ದಶಕಗಳ ಹಿಂದೆಯೇ ಅನಿರುದ್ಧ್ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ವಿವಾಹವು ನವೆಂಬರ್ 21 ರಂದು ಚೆನ್ನೈನಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ, ಹತ್ತು ವರ್ಷಗಳ ಹಿಂದೆ ಟ್ಯಾರೋ ಕಾರ್ಡ್ ಮೂಲಕ ಅನಿರುದ್ಧ್ ಅವರ ಪತ್ನಿಯ ಬಗ್ಗೆ ನುಡಿಯಲಾಗಿದ್ದ ಹಳೆಯ ಭವಿಷ್ಯವಾಣಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಶಕಗಳ ಹಿಂದೆಯೇ ಅನಿರುದ್ಧ್ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಕಾವ್ಯಾ-ಅನಿರುದ್ಧ್

Updated on: Oct 19, 2026 | 10:34 AM

ಮುಖ್ಯಾಂಶಗಳು

  • ವೈರಲ್ ಆದ ಹತ್ತು ವರ್ಷಗಳ ಹಿಂದಿನ ಟ್ಯಾರೋ ಕಾರ್ಡ್ ಭವಿಷ್ಯ
  • ಕಾವ್ಯಾ ಮಾರನ್ ಹಿನ್ನೆಲೆಗೆ ಅಚ್ಚರಿಯಂತೆ ಹೊಂದಿಕೊಂಡ ನುಡಿಗಳು
  • ನವೆಂಬರ್ 21 ರಂದು ಚೆನ್ನೈನಲ್ಲಿ ಅದ್ಧೂರಿ ಸ್ವಾಗತ ಸಮಾರಂಭ

ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ಮದುವೆಯ ಸುದ್ದಿ ಜೋರಾಗಿ ಚರ್ಚೆ ಆಗುತ್ತಿದೆ. ಈ ನಡುವೆ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಜ್ಯೋತಿಷಿ ಜಯಶ್ರೀ ಅವರು ಅನಿರುದ್ಧ್ ಅವರ ಮದುವೆ ಹಾಗೂ ಅವರ ಭವಿಷ್ಯದ ಪತ್ನಿಯ ಬಗ್ಗೆ ಕೆಲವು ರೋಚಕ ಭವಿಷ್ಯ ನುಡಿದಿದ್ದರು. ಕಾವ್ಯಾ ಮಾರನ್ ಅವರ ಹಿನ್ನೆಲೆಗೂ ಅಂದು ನುಡಿದಿದ್ದ ಭವಿಷ್ಯಕ್ಕೂ ಹೊಂದಾಣಿಕೆ ಇದೆ.

ಹತ್ತು ವರ್ಷಗಳ ಹಿಂದೆ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಜ್ಯೋತಿಷಿ ಜಯಶ್ರೀ ಭಾಗವಹಿಸಿದ್ದರು. ಅಪ್ಸರಾ ರೆಡ್ಡಿ ನಡೆಸಿಕೊಟ್ಟ ಈ ಶೋನಲ್ಲಿ ಅವರು ಅನಿರುದ್ಧ್ ಅವರ ಸಂಗಾತಿ ಹೇಗಿರುತ್ತಾರೆ ಎಂದು ತಿಳಿಸಿದ್ದರು. ಪಾರ್ಟಿಯೊಂದರಲ್ಲಿ ಇವರ ಭೇಟಿಯಾಗಲಿದೆ ಎಂದು ಅವರು ಹೇಳಿದ್ದರು. ಅಲ್ಲದೆ, ಆ ಮಹಿಳೆ ಪ್ರಸಾರ ಮಾಧ್ಯಮ ಅಥವಾ ದೂರಸಂಪರ್ಕ ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.

ಅಷ್ಟೇ ಅಲ್ಲದೆ, ಆ ಯುವತಿ ಅತ್ಯಂತ ವಿದ್ಯಾವಂತೆ ಮತ್ತು ತಾರ್ಕಿಕ ಚಿಂತನೆ ಹೊಂದಿರುವವರಾಗಿರುತ್ತಾರೆ ಎಂದು ಅವರು ತಿಳಿಸಿದ್ದರು. ಅನಿರುದ್ಧ್ ಅವರ ಮನೆಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿಯೇ ಆಕೆಯ ಮನೆ ಇರಲಿದೆ ಎಂದೂ ಹೇಳಲಾಗಿತ್ತು. ಇವರದ್ದು ಪ್ರೇಮ ವಿವಾಹವಾಗಲಿದೆ ಎಂದು ಜ್ಯೋತಿಷಿ ನುಡಿದಿದ್ದ ಮಾತುಗಳು ಈಗ ಅಚ್ಚರಿ ಹುಟ್ಟುಹಾಕಿವೆ. ಕಾವ್ಯಾ ಮಾರನ್ ಅವರು ಸನ್ ನೆಟ್‌ವರ್ಕ್‌ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಅವರು ವಾರ್ವಿಕ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.

ಈ ಮದುವೆಯ ಸುದ್ದಿಗೆ ಅಧಿಕೃತ ಮುದ್ರೆ ಎಂಬಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಆಹ್ವಾನ ಸ್ವೀಕರಿಸಿದ್ದಾರೆ. ಚೆನ್ನೈನಲ್ಲಿ ನವೆಂಬರ್ 21ರಂದು ಅದ್ಧೂರಿ ಮದುವೆ ನಡೆಯಲಿದೆ. ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಹಾಗೂ ಕಾವೇರಿ ಮಾರನ್ ಅವರು ಖುದ್ದಾಗಿ ತೆಲಂಗಾಣ ಮುಖ್ಯಮಂತ್ರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅನಿರುದ್ಧ್​-​ಕಾವ್ಯಾ ಮಾರನ್​ ಮದುವೆ: ಸಿಎಂ ಡಿಕೆ ಶಿವಕುಮಾರ್‌ಗೆ ಆಹ್ವಾನ ಪತ್ರಿಕೆ ನೀಡಿದ ಕಲಾನಿಧಿ ಮಾರನ್ ದಂಪತಿ!

ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರಿಗೂ ಮದುವೆಯ ಆಹ್ವಾನ ನೀಡಲಾಗಿದೆ. ಕುಟುಂಬದವರಿಂದ ಇನ್ನೂ ಹೆಚ್ಚಿನ ವಿವರಗಳು ಹೊರಬರಬೇಕಿದೆ. ಸದ್ಯ ನಟ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಜೋಡಿಯ ಮದುವೆ ಸದ್ದು ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:14 am, Mon, 19 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us