‘ರಾಜಕೀಯ ಸೇರಿ’: ಜ್ಯೂ.ಎನ್​ಟಿಆರ್​ಗೆ ಆಫರ್ ನೀಡಿ ಬಂದ ಅಮಿತ್​ ಶಾ; ಹೊರ ಬಿತ್ತು ಅಸಲಿ ವಿಚಾರ

| Updated By: ರಾಜೇಶ್ ದುಗ್ಗುಮನೆ

Updated on: Aug 22, 2022 | 9:47 PM

ಭಾನುವಾರ (ಆಗಸ್ಟ್ 21) ಜ್ಯೂ.ಎನ್​ಟಿಆರ್ ಮನೆಗೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಬಿಜೆಪಿಯ ಚಾಣಾಕ್ಯ ಎಂದೇ ಫೇಮಸ್ ಆದ ಅಮಿತ್ ಶಾ ಸ್ಟಾರ್ ನಟನನ್ನು ಭೇಟಿ ಮಾಡುತ್ತಾರೆ ಎಂದರೆ ಅದರ ಹಿಂದೆ ರಾಜಕೀಯ ಕಾರಣ ಇದೆ ಎಂದೇ ಹೇಳಲಾಗುತ್ತಿದೆ. ‘

‘ರಾಜಕೀಯ ಸೇರಿ’: ಜ್ಯೂ.ಎನ್​ಟಿಆರ್​ಗೆ ಆಫರ್ ನೀಡಿ ಬಂದ ಅಮಿತ್​ ಶಾ; ಹೊರ ಬಿತ್ತು ಅಸಲಿ ವಿಚಾರ
ಅಮಿತ್ ಶಾ-ಜ್ಯೂ.ಎನ್​ಟಿಆರ್
Follow us on

ಟಾಲಿವುಡ್ ನಟ ಜ್ಯೂ.ಎನ್​ಟಿಆರ್ (JR. Ntr) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ರಾಜಕೀಯ ಉದ್ದೇಶದಿಂದಲೇ ಇವರ ಭೇಟಿ ನಡೆದಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಇವರಿಬ್ಬರ ಭೇಟಿ ರಾಜಕೀಯ ಉದ್ದೇಶವನ್ನೇ ಹೊಂದಿದೆ ಎಂಬುದನ್ನು ಮೂಲಗಳು ಒತ್ತಿ ಹೇಳಿವೆ.   ಭಾನುವಾರ (ಆಗಸ್ಟ್ 21) ಜ್ಯೂ.ಎನ್​ಟಿಆರ್ ಮನೆಗೆ ಅಮಿತ್ ಶಾ (Amit Shah) ಭೇಟಿ ನೀಡಿದ್ದಾರೆ. ಬಿಜೆಪಿಯ ಚಾಣಾಕ್ಯ ಎಂದೇ ಫೇಮಸ್ ಆದ ಅಮಿತ್ ಶಾ ಸ್ಟಾರ್ ನಟನನ್ನು ಭೇಟಿ ಮಾಡುತ್ತಾರೆ ಎಂದರೆ ಅದರ ಹಿಂದೆ ರಾಜಕೀಯ ಕಾರಣ ಇದೆ ಎಂದೇ ಹೇಳಲಾಗುತ್ತಿದೆ. ‘ರಾಜಕೀಯಕ್ಕೆ ಬನ್ನಿ. ಆ ನಿರ್ಧಾರದ ಬಗ್ಗೆ ಯೋಚಿಸಿ’ ಎಂಬುದನ್ನು ಅಮಿತ್ ಶಾ ಅವರು ಜ್ಯೂ.ಎನ್​ಟಿಆರ್​ಗೆ ಹೇಳಿದ್ದಾರೆ ಎಂದು ವರದಿ ಆಗಿದೆ.

