Anushka Shetty: ನಟಿ ಅನುಷ್ಕಾ ಶೆಟ್ಟಿ ಹೀಗಾಗಿದ್ದೇಕೆ? ಫೋಟೋ ನೋಡಿ ಫ್ಯಾನ್ಸ್​ ಶಾಕ್​

ಅನುಷ್ಕಾ ಶೆಟ್ಟಿ ‘ಬಾಹುಬಲಿ’ ಸಿನಿಮಾದಲ್ಲಿ ದೇವಸೇನಾ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರು ನಿಭಾಯಿಸಿದ ಎರಡು ಶೇಡ್​ನ ಪಾತ್ರ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

Anushka Shetty: ನಟಿ ಅನುಷ್ಕಾ ಶೆಟ್ಟಿ ಹೀಗಾಗಿದ್ದೇಕೆ? ಫೋಟೋ ನೋಡಿ ಫ್ಯಾನ್ಸ್​ ಶಾಕ್​
ಅನುಷ್ಕಾ ಶೆಟ್ಟಿ
Edited By:

Updated on: May 13, 2021 | 5:16 PM

ನಟಿ ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಹರಿದಾಡಿತ್ತು. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದರು. ಈ ವಿಚಾರ ಹರಿದಾಡುತ್ತಿರುವಾಗಲೇ ಅನುಷ್ಕಾ ಹೊಸ ಫೋಟೋ ಒಂದು ವೈರಲ್ ಆಗಿದ್ದು, ಅವರ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಅನುಷ್ಕಾ ಶೆಟ್ಟಿ ‘ಬಾಹುಬಲಿ’ ಸಿನಿಮಾದಲ್ಲಿ ದೇವಸೇನಾ ಆಗಿ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿ ಅವರ ಎರಡು ಶೇಡ್​ ಪಾತ್ರ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ‘ಬಾಹುಬಲಿ’ ತೆರೆಕಂಡ ನಂತರದಲ್ಲಿ ಅನುಷ್ಕಾ ‘ಭಾಗಮತಿ’, ‘ಸೈರಾ ನರಸಿಂಹ ರೆಡ್ಡಿ’, ‘ನಿಶಬ್ದಂ’ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಅವರು ಸಿನಿಮಾದಲ್ಲಾಗಲೀ, ಸಾರ್ವಜನಿಕವಾಗಿ ಆಗಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಈಗ ಅನುಷ್ಕಾ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಸಾಕಷ್ಟು ದಪ್ಪವಾಗಿ ಕಾಣಿಸಿಕೊಂಡಿದ್ದಾರೆ.

2015ರಲ್ಲಿ ತೆರೆಗೆ ಬಂದ ‘ಸೈಜ್ ಜೀರೋ’ ಚಿತ್ರಕ್ಕಾಗಿ ಅನುಷ್ಕಾ ಸಾಕಷ್ಟು ದಪ್ಪ ಆಗಿದ್ದರು. ನಂತರ ಅವರು ಸ್ವಲ್ಪ ತೂಕ ಇಳಿಸಿಕೊಂಡಿದ್ದರು. ಆದರೆ, ಈಗ ಹರಿದಾಡುತ್ತಿರುವ ಹೊಸ ಫೋಟೋದಲ್ಲಿ ಅನುಷ್ಕಾ ಶೆಟ್ಟಿ ಮತ್ತೆ ದಪ್ಪ ಆಗಿದ್ದಾರೆ. ಈಗ ಅನುಷ್ಕಾ ಮುಖದಲ್ಲಿ ಮೊದಲಿನಷ್ಟು ಚಾರ್ಮ್​ ಇಲ್ಲ. ಅವರ ಮುಖ ಸ್ವಲ್ಪ ಊದಿಕೊಂಡಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಕೆಲವರು ಅನುಷ್ಕಾಗೆ ತೂಕ ಇಳಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಒಟ್ಟಾಗಿ ನಟಿಸಿದ್ದರು. ಇವರ ಮಧ್ಯೆ ಪ್ರೀತಿ ಇದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ, ಇವರು ಮದುವೆ ಕೂಡ ಆಗಲಿದ್ದಾರೆ ಎನ್ನುವ ಮಟ್ಟಿಗೆ ಚರ್ಚೆಗಳು ನಡೆದಿದ್ದವು. ಆದರೆ, ಆ ರೀತಿಯ ಯಾವುದೇ ಬೆಳವಣಿಗೆ ನಡೆಯಲಿಲ್ಲ. ಕೆಲ ತಿಂಗಳ ಹಿಂದೆ ನಿರ್ದೇಶಕ ಪ್ರಕಾಶ್ ಕೊವೆಲಮುಡಿ ಜತೆಗೆ ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ದುಬೈ ಮೂಲದ ಉದ್ಯಮಿ ಜತೆ ಅನುಷ್ಕಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: Anushka Shetty Wedding: ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ? ಮದುವೆ ಆಗ್ತಿರೋ ಹುಡುಗ ಯಾರು?