Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ; ಯಾವ ಹೀರೋ ಜೊತೆ ಸಿನಿಮಾ?

ಸೋಶಿಯಲ್​ ಮೀಡಿಯಾದಲ್ಲಿ ಭಾಗ್ಯಶ್ರೀ ಮಗಳು ಅವಂತಿಕಾ ತುಂಬ ಫೇಮಸ್​ ಆಗಿದ್ದಾರೆ. ತಾಯಿಯ ರೀತಿಯೇ ಅವರು ಚಿತ್ರರಂಗದಲ್ಲಿ ಮಿಂಚುತ್ತಾರೋ ಇಲ್ಲವೋ ಎಂಬ ಕುತೂಹಲ ಅವರ ಅಭಿಮಾನಿಗಳ ಮನದಲ್ಲಿ ಮೂಡಿದೆ.

‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ; ಯಾವ ಹೀರೋ ಜೊತೆ ಸಿನಿಮಾ?
ಭಾಗ್ಯಶ್ರೀ, ಅವಂತಿಕಾ
Follow us
TV9 Web
| Updated By: ಮದನ್​ ಕುಮಾರ್​

Updated on: Nov 12, 2021 | 2:33 PM

ಸಲ್ಮಾನ್​ ಖಾನ್​ ನಟನೆಯ ‘ಮೈನೆ ಪ್ಯಾರ್​ ಕಿಯಾ’ ಸಿನಿಮಾ ಮೂಲಕ ಮನೆಮಾತಾದವರು ನಟಿ ಭಾಗ್ಯಶ್ರೀ. ಅದು ಅವರ ಚೊಚ್ಚಲ ಸಿನಿಮಾ ಆಗಿತ್ತು. ಮೊದಲ ಸಿನಿಮಾದಲ್ಲಿಯೇ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. 1997ರಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಶಿವರಾಜ್​ಕುಮಾರ್​ (Shivarajkumar) ನಟನೆಯ ‘ಅಮ್ಮಾವ್ರ ಗಂಡ’ (Ammavra Ganda) ಚಿತ್ರಕ್ಕೆ ಭಾಗ್ಯಶ್ರೀ (Bhagyashree) ನಾಯಕಿಯಾಗಿ ಆಯ್ಕೆ ಆದರು. ಆ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೂ ಅವರು ಪರಿಚಿತರಾದರು. ಇಂಥ ಹಿಟ್​ ಸಿನಿಮಾಗಳನ್ನು ನೀಡಿದರೂ ಕೂಡ ಚಿತ್ರರಂಗದಲ್ಲಿ ಭಾಗ್ಯಶ್ರೀ ಹೆಚ್ಚು ಕಾಲ ಸಕ್ರಿಯವಾಗಿರಲಿಲ್ಲ. ಬಹುಬೇಡಿಕೆ ಇರುವಾಗಲೇ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಸಿನಿಮಾಗಳ ಆಯ್ಕೆಯಲ್ಲಿ ಅವರು ಸಖತ್​ ಚ್ಯೂಸಿ ಆಗಿಬಿಟ್ಟರು. ಈಗ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ (Avantika Dasani) ಸಹ ಬಣ್ಣದ ಲೋಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರ ರಂಗಪ್ರವೇಶಕ್ಕೆ ಸಕಲ ಸಿದ್ಧತೆ ನಡೆದಿದೆ.

