
ಅನುಪಮಾ ಪರಮೇಶ್ವರನ್ ಅವರು ಈ ಮೊದಲು ಪುನೀತ್ ರಾಜ್ಕುಮಾರ್ ಜೊತೆ ‘ನಟಸಾರ್ವಭೌಮ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿಯನ್ನು ಜನರು ಇಷ್ಟಪಟ್ಟರು. ಅನುಪಮಾ ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು. ಅವರಿಗೆ ಪುನೀತ್ ರಾಜ್ಕುಮಾರ್ ಜೊತೆ ಒಳ್ಳೆಯ ಬಾಂಡ್ ಬೆಳೆದಿತ್ತು. ಈ ಬಾಂಡಿಂಗ್ ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಪುನೀತ್ ಸರಳತೆಯನ್ನು ಅನುಪಮಾ (Anupama) ಕೊಂಡಾಡಿದ್ದಾರೆ ಎಂದೇ ಹೇಳಬಹುದು.
ಅನುಪಮಾ ಪರಮೇಶ್ವರನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದರು. ಈ ಸಂದರ್ಶನದಲ್ಲಿ ಮಾತನಾಡುವಾಗ ಅವರಿಗೆ ‘ನಟಸಾರ್ವಭೌಮ’ ಚಿತ್ರದ ಶೂಟಿಂಗ್ ಅನುಭವಗಳು ನೆನಪಿಗೆ ಬಂದವು. ಅಲ್ಲದೆ, ಆ ಸಮಯದಲ್ಲಿ ಪುನೀತ್ ಅವರ ಸರಳತೆಯ ಪರಿಚಯ ಆಯಿತು ಮತ್ತು ಅವರು ಯಾವ ರೀತಿಯಲ್ಲಿ ಇರುತ್ತಿದ್ದರು ಎಂಬುದನ್ನು ಅವರು ವಿವರಿಸುವ ಕೆಲಸವನ್ನು ಮಾಡಿದರು.
‘ಪುನೀತ್ ಅವರು ಅದ್ಭುತ ವ್ಯಕ್ತಿ. ನಟಸಾರ್ವಭೌಮ ಚಿತ್ರವನ್ನು ಸಣ್ಣ ಜಾಗದಲ್ಲಿ ಶೂಟ್ ಮಾಡಲಾಗುತ್ತಿತ್ತು. ಅಲ್ಲಿ ಕುಳಿತುಕೊಳ್ಳಲು ಜಾಗವೇ ಇರಲಿಲ್ಲ. ಒಂದು ಕುರ್ಚಿ ಮಾತ್ರ ಇತ್ತು. ನನ್ನ ತಾಯಿ ಚೇರ್ಮೇಲೆ ಕುಳಿತಿದ್ದರು. ಪುನೀತ್ ಬರುತ್ತಿದ್ದಂತೆ ನನ್ನ ತಾಯಿ ಎದ್ದುಕೊಂಡರು. ಆದರೆ, ಚೇರ್ ಮೇಲೆ ತಾಯಿಯನ್ನು ಕೂರಿಸಿ ಅವರು ಫುಟ್ಪಾತ್ ಮೇಲೆ ಹೋಗಿ ಕುಳಿತರು. ಸ್ಟಾರ್ ಆಗಿ ಇದನ್ನೆಲ್ಲ ಮಾಡುವ ಅಗತ್ಯ ಇರಲಿಲ್ಲ. ಈಗಿನ ಜನರೇಶನ್ಗೆ ಈ ರೀತಿಯ ಮನಸ್ಥಿತಿ ಇಲ್ಲ’ ಎಂದು ಅನುಪಮಾ ಅವರು ನೇರ ಮಾತುಗಳಲ್ಲಿ ಹೇಳಿದರು.
superstar on screen, yet humble like a common man 🤍
His simplicity was his true stardom 🌟#Drpuneethrajkumar 🐐♾️ pic.twitter.com/YZgdDaApFq— 𝕽𝖆𝖏_𝖆𝖕𝖕𝖚.🎯 (@Rajappu4431) August 12, 2025
ಪುನೀತ್ ಹಾಗೂ ಅನುಪಮಾ ಅವರ ಗೆಳೆತನ ಉತ್ತಮವಾಗಿತ್ತು. ಅವರು ನಿಧನ ಹೊಂದಿದ್ದಾರೆ ಎಂಬ ವಿಚಾರವನ್ನು ಅನುಪಮಾಗೆ ನಂಬೋಕೆ ಸಾಧ್ಯವೇ ಆಗಿರಲಿಲ್ಲ. ಅವರನ್ನು ಕಳೆದುಕೊಂಡು ಎಲ್ಲರೂ ಸಾಕಷ್ಟು ನೊಂದಿದ್ದಾರೆ. 2021ರ ಅಕ್ಟೋಬರ್ನಲ್ಲಿ ಪುನೀತ್ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಅದೇ ದಿನ ಶಿವರಾಜ್ಕುಮಾರ್ ನಟನೆಯ ‘ಬಜರಂಗಿ 2’ ಸಿನಿಮಾ ಕೂಡ ರಿಲೀಸ್ ಆಗಿತ್ತು.
ಇದನ್ನೂ ಓದಿ: ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಮಿಂಚಿದ ಅನುಪಮಾ ಪರಮೇಶ್ವರನ್
ಅನುಪಮಾ ಅವರು ಸದ್ಯ ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಆರಂಭದಲ್ಲಿ ಬೋಲ್ಡ್ ಪಾತ್ರಗಳನ್ನು ಮಾಡಲು ಸುತರಾಂ ಒಪ್ಪುತ್ತಾ ಇರಲಿಲ್ಲ. ಆದರೆ, ಇತ್ತೀಚೆಗೆ ಅವರು ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಯಾವುದೇ ಮುಜುಗರ ಮಾಡಿಕೊಳ್ಳುತ್ತಿಲ್ಲ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.