
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಈಗ ವಿವಾದದ ಮೂಲಕ ಸುದ್ದಿ ಆಗಿದೆ. ಈ ಸಿನಿಮಾದಿಂದ ದೀಪಿಕಾ ಪಡುಕೋಣೆ (Deepika Padukone) ಅವರು ಹೊರ ನಡೆದಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿರುವದಂತೂ ನಿಜ. ಹೀಗಿರುವಾಗಲೇ ಈ ಚಿತ್ರದ ಸೀಕ್ವೆಲ್‌ನಲ್ಲಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಕೆಲವರು ಅನುಷ್ಕಾ ಶೆಟ್ಟಿ ಹೆಸರುನ್ನು ಸೂಚಿಸುತ್ತಿದ್ದಾರೆ.
ದೀಪಿಕಾ ಪಡುಕೋಣೆ ಅವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡವರು. ಈ ಕಾರಣದಿಂದಲೇ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಚಿತ್ರದ ಕಥೆ ಅರ್ಧಕ್ಕೆ ನಿಂತಿದೆ ಮತ್ತು ಸೀಕ್ವೆಲ್‌ನಲ್ಲಿ ಕಥೆ ಮುಂದುವರಿಯಬೇಕಿದೆ. ಈ ಸಿನಿಮಾದಲ್ಲಿ ದೀಪಿಕಾ ಪಾತ್ರವೂ ಮುಖ್ಯವಾಗಿದೆ. ಆದರೆ, ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ.
ದೀಪಿಕಾ ಸ್ಥಾನಕ್ಕೆ ಬೇರೆ ನಾಯಕಿಯನ್ನು ಹಾಕಲೇಬೇಕಾದ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ. ಇಲ್ಲವಾದಲ್ಲಿ, ಸೀಕ್ವೆಲ್ನ ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ. ಹೀಗಾಗಿ, ನಿರ್ದೇಶಕ ನಾಗ್ ಅಶ್ವಿನ್ ಹೊಸ ಹೀರೋಯಿನ್ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ಈಗ ದೀಪಿಕಾ ಬದಲು ಅನುಷ್ಕಾ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಿ ಎಂದು ಅನೇಕರು ಕೋರಿದ್ದಾರೆ.
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರು ಈ ಮೊದಲು ‘ಮಿರ್ಚಿ’ ‘ಬಾಹುಬಲಿ’, ‘ಬಾಹುಬಲಿ 2’ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರದ್ದು ಹಿಟ್ ಜೋಡಿ ಆಗಿದೆ. ಟಾಲಿವುಡ್ನಲ್ಲಿ ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಜೋಡಿ ಮತ್ತೆ ಒಂದಾಗಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಈ ಕೋರಿಕೆಯನ್ನು ನಿರ್ದೇಶಕ ನಾಗ್ ಅಶ್ವಿನ್ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮಿತಿ ಮೀರಿದ ಡಿಮ್ಯಾಂಡ್: ಕಷ್ಟದಲ್ಲಿದೆ ದೀಪಿಕಾ ಪಡುಕೋಣೆ ಭವಿಷ್ಯ?
ದೀಪಿಕಾ ಪಡುಕೋಣೆ ಅವರು ಮಗು ಹುಟ್ಟಿದ ಬಳಿಕ ಸಾಕಷ್ಟು ಷರತ್ತುಗಳನ್ನು ಇಡುತ್ತಿದ್ದಾರೆ. ಇದನ್ನು ಅನೇಕರಿಗೆ ಮ್ಯಾನೇಜ್ ಮಾಡಲು ಸಾಧ್ಯವಾಗುತ್ತಿಲ್ಲ. ದೀಪಿಕಾ ದಿನಕ್ಕೆ 7ರಿಂದ 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಷರತ್ತನ್ನು ಒಪ್ಪಲು ನಿರ್ಮಾಪಕರಿ ರೆಡಿ ಇರಲಿಲ್ಲ. ಅಲ್ಲದೆ, ಸಂಭಾವನೆಯಲ್ಲಿ ಶೇ. 25 ಏರಿಕೆ ಮಾಡು ಕೋರಿದ್ದರು ಎನ್ನಲಾಗಿದೆ. ಹೀಗಾಗಿ, ಅವರನ್ನು ಸಿನಿಮಾದಿಂದ ಕೈ ಬಿಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:15 am, Mon, 22 September 25