ಪ್ರಭಾಸ್ ಜೊತೆ ಸಿನಿಮಾ: ಸ್ವೀಟಿ ಅನುಷ್ಕಾ ಶೆಟ್ಟಿ ಹೇಳಿದ್ದೇನು?
Anushka Shetty-Prabhas: ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಅವರದ್ದು ತೆಲುಗು ಚಿತ್ರರಂಗದ ಬಲು ಹಿಟ್ ಜೋಡಿ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅಭಿಮಾನಿಗಳು ಈ ಇಬ್ಬರೂ ಮತ್ತೆ ಸಿನಿಮಾ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದೀಗ ಅನುಷ್ಕಾ ಶೆಟ್ಟಿಯ ‘ಘಾಟಿ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಪ್ರಭಾಸ್ ಜೊತೆಗಿನ ಸಿನಿಮಾ ಬಗ್ಗೆ ಅನುಷ್ಕಾ ಶೆಟ್ಟಿ ಮಾತನಾಡಿದ್ದಾರೆ.

ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ಬಾಲಿವುಡ್ನ ಮೋಸ್ಟ್ ಹಾಟ್, ಗ್ಲಾಮರಸ್ ನಟಿಯರು ಸಹ ಪ್ರಭಾಸ್ ಜೊತೆಗೆ ಮನಟಿಸಲು ಅವಕಾಶ ಸಿಕ್ಕರೆ ಸಾಕೆಂದು ಕಾಯುತ್ತಿದ್ದಾರೆ. ಆದರೆ ತೆಲುಗು ಸಿನಿಮಾ ಅಭಿಮಾನಿಗಳಿಗೆ ಪ್ರಭಾಸ್ ಜೊತೆಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿಯಲ್ಲಿ ನೋಡುವುದೇ ಇಷ್ಟ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಯದ್ದು ತೆಲುಗಿನ ಬಹಳ ಇಷ್ಟದ ಜೋಡಿ. ಆದರೆ ಈ ಇಬ್ಬರು ಒಟ್ಟಿಗೆ ನಟಿಸಿ ವರ್ಷಗಳೇ ಆಗಿವೆ. ಇದೀಗ ಅನುಷ್ಕಾ ಶೆಟ್ಟಿ ಇದೀಗ ಈ ಬಗ್ಗೆ ಮಾತನಾಡಿದ್ದಾರೆ.
ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ಆದರೆ ಅನುಷ್ಕಾ ಶೆಟ್ಟಿ ಬಹಿರಂಗ ಪ್ರಚಾರದಲ್ಲಿ ಭಾಗವಹಿಸಿಲ್ಲ. ಆದರೆ ಫೋನ್ ಮೂಲಕ ಪತ್ರಕರ್ತರಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಪ್ರಭಾಸ್ ಜೊತೆಗೆ ಮುಂದಿನ ಸಿನಿಮಾನಲ್ಲಿ ನಟಿಸುತ್ತೀರ ಎಂಬ ಪ್ರಶ್ನೆಗೂ ಸಹ ಅನುಷ್ಕಾ ಶೆಟ್ಟಿ ಉತ್ತರ ನೀಡಿದ್ದಾರೆ.
‘ಪ್ರಭಾಸ್ ಜೊತೆಗೆ ನಟಿಸುವುದೆಂದರೆ ನನಗೆ ಬಹಳ ಖುಷಿ. ನಾನೂ ಸಹ ಆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ‘ಬಾಹುಬಲಿ’ ಅಂಥಹಾ ಸಿನಿಮಾದ ಬಳಿಕ ಮತ್ತೆ ನಾವಿಬ್ಬರೂ ಒಟ್ಟಿಗೆ ನಟಿಸಬೇಕೆಂದರೆ ಆ ಸಿನಿಮಾ ಭಿನ್ನವಾಗಿಯೂ, ವಿಶೇಷವಾಗಿಯೂ ಆಗಿರಬೇಕು. ಒಳ್ಳೆಯ ಚಿತ್ರಕತೆ ಬಂದರೆ ನಾನಂತೂ ತಯಾರಿದ್ದೇನೆ’ ಎಂದಿದ್ದಾರೆ ಅನುಷ್ಕಾ ಶೆಟ್ಟಿ.
ಇದನ್ನೂ ಓದಿ:‘ಘಾಟಿ’ ಸಿನಿಮಾ ಟ್ರೈಲರ್: ಖತರ್ನಾಕ್ ಸ್ಮಗ್ಲರ್ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ
‘ಬಾಹುಬಲಿ’ ಸಿನಿಮಾದ ಬಗ್ಗೆಯೂ ಮಾತನಾಡಿದ ಅನುಷ್ಕಾ, ‘ನಾನು ಈಗಲೂ ‘ಬಾಹುಬಲಿ’ ತಂಡದ ಜೊತೆಗೆ ಸಂಪರ್ಕದಲ್ಲಿದ್ದೇನೆ. ಇತ್ತೀಚೆಗೆ ‘ಬಾಹುಬಲಿ’ 10ನೇ ವರ್ಷದ ವಾರ್ಷಿಕೋತ್ಸವ ಪಾರ್ಟಿಯಲ್ಲಿ ಭಾಗವಹಿಸಲು ಆಗಲಿಲ್ಲ. ಆದರೆ ‘ಬಾಹುಬಲಿ’ ಸಿನಿಮಾದ ಬಗ್ಗೆ ಪ್ರತ್ಯೇಕ ಡಾಕ್ಯುಮೆಂಟರಿ ತಯಾರಾಗುತ್ತಿದ್ದು ಆ ಡಾಕ್ಯುಮೆಂಟರಿ ಶೂಟಿಂಗ್ನಲ್ಲಿ ನಾನು ಸಹ ಭಾಗವಹಿಸಿದ್ದೀನಿ’ ಎಂದಿದ್ದಾರೆ ನಟಿ ಅನುಷ್ಕಾ ಶೆಟ್ಟಿ.
ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಬಲು ಆಪ್ತ ಗೆಳೆಯರು. ಇಬ್ಬರ ಹೆಸರು ಜೊತೆಯಾಗಿ ಕೇಳಿ ಬರುತ್ತಿರುತ್ತದೆ. ಆದರೆ ತಮ್ಮ ಬಗೆಗಿನ ಸುದ್ದಿಗಳನ್ನು ಈ ಜೋಡಿ ನಿರಾಕರಿಸುತ್ತಲೇ ಬಂದಿದೆ. ಅನುಷ್ಕಾ ಹಾಗೂ ಪ್ರಭಾಸ್ ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ‘ಮಿರ್ಚಿ’, ‘ಬಿಲ್ಲ’, ‘ಬಾಹುಬಲಿ 1’, ‘ಬಾಹುಬಲಿ 2’ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದು ಎಲ್ಲ ಸಿನಿಮಾಗಳು ಸಹ ಬ್ಲಾಕ್ ಬಸ್ಟರ್ ಆಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




