
ನಟಿ ಆ್ಯಮಿ ಜಾಕ್ಸನ್ (Amy Jackson) ಬ್ರಿಟನ್ ಮೂಲದವರು. ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಇದೆ. ಕನ್ನಡದ ‘ದಿ ವಿಲನ್’ ಸಿನಿಮಾದಲ್ಲಿ ಸುದೀಪ್ಗೆ (Kichcha Sudeep) ಜತೆಯಾಗಿ ಅವರು ನಟಿಸಿದ್ದರು. 8 ವರ್ಷಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದ ಅವರು ಹಲವು ಚಿತ್ರಗಳಲ್ಲಿ ನಟಿಸಿದರು. ಅವರು ಈಗ ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಬ್ರಿಟಿಷ್ ಉದ್ಯಮಿ ಜಾರ್ಜ್ ಪನಯೋಟು (George Panayiotou) ಜತೆ ಆ್ಯಮಿ ರಿಲೇಶನ್ಶಿಪ್ನಲ್ಲಿದ್ದರು. ಜಾರ್ಜ್ನಿಂದ ಮಗು ಕೂಡ ಪಡೆದರು. ಆದರೆ, ಇವರ ಸಂಬಂಧ ಮುರಿದು ಬಿದ್ದಿದೆ. ಈಗ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜತೆ ಸುತ್ತಾಟ ನಡೆಸುತ್ತಿರುವುದನ್ನು ಆ್ಯಮಿ ಖಚಿತಪಡಿಸಿದ್ದಾರೆ.
ಜಾರ್ಜ್ ಪನಯೋಟು ಜತೆ ಆ್ಯಮಿ ರಿಲೇಶನ್ಶಿಪ್ನಲ್ಲಿದ್ದರು. ಗರ್ಭಿಣಿ ಆದ ನಂತರದಲ್ಲಿ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡರು. 2019ರಲ್ಲಿ ಆ್ಯಮಿಗೆ ಗಂಡು ಮಗು ಜನಿಸಿತು. ಇದಾದ ನಂತರದಲ್ಲಿ ಆ್ಯಮಿ ಮಗುವಿನ ಜತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. 2021ರಲ್ಲಿ ಆ್ಯಮಿ ಹಾಗೂ ಜಾರ್ಜ್ ಪನಯೋಟು ಬೇರೆ ಆದರು.
ಸದ್ಯ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜತೆ ಆ್ಯಮಿ ಸುತ್ತಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಗಾಸಿಪ್ ಹಬ್ಬಿತ್ತು. ಈಗ ಆ್ಯಮಿ ಇನ್ಸ್ಟಾಗ್ರಾಮ್ನಲ್ಲಿ ಎಡ್ ಜತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ‘ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಆ್ಯಮಿ ಹಾಗೂ ಎಡ್ ಭೇಟಿ ಆದರು. ಈ ವೇಳೆ ಇಬ್ಬರಿಗೂ ಪರಿಚಯ ಬೆಳೆದಿದ್ದು, ಇಬ್ಬರೂ ಡೇಟಿಂಗ್ ಶುರು ಹಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಒಳ ಉಡುಪು ಧರಿಸದೆ ಬೀದಿಗೆ ಬಂದ ಮಾಜಿ ಭುವನ ಸುಂದರಿ; ಮುಂದೇನಾಯ್ತು?
2010ರಲ್ಲಿ ತೆರೆಗೆ ಬಂದ ತಮಿಳಿನ ‘ಮದ್ರಾಸಪಟ್ಟಿಣಂ’ ಸಿನಿಮಾ ಮೂಲಕ ಆ್ಯಮಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಐ’, ‘ಥೆರಿ’ ಅಂಥ ಹಿಟ್ ಚಿತ್ರಗಳಲ್ಲಿ ಆ್ಯಮಿ ನಟಿಸಿದರು. 2018ರಲ್ಲಿ ತೆರೆಗೆ ಬಂದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾಗೂ ಆ್ಯಮಿ ನಾಯಕಿಯಾದರು. ಅದೇ ವರ್ಷ ತೆರೆಗೆ ಬಂದ ‘2.0’ ಅವರ ಕೊನೆಯ ಚಿತ್ರ. ಇದಾದ ನಂತರದಲ್ಲಿ ಅವರು ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾದರು. ಸದ್ಯ, ಆ್ಯಮಿ ಬ್ರಿಟನ್ನಲ್ಲಿಯೇ ಸೆಟಲ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.