ರಜನಿಕಾಂತ್ ನಟನೆಯ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತದೆ. ಅವರಿಗೆ ಇರುವ ದೊಡ್ಡ ಫ್ಯಾನ್ಬೇಸ್ ಇದಕ್ಕೆಲ್ಲ ಕಾರಣ. ಈಗ ದೀಪಾವಳಿ ನಿಮಿತ್ತ ನವೆಂಬರ್ 4ರಂದು ರಿಲೀಸ್ ಆಗಿರುವ ‘ಅಣ್ಣಾಥೆ’ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ. ಮೊದಲ ದಿನವೇ ಈ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಹಾಗಾದರೆ, ರಜನಿ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಸಿನಿಮಾ ತೆರೆಗೆ ಬಂದಿದೆ. ಕರ್ನಾಟಕ ಹಾಗೂ ಆಂಧ್ರ ಸೇರಿ ಮತ್ತಿತರ ರಾಜ್ಯಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಿದೆ. ಮೊದಲ ದಿನ ಈ ಚಿತ್ರ ಗಳಿಕೆ ಮಾಡಿದ್ದು ಬರೋಬ್ಬರಿ 34.92 ಕೋಟಿ ರೂ. ಎನ್ನಲಾಗಿದೆ. ಈ ಮೂಲಕ ರಜನಿ ಸಿನಿಮಾ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದೆ. ತಮಿಳುನಾಡಿನಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ‘ಅಣ್ಣಾಥೆ’ ಪಾಲಾಗಿದೆ.
ರಜನಿಕಾಂತ್ ನಟನೆಯ ಈ ಹಿಂದಿನ ಚಿತ್ರಗಳು ಒಳ್ಳೆಯ ಗಳಿಕೆ ಮಾಡಿದ್ದವು. ಆದರೆ, ಈ ಮಟ್ಟದ ಕಲೆಕ್ಷನ್ ಆಗಿರಲಿಲ್ಲ. ಅವರ ನಟನೆಯ ‘2.0′ ಸಿನಿಮಾ ಮೊದಲ ದಿನ ತಮಿಳುನಾಡಿನಲ್ಲಿ 33.58 ಕೋಟಿ ರೂ. ಗಳಿಸಿತ್ತು. ಹಾಗೆಯೇ, ದಳಪತಿ ವಿಜಯ್ ನಟನೆಯ ‘ಸರ್ಕಾರ್’ ಸಿನಿಮಾ 31.62 ಕೋಟಿ ರೂ. ಗಳಿಸಿತ್ತು. ಉಳಿದ ಯಾವ ಸಿನಿಮಾಗಳು ‘ಅಣ್ಣಾಥೆ’ ಮಟ್ಟಕ್ಕೆ ಗಳಿಕೆ ಮಾಡಿಲ್ಲ. ‘ಅಣ್ಣಾಥೆ’ ಸಿನಿಮಾ ರಜನಿ ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ಆಗಿದೆ.
‘ಅಣ್ಣಾಥೆ’ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ರಜನಿಕಾಂತ್, ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದೀಪಾವಳಿ ನಿಮಿತ್ತ ಈ ಸಿನಿಮಾ ನವೆಂಬರ್ 4ರಂದು ತೆರೆಗೆ ಬಂದಿದೆ. ಈಗ ಸಾಲು ಸಾಲು ರಜೆ ಇರುವುದರಿಂದ ಸಿನಿಮಾ ಗಳಿಕೆ ಅನಾಯಾಸವಾಗಿ 50 ಕೋಟಿ ರೂಪಾಯಿ ದಾಟಲಿದೆ.
ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್