2 ತಿಂಗಳ ಬಳಿಕ ಹೊರಬಿತ್ತು ಸೀಕ್ರೆಟ್​ ಮದುವೆ ವಿಷಯ; ಏಪ್ರಿಲ್​ನಲ್ಲೇ ಹಸೆಮಣೆ ಏರಿದ್ದ ಸೆಲೆಬ್ರಿಟಿ ಜೋಡಿ

| Updated By: ರಾಜೇಶ್ ದುಗ್ಗುಮನೆ

Updated on: Jun 26, 2021 | 4:01 PM

ಮದುವೆ ಫೋಟೋಗಳನ್ನು ಕಂಡ ಬಹುತೇಕ ಸೆಲೆಬ್ರಿಟಿಗಳಿಗೆ ಅಚ್ಚರಿ ಆಗಿದೆ. ‘ಇದೇನಿದು ಆಶ್ಚರ್ಯ. ಅಭಿನಂದನೆಗಳು’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

2 ತಿಂಗಳ ಬಳಿಕ ಹೊರಬಿತ್ತು ಸೀಕ್ರೆಟ್​ ಮದುವೆ ವಿಷಯ; ಏಪ್ರಿಲ್​ನಲ್ಲೇ ಹಸೆಮಣೆ ಏರಿದ್ದ ಸೆಲೆಬ್ರಿಟಿ ಜೋಡಿ
ಅಂಗಿರಾ ಧಾರ್​, ಆನಂದ್​ ತಿವಾರಿ
Follow us on

ಸೆಲೆಬ್ರಿಟಿಗಳ ಮದುವೆ ಎಂದರೆ ದೊಡ್ಡ ಮಟ್ಟದಲ್ಲಿಯೇ ಸುದ್ದಿ ಆಗುತ್ತದೆ. ಸಾವಿರಾರು ಜನರನ್ನು ಆಮಂತ್ರಿಸಲಾಗುತ್ತದೆ. ಆದರೆ ಲಾಕ್​ಡೌನ್​ ಕಾರಣದಿಂದ ಅಂಥ ಸಂಪ್ರದಾಯಕ್ಕೆಲ್ಲ ಬ್ರೇಕ್​ ಬೀಳುವಂತಾಯಿತು. ಅನೇಕ ನಟ-ನಟಿಯರು, ತಂತ್ರಜ್ಙರು ರಹಸ್ಯವಾಗಿ ಮದುವೆ ಆಗಿದ್ದಾರೆ. ಲಾಕ್​ಡೌನ್​ ನಿಯಮ ಮತ್ತು ಕೊರೊನಾ ವೈರಸ್​ ಹರಡುವ ಭೀತಿಯ ಕಾರಣಕ್ಕೆ ಗುಟ್ಟಾಗಿ ಹಸೆಮಣೆ ಏರಿದವರ ಸಾಲಿಗೆ ಬಾಲಿವುಡ್​ ನಟ/ನಿರ್ದೇಶಕ ಆನಂದ್​ ತಿವಾರಿ ಹಾಗು ನಟಿ ಅಂಗಿರಾ ಧಾರ್​ ಸೇರಿಕೊಂಡಿದ್ದಾರೆ.

ಅಚ್ಚರಿ ಎಂದರೆ ಏಪ್ರಿಲ್​ 30ರಂದೇ ಆನಂದ್​ ತಿವಾರಿ ಮತ್ತು ಅಂಗಿರಾ ಧಾರ್​ ಅದ್ದೂರಿಯಾಗಿ ಮದುವೆ ಆಗಿದ್ದರು. ಆದರೆ ಆ ವಿಷಯವನ್ನು ಗೌಪ್ಯವಾಗಿ ಇರಿಸಲಾಗಿತ್ತು. ಆಪ್ತರ ಸಮ್ಮುಖದಲ್ಲಿ ಜೋರಾಗಿಯೇ ವಿವಾಹ ಸಮಾರಂಭ ನಡೆದಿದ್ದರೂ ಕೂಡ ಅದರ ಸುಳಿವು ಹೊರಜಗತ್ತಿಗೆ ಸಿಕ್ಕಿರಲಿಲ್ಲ. ಆದರೆ ಈಗ ಸ್ವತಃ ಈ ಜೋಡಿ ತಮ್ಮ ಮದುವೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಷಯವನ್ನು ಜಗಜ್ಜಾಹೀರುಗೊಳಿಸಿದೆ.

