ಅಮಿತಾಭ್-ಐಶ್ವರ್ಯಾ ಮಧ್ಯೆ ಯಾವುದೂ ಸರಿ ಇಲ್ಲ? ವೈರಲ್ ಪೋಸ್ಟ್​ ಇದಕ್ಕೆ ಸಾಕ್ಷಿ

‘ಕಜರಾ ರೇ..’ ಸಾಂಗ್ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಇದ್ದರು. ಈ ಹಾಡಿನಲ್ಲಿ ಸಾಕಷ್ಟು ಎನರ್ಜಿಯೊಂದಿಗೆ ಈ ಮೂವರು ಡ್ಯಾನ್ಸ್ ಮಾಡಿದ್ದರು. ಈ ಹಾಡಿನ ಬಗ್ಗೆ ಮಾತನಾಡುವಾಗ ಅಮಿತಾಭ್ ಅವರು ಮಗನ ಹೊಗಳಿದ್ದಾರೆ. ಸೊಸೆಯನ್ನು ಉಲ್ಲೇಖವೇ ಮಾಡಿಲ್ಲ.

ಅಮಿತಾಭ್-ಐಶ್ವರ್ಯಾ ಮಧ್ಯೆ ಯಾವುದೂ ಸರಿ ಇಲ್ಲ? ವೈರಲ್ ಪೋಸ್ಟ್​ ಇದಕ್ಕೆ ಸಾಕ್ಷಿ
ಅಮಿತಾಭ್-ಐಶ್ವರ್ಯಾ ಮಧ್ಯೆ ಯಾವುದೂ ಸರಿ ಇಲ್ಲ? ವೈರಲ್ ಪೋಸ್ಟ್​ ಇದಕ್ಕೆ ಸಾಕ್ಷಿ
Follow us
ರಾಜೇಶ್ ದುಗ್ಗುಮನೆ
|

Updated on: May 30, 2024 | 7:35 AM

ಅಮಿತಾಭ್ ಬಚ್ಚನ (Amitabh Bachchan) ಕುಟುಂಬದ ಸುದ್ದಿ ಆಗಾಗ ಬೀದಿಗಳಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಅಮಿತಾಭ್ ಹಾಗೂ ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಈ ಕಾರಣಕ್ಕೆ ಅಭಿಷೇಕ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ, ಕುಟುಂಬದವರು ಹಲವು ಬಾರಿ ಒಟ್ಟಾಗಿ ಕಾಣಿಸಿಕೊಂಡ ಬಳಿಕ ಈ ಸುದ್ದಿ ತಣ್ಣಗಾಯಿತು. ಈಗ ಮತ್ತೆ ಇದೇ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣವಾಗಿತ್ತು ಅಮಿತಾಭ್ ಅವರ ಪೋಸ್ಟ್.

‘ಕಜರಾ ರೇ..’ ಸಾಂಗ್ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಇದ್ದರು. ಈ ಹಾಡಿನಲ್ಲಿ ಸಾಕಷ್ಟು ಎನರ್ಜಿಯೊಂದಿಗೆ ಈ ಮೂವರು ಡ್ಯಾನ್ಸ್ ಮಾಡಿದ್ದರು. ಇದು ‘ಬಂಟಿ ಔರ್ ಬಬ್ಲಿ’ ಚಿತ್ರದ ಹಾಡು. ಈ ಸಿನಿಮಾ 2005ರ ಮೇ 27ರಂದು ರಿಲೀಸ್ ಆಗಿತ್ತು. ಈ ಚಿತ್ರ ಬಿಡುಗಡೆ ಆಗಿ 19 ವರ್ಷ ಕಳೆದ ಹಿನ್ನೆಲೆಯಲ್ಲಿ ಫ್ಯಾನ್ಸ್ ಈ ಚಿತ್ರವನ್ನು, ಸಿನಿಮಾದ ಹಾಡನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಹೌಸ್​ಫುಲ್ 5’ ಸಿನಿಮಾದ ಭಾಗವಾಗಲಿದ್ದಾರೆ ಅಭಿಷೇಕ್ ಬಚ್ಚನ್; ನಗಿಸೋಕೆ ರೆಡಿ ಆದ ಸ್ಟಾರ್ ಹೀರೋ

ಈ ಟ್ವೀಟ್​ನ ಅಮಿತಾಭ್ ರೀಟ್ವೀಟ್ ಮಾಡಿದ್ದಾರೆ. ‘ಈ ಹಾಡು ಎಷ್ಟು ಜನಪ್ರಿಯವಾಯಿತು ಎಂದರೆ ಅದು ಇನ್ನೂ ಜನರಿಂದ ಮೆಚ್ಚುಗೆ ಹಾಗೂ ಪ್ರೀತಿ ಪಡೆಯುತ್ತಿದೆ. ಮಗನ ಜೊತೆ ಡ್ಯಾನ್ಸ್ ಮಾಡಿದ್ದು ಅತ್ಯುತ್ತಮ ಕ್ಷಣ’ ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ. ಆದರೆ, ಈ ಪೋಸ್ಟ್​ನಲ್ಲಿ ಅವರು ಐಶ್ವರ್ಯಾ ಅವರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ.

‘ಕಜರಾರೇ ಹಾಡಿನಲ್ಲಿ ಐಶ್ವರ್ಯಾ ಕೂಡ ಇದ್ದರು. ಈ ಹಾಡಿನಲ್ಲಿ ಐಶ್ವರ್ಯಾ ಮುಖ್ಯಪಾತ್ರಧಾರಿ. ನೀವಿಬ್ಬರು (ಅಭಿಷೇಕ್-ಅಮಿತಾಭ್) ಸಪೋರ್ಟಿಂಗ್ ಡ್ಯಾನ್ಸರ್​ಗಳು ಅಷ್ಟೇ’ ಎಂದು ಕೆಲವರು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ‘ಐಶ್ವರ್ಯಾ-ಅಮಿತಾಭ್ ಮಧ್ಯೆ ಯಾವುದೂ ಸರಿ ಇಲ್ಲ. ಎಲ್ಲವೂ ತೋರಿಕೆಗೆ’ ಎಂದಿದ್ದಾರೆ ಕೆಲವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.