ಆರ್​ಸಿಬಿ ಗೆಲುವಿನ ಖುಷಿಯಲ್ಲಿ ವಿರಾಟ್​ಗೆ ಮುತ್ತಿನ ಸುರಿಮಳೆ ಸುರಿಸಿದ ಅನುಷ್ಕಾ ಶರ್ಮಾ

ಆರ್​​ಸಿಬಿ ತಂಡದ ರೋಮಾಂಚಕ ಗೆಲುವಿನ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿರಾಟ್ ಅವರ ಕಿಸ್‌ಗೆ ಪ್ರತಿಯಾಗಿ ಅನುಷ್ಕಾ ಮುತ್ತಿನ ಸುರಿಮಳೆಯಿಂದ ಪ್ರತಿಕ್ರಿಯಿಸಿದ್ದು ವಿಶೇಷ. ಪಂದ್ಯದಲ್ಲಿ ವಿರಾಟ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಜಿತೇಶ್ ಶರ್ಮಾ ಅವರ ಅಮೋಘ ಆಟದಿಂದ RCB ಗೆಲುವು ಸಾಧಿಸಿತು.

ಆರ್​ಸಿಬಿ ಗೆಲುವಿನ ಖುಷಿಯಲ್ಲಿ ವಿರಾಟ್​ಗೆ ಮುತ್ತಿನ ಸುರಿಮಳೆ ಸುರಿಸಿದ ಅನುಷ್ಕಾ ಶರ್ಮಾ
ಅನುಷ್ಕಾ-ವಿರಾಟ್

Updated on: May 28, 2025 | 7:25 AM

ಮೇ 27ರಂದು ನಡೆದ ಎಲ್​ಎಸ್​ಜಿ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ (Jitesh Sharma) ನಾಯಕತ್ವದ ಆರ್​ಸಿಬಿ ತಂಡ ರೋಚಕ ಗೆಲುವು ಸಾಧಿಸಿತು. ಲಖನೋನ ಎಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಅದ್ಭುತ ಪ್ರದರ್ಶನ ನೀಡಿ ಕ್ವಾಲಿಫೈಯರ್ 1ಕ್ಕೆ ಸ್ಥಾನ ಪಡೆದುಕೊಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರ್​ಸಿಬಿ ಪಂದ್ಯ ಗೆದ್ದ ಬಳಿಕ ಅನುಷ್ಕಾ ಶರ್ಮಾ ಅವರು ಪತಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಅನುಷ್ಕಾ ಮುತ್ತಿನ ಮಳೆಯನ್ನೇ ಸುರಿಸಿದರು.

ಎಲ್​ಎಸ್​ಜಿ ಹಾಗೂ ಆರ್​ಸಿಬಿ ನಡುವಣ ಪಂದ್ಯ ವೀಕ್ಷಣೆಗೆ ಅನುಷ್ಕಾ ಶರ್ಮಾ ಅವರು ಬಂದಿದ್ದರು. ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಎಲ್​ಎಸ್​ಜಿ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಆ ಬಳಿಕ ಬಿರುಸಿನ ಆಟವನ್ನು ಆಡಿದರು. ಈ ವೇಳೆ ಅನುಷ್ಕಾ ಶರ್ಮಾ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ಇನ್ನು, ವಿರಾಟ್ ಕೊಹ್ಲಿ ಅವರು ಬ್ಯಾಟ್ ಬೀಸುವಾಗ, ಅರ್ಧಶತಕ ಆದಾಗ ಅನುಷ್ಕಾ ಕುಣಿದು ಕುಪ್ಪಳಿಸಿದ್ದರು.

ಇದನ್ನೂ ಓದಿ
ಕಮಲ್ ಹಾಸನ್ ವಿವಾದ: ಕನ್ನಡಿಗರ ಕೆರಳಿಸಿದ ನಟನ​ ಚಿತ್ರಕ್ಕೆ ಸಂಕಷ್ಟ
‘ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ’; ಅನುಶ್ರೀಗೆ ನೇರವಾಗಿ ಹೇಳಿದ ಮನೋಜ್
ಸುರದ್ರೂಪಿ ಶ್ರೀಧರ್ ಕೊನೆಯ ದಿನಗಳು ಹೀಗಿದ್ದವು; ವೈರಿಗಳಿಗೂ ಹೀಗಾಗಬಾರದು
‘ಪಾರು’ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ; ಫಲಿಸಲಿಲ್ಲ ಪ್ರಾರ್ಥನೆ

ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಹೋಪ್ ಕಡೆಮೆ ಆಯಿತು. ಈ ವೇಳೆ ಜಿತೇಶ್ ಶರ್ಮಾ ಅವರು 33 ಬಾಲ್​ಗೆ 83 ರನ್ ಚಚ್ಚಿ ಆರ್​ಸಿಬಿ ಗೆಲುವಿಗೆ ಪ್ರಮುಖ ರುವಾರಿ ಆದರು. ಮ್ಯಾಚ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರು ಖುಷಿಯಿಂದ ಓಡೋಡಿ ಬಂದರು. ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಅನುಷ್ಕಾ ಅವರು ಮುತ್ತುಗಳ ಸುರಿಮಳೆ ಸುರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೇ 29ರಂದು ಆರ್​ಸಿಬಿ ತಂಡವು ಪಂಜಾಬ್ ತಂಡವನ್ನು ಎದುರಿಸಲಿದೆ. ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಹಾಗೂ ಅನುಷ್ಕಾ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಪರಸ್ಪರ ಭೇಟಿ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ಸಿನಿಮಾ ವಿಚಾರಕ್ಕೆ ಬರೋದಾದರೆ ‘ಜೀರೋ’ (2018) ಚಿತ್ರದ ಬಳಿಕ ಅನುಷ್ಕಾ ಅವರ ಯಾವುದೇ ಸಿನಿಮಾ ರಿಲೀಸ ಆಗಿಲ್ಲ. ‘ಚಕ್ದಾ ಎಕ್ಸ್​ಪ್ರೆಸ್’ ಸಿನಿಮಾದ ಶೂಟ್ ಪೂರ್ಣಗೊಂಡಿದೆಯಾದರೂ ರಿಲೀಸ್ ಬಗ್ಗೆ ಸ್ಪಷ್ಟತೆ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.