ ರೋಷನ್-ಜೂನಿಯರ್ ಎನ್​ಟಿಆರ್ ನಟನೆಯ ‘ವಾರ್ 2’ ಚಿತ್ರಗಳು ವೀಕೆಂಡ್‌ನಲ್ಲಿ ಅಭೂತಪೂರ್ವ ಗಳಿಕೆ ಮಾಡಿವೆ. ವಾರದ ದಿನಗಳಲ್ಲಿ ಗಳಿಕೆಯಲ್ಲಿ ತೀವ್ರ ಕುಸಿತ ಕಂಡಿದೆ. ‘ಕೂಲಿ’ ಚಿತ್ರ 200 ಕೋಟಿಗೂ ಹೆಚ್ಚು ಗಳಿಸಿದರೆ, ‘ವಾರ್ 2’ 180 ಕೋಟಿಗೂ ಹೆಚ್ಚು ಗಳಿಸಿದೆ.

ತೀವ್ರವಾಗಿ ಕುಸಿದ ‘ಕೂಲಿ’ ಕಲೆಕ್ಷನ್; ಒಂದಂಕಿಗೆ ಬಂತು ‘ವಾರ್ 2’ ಗಳಿಕೆ
ಅಜಿತ್
ರಾಜೇಶ್ ದುಗ್ಗುಮನೆ
|

Updated on:Aug 19, 2025 | 7:25 AM

Share

ವೀಕೆಂಡ್​ಗಳಲ್ಲಿ ಅಭೂತಪೂರ್ವ ಗಳಿಕೆ ಮಾಡಿ ಬೀಗಿದ್ದ ರಜನಿಕಾಂತ್ ನಟನೆಯ ‘ಕೂಲಿ’ (Coolie) ಹಾಗೂ ಹೃತಿಕ್ ರೋಷನ್-ಜೂನಿಯರ್ ಎನ್​ಟಿಆರ್ ಕಾಂಬಿನೇಷನ್​ನ ‘ವಾರ್ 2’ ಸಿನಿಮಾಗಳು ವಾರದ ದಿನ ಮುಗ್ಗರಿಸಿವೆ. ಈ ಎರಡೂ ಸಿನಿಮಾಗಳ ಕಲೆಕ್ಷನ್ ವಾರದ ಮೊದಲ ದಿನವಾದ ಸೋಮವಾರ ತೀವ್ರ ತರವಾದ ಕುಸಿತ ಕಂಡಿದೆ. ವೀಕೆಂಡ್​ನಲ್ಲಿ ಗಳಿಕೆ ಮತ್ತೆ ಹೆಚ್ಚುವ ನಿರೀಕ್ಷೆ ಇದೆ. ಗಣೇಶ ಚತುರ್ಥಿಯ ರಜೆಗಳು ಕೂಡ ಸಹಕಾರಿ ಆಗುವ ಸಾಧ್ಯತೆ ಇದೆ.

ರಜನಿಕಾಂತ್ ನಟನೆಯ ಕೂಲಿ ಸಿನಿಮಾ ನಾಲ್ಕು ದಿನಕ್ಕೆ ಬರೋಬ್ಬರಿ 194 ಕೋಟಿ ರೂಪಾಯಿ  ಗಳಿಕೆ ಮಾಡಿತ್ತು. ಈಗ ಸೋಮವಾರದ (ಆಗಸ್ಟ್ 18) ಕಲೆಕ್ಷನ್ ಹೊರ ಬಿದ್ದಿದೆ. ಈ ಚಿತ್ರ ಸರಿ ಸುಮಾರು 12 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರ ಈ ಚಿತ್ರ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 35 ಕೋಟಿ ರೂಪಾಯಿ. ಇನ್ನು ಮುಂದಿನ ದಿನಗಳಲ್ಲಿ (ಶುಕ್ರವಾರದವರೆಗೆ) ಸಿನಿಮಾದ ಗಳಿಕೆ ಒಂದಂಕಿಗೆ ಇಳಿದರೂ ಅಚ್ಚರಿ ಏನಿಲ್ಲ.

ಸದ್ಯ ‘ಕೂಲಿ’ ಸಿನಿಮಾದ ಕಲೆಕ್ಷನ್ 206.5 ಕೋಟಿ ರೂಪಾಯಿ ಆಗಿದೆ. ವೀಕೆಂಡ್​ನಲ್ಲಿ ಕಲೆಕ್ಷನ್ ಉತ್ತಮ ರೀತಿಯಲ್ಲಿ ಆದರೆ ಸಿನಿಮಾದ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ 300 ಕೋಟಿ ರೂಪಾಯಿ ಆಗಲಿದೆ. ವಿಶ್ವ ಮಟ್ಟದಲ್ಲಿ ಚಿತ್ರ 600 ಕೋಟಿ ರೂಪಾಯಿ ಸಮೀಪಿಸಲಿದಿಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
Image
ಬಿಗ್ ಬಾಸ್​ಗೆ ಎಂಟ್ರಿ ಕೊಡಲಿದೆ ಸೆನ್ಸೇಷನ್ ಸೃಷ್ಟಿಸಿದ ಜೋಡಿ
Image
ಬಜೆಟ್​ಗಿಂತ 21 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
Image
ಮಿಶ್ರ ಪ್ರತಿಕ್ರಿಯೆ ನಡುವೆಯೂ ದಾಖಲೆಯ ಕಲೆಕ್ಷನ್ ಮಾಡಿದ ಕೂಲಿ, ವಾರ್ 2
Image
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ

‘ವಾರ್ 2’ ಸಿನಿಮಾದ ಗಳಿಕೆ ಸೋಮವಾರ ತೀವ್ರತರ ಕುಸಿತ ಕಂಡಿದ್ದು, ಒಂದಂಕಿ ತಲುಪಿದೆ. ಈ ಸಿನಿಮಾ ಸೋಮವಾರ 8.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಭಾನುವಾರ 32 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಚಿತ್ರದ ಭಾರತದ ಕಲೆಕ್ಷನ್ 183.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಇದನ್ನೂ ಓದಿ: ಕೂಲಿ ಸಿನಿಮಾದಲ್ಲಿ ಮಿಂಚಿದ ರಚಿತಾ ರಾಮ್: ಸಿಕ್ತು ಮೆಚ್ಚುಗೆ

ಎರಡೂ ಸಿನಿಮಾಗಳು ವಿಮರ್ಶೆಯಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿವೆ. ಆದರೂ ಒಂದು ಹಂತದಲ್ಲಿ ಸಿನಿಮಾ ಗಳಿಕೆ ಮಾಡುತ್ತಿದೆ. ಚಿತ್ರಕ್ಕೆ ಹಾಕಿದ ಬಂಡವಾಳ ಅನಾಯಾಸವಾಗಿ ನಿರ್ಮಾಪಕರ ಕೈ ಸೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:56 am, Tue, 19 August 25