ಭಾಗ್ಯಶ್ರೀ ಅವರಿಗೆ ಇಬ್ಬರು ಮಕ್ಕಳು. ಪುತ್ರ ಅಭಿಮನ್ಯು ಈಗಾಗಲೇ ನಟನೆ ಆರಂಭಿಸಿದ್ದಾರೆ. ಅಭಿಮನ್ಯು ನಟಿಸಿದ್ದ ‘ಮರ್ದ್​ ಕೋ ದರ್ದ್​ ನಹೀ ಹೋತಾ’ ಸಿನಿಮಾ 2019ರಲ್ಲಿ ಬಿಡುಗಡೆ ಆಯಿತು. ಆ ಚಿತ್ರದಲ್ಲಿನ ನಟನೆಗಾಗಿ ಅವರಿಗೆ ಫಿಲ್ಮ್​ ಫೇರ್​ ಪ್ರಶಸ್ತಿ ಸಿಕ್ಕಿತು. ಈಗ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ಕೂಡ ಚಿತ್ರರಂಗದಲ್ಲಿ ತೊಡಗಿಕೊಳ್ಳಲು ಸಜ್ಜಾಗಿದ್ದಾರೆ. ಟಾಲಿವುಡ್​ ಮೂಲಕ ಅವರು ಬಣ್ಣದ ಬದುಕು ಆರಂಭಿಸಲಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಅವಂತಿಕಾ ತುಂಬ ಫೇಮಸ್​ ಆಗಿದ್ದಾರೆ. ತೆಲುಗು ನಟ ಬೆಲ್ಲಂಕೊಂಡ ಗಣೇಶ್​ ನಟನೆಯ ಹೊಸ ಸಿನಿಮಾಗೆ ಹೀರೋಯಿನ್​ ಆಗಲು ಅವಂತಿಕಾ ಒಪ್ಪಿಕೊಂಡಿದ್ದಾರೆ. ತಾಯಿಯ ರೀತಿಯೇ ಅವರು ಚಿತ್ರರಂಗದಲ್ಲಿ ಮಿಂಚುತ್ತಾರೋ ಇಲ್ಲವೋ ಎಂಬ ಕುತೂಹಲ ಅವರ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅವಂತಿಕಾ ಮತ್ತು ಬೆಲ್ಲಂಕೊಂಡ ಗಣೇಶ್​ ಜೊತೆಯಾಗಿ ನಟಿಸಲಿರುವ ಚಿತ್ರಕ್ಕೆ ರಾಕೇಶ್​ ಉಪ್ಪಲಪಾಟಿ ನಿರ್ದೇಶನ ಮಾಡಲಿದ್ದಾರೆ. ಮಹತಿ ಸಾಗರ್​ ಸಂಗೀತ ಸಂಯೋಜನೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಟಿಸಿದ ಬಳಿಕ ಭಾಗ್ಯಶ್ರೀ ಅವರು ಕನ್ನಡದ ಬೇರಾವುದೇ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸಲಿಲ್ಲ. 2019ರಲ್ಲಿ ಬಂದ ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ನಿಖಿಲ್​ ಕುಮಾರ್​ಗೆ ತಾಯಿಯಾಗಿ ಅವರು ನಟಿಸಿದರು. ಪ್ರಭಾಸ್​ ಅಭಿನಯದ ‘ರಾಧೆ ಶ್ಯಾಮ್​’ ಚಿತ್ರದಲ್ಲೂ ಭಾಗ್ಯಶ್ರೀ ಅವರು ತಾಯಿ ಪಾತ್ರ ಮಾಡಿದ್ದಾರೆ. ಆ ಚಿತ್ರ 2022ರ ಜ.14ರಂದು ತೆರೆಕಾಣಲಿದೆ.

ಇದನ್ನೂ ಓದಿ:

Premam Poojyam: ಚಳಿ, ಮಳೆಯನ್ನೂ ಲೆಕ್ಕಿಸದೇ ‘ಪ್ರೇಮಂ ಪೂಜ್ಯಂ’ ಸಿನಿಮಾ ನೋಡಲು ಬಂದ ಪ್ರೇಕ್ಷಕರು

‘ಅಪ್ಪು ನಿಧನದ ಸುದ್ದಿ ಕೇಳಿದಾಗ ರಾಡ್​ನಿಂದ ತಲೆಗೆ ಹೊಡೆದಂತೆ ಆಯ್ತು’; ಕರಾಳ ಕ್ಷಣದ ಬಗ್ಗೆ ಶಿವಣ್ಣನ ಮಾತು

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​