ಹಲವು ರಾಜ್ಯಗಳಲ್ಲಿ ಸಿನಿಮಾ ರಂಗದ ಅನೇಕರು ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಜ್ಯೂ.ಎನ್​ಟಿಆರ್ ತಂದೆ ನಂದಮೂರಿ ಹರಿಕೃಷ್ಣ ಅವರು ಸಂಸದರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಜ್ಯೂ.ಎನ್​ಟಿಆರ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ರಾಜಕೀಯಕ್ಕೆ ಸೇರಿದರೆ ಆ ಫ್ಯಾನ್​ಬೇಸ್​ ಮತವಾಗಿ ಮಾರ್ಪಾಡಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಈ ಕಾರಣಕ್ಕೆ ಅಮಿತ್ ಶಾ ಅವರು ಸ್ಟಾರ್ ನಟನಿಗೆ ಈ ಆಫರ್ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
Jr NTR: ಪತ್ನಿ ಜೊತೆ ಕಳೆದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ನಟ ಜ್ಯೂನಿಯರ್ ಎನ್​ಟಿಆರ್​
Jr NTR: ರಸ್ತೆ ಅಪಘಾತದಲ್ಲಿ ಜ್ಯೂ. ಎನ್​ಟಿಆರ್​ ಅಭಿಮಾನಿ ನಿಧನ; ಸ್ಟಾರ್​ ನಟನ ಪ್ರಾರ್ಥನೆಯೂ ಫಲಿಸಲಿಲ್ಲ
ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಜ್ಯೂ. ಎನ್​ಟಿಆರ್​; ‘ಬಾಲ ರಾಮಾಯಣಂ’ ನೆನಪಿಸಿದ ಫೋಟೋಗಳು
Alia Bhatt: ‘ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟುಬಿಡಿ’; ಜ್ಯೂ ಎನ್​ಟಿಆರ್​ ಬಳಿ ಆಲಿಯಾ ವಿಶೇಷ ಬೇಡಿಕೆ

ಜ್ಯೂ.ಎನ್​ಟಿಆರ್ ಅವರು ಟಿಡಿಪಿಯಲ್ಲಿ ಆ್ಯಕ್ಟೀವ್ ಆಗಿದ್ದರು. ಆದರೆ, ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಅವರು ರಾಜಕೀಯಕ್ಕೆ ಬಂದ ನಂತರದಲ್ಲಿ ಜ್ಯೂ.ಎನ್​ಟಿಆರ್ ಅವರು ಹೊರಗುಳಿದರು. ನಂತರ ಜ್ಯೂ.ಎನ್​ಟಿಆರ್ ಮತ್ತೆ ರಾಜಕೀಯದತ್ತ ಮುಖ ಮಾಡಿಲ್ಲ. ಈಗ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ.

‘ಜ್ಯೂ.ಎನ್​ಟಿಆರ್ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇದೆ. ಈ ಮೊದಲು ಟಿಡಿಪಿಯಲ್ಲಿ ಆ್ಯಕ್ಟೀವ್ ಆಗಿದ್ದರು. ಅವರು ಅದ್ಭುತ ಮಾತುಗಾರ. ಅವರ ಫ್ಯಾನ್​ಬೇಸ್ ಕೂಡ ದೊಡ್ಡದಿದೆ. ಹೀಗಾಗಿ, ಅವರನ್ನು ಬಿಜೆಪಿ ತನ್ನ ತೆಕ್ಕೆಗೆ ಕರೆತರಲು ಪ್ರಯತ್ನಿಸುತ್ತಿದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಇದನ್ನೂ ಓದಿ: Jr NTR: ಅಮಿತ್​ ಶಾ ಎದುರು ಕೈ ಕಟ್ಟಿ ಕುಳಿತ ಜ್ಯೂ. ಎನ್​ಟಿಆರ್​; ಅಚ್ಚರಿ ಮೂಡಿಸಿತು ಗೃಹ ಸಚಿವರ ಭೇಟಿ

ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಈ ಕಾರಣಕ್ಕೆ ಜ್ಯೂ.ಎನ್​ಟಿಆರ್​ ಅವರನ್ನು ಅಮಿತ್ ಶಾ ಟ್ರಂಪ್ ಕಾರ್ಡ್​ ಆಗಿ ಬಳಕೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. 20 ನಿಮಿಷಗಳ ಭೇಟಿಯಲ್ಲಿ ರಾಜಕೀಯದ ವಿಚಾರ ಹೆಚ್ಚು ಚರ್ಚೆ ಆಗಿದೆ ಎಂದು ವರದಿ ಆಗಿದೆ.

ಈ ಸುದ್ದಿಯನ್ನು ಇಂಗ್ಲಿಷನ್​ಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:46 pm, Mon, 22 August 22