‘ಏಪ್ರಿಲ್ 30ರಂದು ನಾನು ಮತ್ತು ಅಂಗಿರಾ ನಮ್ಮ ಸ್ನೇಹಕ್ಕೆ ಮದುವೆಯ ಮುದ್ರೆ ಒತ್ತಿದೆವು. ಕುಟುಂಬದವರು, ಆಪ್ತ ಸ್ನೇಹಿತರು ಮತ್ತು ದೇವರು ಇದಕ್ಕೆ ಸಾಕ್ಷಿ ಆಗಿದ್ದರು. ನಮ್ಮ ಸುತ್ತಮುತ್ತಲಿನ ಜಗತ್ತು ನಿಧಾನ ಅನ್​ಲಾಕ್​ ಆಗುತ್ತಿರುವಾಗ ಈ ಖುಷಿಯನ್ನು ಕೂಡ ನಿಮ್ಮೊಂದಿಗೆ ಅನ್​ಲಾಕ್​ ಮಾಡಲು ನಾವು ನಿರ್ಧರಿಸಿದೆವು’ ಎಂದು ಆನಂದ್​ ತಿವಾರಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಮದುವೆ ಫೋಟೋಗಳನ್ನು ಕಂಡ ಬಹುತೇಕ ಸೆಲೆಬ್ರಿಟಿಗಳಿಗೆ ಅಚ್ಚರಿ ಆಗಿದೆ. ‘ಇದೇನಿದು ಆಶ್ಚರ್ಯ. ಅಭಿನಂದನೆಗಳು’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಬಾಲಿವುಡ್​ನಲ್ಲಿ ನಟ ಮತ್ತು ನಿರ್ದೇಶಕನಾಗಿ ಆನಂದ್​ ತಿವಾರಿ ಗುರುತಿಸಿಕೊಂಡಿದ್ದಾರೆ. ಉಡಾನ್​, ಕೈಟ್ಸ್​, ಗೋ ಗೋವಾ ಗಾನ್​ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಳೆದ ವರ್ಷ ಅಮೇಜಾನ್​ ಪ್ರೈಂನಲ್ಲಿ ತೆರೆಕಂಡು ಯಶಸ್ವಿಯಾದ ‘ಬಂದೀಶ್​ ಬ್ಯಾಂಡಿಟ್​’​ ವೆಬ್​ ಸಿರೀಸ್​ಗೆ ಆನಂದ್​ ತಿವಾರಿ ನಿರ್ದೇಶನ ಮಾಡಿದ್ದಾರೆ. ‘ಲವ್​ ಪರ್​ ಸ್ಕ್ವೇರ್​ ಫೂಟ್​’, ‘ಟಿಕೆಟ್​ ಟು ಬಾಲಿವುಡ್​’ ಮುಂತಾದ ಚಿತ್ರಗಳು ಅವರ ನಿರ್ದೇಶನದಲ್ಲಿ ಮೂಡಿಬಂದಿವೆ.

ಇದನ್ನೂ ಓದಿ:

ಮದುವೆ ಆಗಿ 6 ತಿಂಗಳಿಗೆ ವೈರಲ್​ ಆಯ್ತು ಚಹಾಲ್​-ಧನಶ್ರೀ ವಿಡಿಯೋ; ಕ್ರಿಕೆಟಿಗನ ಪತ್ನಿ ಹೇಳಿದ್ದೇನು?

ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?