
ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ತೆಲುಗು ರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದರೂ ಉಳಿದ ಭಾಷೆಯವರಿಗೆ ಅವರ ಪರಿಚಯ ಇದೆ. ಇಂದು (ನವೆಂಬರ್ 7) ಅನುಷ್ಕಾ ಶೆಟ್ಟಿ ಅವರಿಗೆ ಜನ್ಮದಿನ. ಅನುಷ್ಕಾ ಶೆಟ್ಟಿ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ಅನುಷ್ಕಾ ಶೆಟ್ಟಿ ಅವರು ಪ್ರಭಾಸ್ ಸೇರಿ ಹಲವು ಸೂಪರ್ ಸ್ಟಾರ್ಗಳ ಜೊತೆ ನಟಿಸಿದ್ದಾರೆ. ಈಗ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ ಈ ವರ್ಷ ರಿಲೀಸ್ ಆಯಿತು. ಆದರೆ, ಈ ಚಿತ್ರದ ಪ್ರಚಾರಕ್ಕೆ ಅವರು ತೆರಳಿಲ್ಲ. ಈ ಸಿನಿಮಾ ಸೋಲಲು ಇದು ಕೂಡ ಕಾರಣ ಎಂದು ಹೇಳಲಾಗುತ್ತಾ ಇದೆ.
ಮಂಗಳೂರು ಮೂಲದ ಅನುಷ್ಕಾ ಶೆಟ್ಟಿ ಓದಿದ್ದು ಬೆಂಗಳೂರಿನಲ್ಲಿ. ಅವರಿಗೆ ಕನ್ನಡ ಮಾತನಾಡಲು ಬರುತ್ತದೆ. ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಈ ಮೊದಲು ಅನುಷ್ಕಾ ಶೆಟ್ಟಿ ಅವರ ತಾಯಿಗೆ ಜನ್ಮದಿನದ ವಿಶ್ ತಿಳಿಸುವಾಗ ಅವರು ಕನ್ನಡದಲ್ಲೇ ಟ್ವೀಟ್ ಮಾಡಿದ್ದರು ಅನ್ನೋದು ವಿಶೇಷ. ಇದು ಅವರ ಕನ್ನಡದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.
ಇದನ್ನೂ ಓದಿ:ಅನುಷ್ಕಾ ಶೆಟ್ಟಿ-ಪ್ರಭಾಸ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ
ಅನುಷ್ಕಾ ಶೆಟ್ಟಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2005ರಲ್ಲಿ. ‘ಸೂಪರ್’ ಅವರ ನಟನೆಯ ಮೊದಲ ಸಿನಿಮಾ. ಅವರು ಟಾಲಿವುಡ್ನಲ್ಲಿ ಭರ್ಜರಿ ಹೆಸರು ಮಾಡಿದರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಅನುಷ್ಕಾ ಚ್ಯೂಸಿ ಆಗಿದ್ದಾರೆ. ಅವರು ದೊಡ್ಡ ದೊಡ್ಡ ಗೆಲುವು ಕಂಡಿದ್ದಾರೆ. ಸಿನಿಮಾ ಹಿಟ್ ಆದರೆ, ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಇದಕ್ಕೆ ಇದಕ್ಕೆ ಅನುಷ್ಕಾ ಶೆಟ್ಟಿ ಅಪವಾದ ಎಂದರೂ ತಪ್ಪಾಗಲಿಕ್ಕಿಲ್ಲ. ‘ಬಾಹುಬಲಿ 2’ ಹಿಟ್ ಆದ ಬಳಿಕ ಅನುಷ್ಕಾ ನಟಿಸಿದ್ದು ಕೆಲವೇ ಸಿನಿಮಾಗಳಲ್ಲಿ ಮಾತ್ರ ಎಂದರೂ ತಪ್ಪಾಗಲಾರದು.
ಅನುಷ್ಕಾ ಶೆಟ್ಟಿ ಅವರ ನಟನೆಯ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರವನ್ನು ‘ಬಾಬಹುಬಲಿ: ದಿ ಎಪಿಕ್ ಆಗಿ ರಿಲೀಸ್ ಮಾಡಲಾಗಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ ಎಂಬ ಬೇಸರ ತಂಡದವರಿಗೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