AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನುಶ್ರೀ ಜೊತೆ ವೇದಿಕೆ ಹಂಚಿಕೊಂಡವರು ಎಲ್ಲೋ ಹೋಗ್ತಾರೆ’; ಹೀಗೆ ಹೇಳಿದ್ಯಾರು?

ಆ್ಯಂಕರ್ ಅನುಶ್ರೀ 'ಆಲ್ಫಾ' ಸಿನಿಮಾ ಟ್ರೇಲರ್ ಲಾಂಚ್ ಅನ್ನು ತಮ್ಮದೇ ಶೈಲಿಯಲ್ಲಿ ನಡೆಸಿಕೊಟ್ಟರು. ವಿನಯ್ ಬಿದ್ದಪ್ಪ ಗಿಲ್ಲಿ ಹೆಸರು ಪ್ರಸ್ತಾಪಿಸುತ್ತಿದ್ದಂತೆ, ಅನುಶ್ರೀ ತಾನು ಗಿಲ್ಲಿಗೆ ಯಾಕೆ ಬೆಂಬಲ ನೀಡಿದೆ ಎಂಬುದನ್ನು ವಿವರಿಸಿದರು. ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ಜೊತೆಗಿನ ತಮ್ಮ ಬಾಂಧವ್ಯವನ್ನು ಅನಾವರಣಗೊಳಿಸಿದರು.

‘ಅನುಶ್ರೀ ಜೊತೆ ವೇದಿಕೆ ಹಂಚಿಕೊಂಡವರು ಎಲ್ಲೋ ಹೋಗ್ತಾರೆ’; ಹೀಗೆ ಹೇಳಿದ್ಯಾರು?
ಅನುಶ್ರೀ-ಗಿಲ್ಲಿ
ರಾಜೇಶ್ ದುಗ್ಗುಮನೆ
|

Updated on:Feb 07, 2026 | 7:13 AM

Share

ಆ್ಯಂಕರ್ ಅನುಶ್ರೀ (Anushree) ಅವರು ವೇದಿಕೆ ಮೇಲಿದ್ದರೆ ಅಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರೋದಿಲ್ಲ. ಇದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಈಗ ಅವರು ‘ಆಲ್ಫಾ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್​ನ ನಡೆಸಿಕೊಟ್ಟಿದ್ದಾರೆ. ಈ ಈವೆಂಟ್ ಸಾಕಷ್ಟು ಗಮನ ಸೆಳೆದಿದೆ. ಅನುಶ್ರೀ ಅವರು ಈ ವೇದಿಕೆ ಮೇಲೆ ಗಿಲ್ಲಿ ಬಗ್ಗೆ ಮಾತನಾಡಿದರು. ತಮ್ಮ ಬಾಂಧವ್ಯ ಎಂಥದ್ದು, ಗಿಲ್ಲಿಗೆ ಬೆಂಬಲ ನೀಡಿದ್ದು ಏಕೆ ಎಂಬ ವಿಷಯ ಪ್ರಸ್ತಾಪ ಆಗಿದ್ದಕ್ಕೆ ಅವರು ಉತ್ತರ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್​ 12’ರ ವಿನ್ನರ್ ಗಿಲ್ಲಿಗೂ ಅನುಶ್ರೀ ಅವರಿಗೂ ಮೊದಲೇ ಪರಿಚಯ ಇತ್ತು. ಇಬ್ಬರೂ ಹಲವು ರಿಯಾಲಿಟಿ ಶೋಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಆಗ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಗಿಲ್ಲಿ ಅವರು ಹಲವು ಕಾರ್ಯಕ್ರಮದಲ್ಲಿ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ‘ಆಲ್ಫಾ’ ಟ್ರೇಲರ್ ಲಾಂಚ್ ಈವೆಂಟ್​ನಲ್ಲೂ ಗಿಲ್ಲಿ ಬಗ್ಗೆ ಅವರು ಮಾತನಾಡುವಂತಹ ಪರಿಸ್ಥಿತಿ ನಿರ್ಮಾಣ ಆಯಿತು.

ಇದನ್ನೂ ಓದಿ: ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ

‘ಕಾಂತಾರ’ ಸಿನಿಮಾದಲ್ಲಿ ರಾಜನ ಪಾತ್ರ ಮಾಡಿದ್ದ ವಿನಯ್ ಬಿದ್ದಪ್ಪ ಅವರು ‘ಆಲ್ಫಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ವೇದಿಕೆ ಏರಿದರು. ವೇದಿಕೆ ಏರುತ್ತಿದ್ದಂತೆಯೇ ಅನುಶ್ರೀ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಅನುಶ್ರೀ ಜೊತೆ ವೇದಿಕೆ ಶೇರ್ ಮಾಡಿಕೊಂಡಿರೋದು ನನ್ನ ಅದೃಷ್ಟ ಅನಿಸುತ್ತದೆ. ಏಕೆಂದರೆ ಅವರ ಜೊತೆ ವೇದಿಕೆ ಹಂಚಿಕೊಂಡವರು ಎಲ್ಲೋ ಹೋಗಿ ಬಿಟ್ಟಿದ್ದಾರೆ. ಗಿಲ್ಲಿನೇ ಉತ್ತಮ ಉದಾಹರಣೆ. ಅಕ್ಕ ಮುಂದೆ ಹೋಗು, ಅಕ್ಕ ಮುಂದೆ ಹೋಗು ಅಂತ ಅವರು ಎಲ್ಲೋ ಹೋದರು’ ಎಂದು ವಿನಯ್ ಬಿದ್ದಪ್ಪ ಕಾಲೆಳೆದರು.

ಇದಕ್ಕೆ ಅನುಶ್ರೀ ಅವರು ಕೂಲ್ ಆಗಿ ಉತ್ತರಿಸಿದರು. ‘ಅವರ ಗೆಲ್ತಾ ಇದ್ರಲ್ಲ, ಅದಕ್ಕೆ ಸಪೋರ್ಟ್ ಆಗಿ ನಿಂತಿದ್ದೇ ಅಷ್ಟೇ’ ಎಂದು ಅನುಶ್ರೀ ಅವರು ಹೇಳಿಕೊಂಡಿದ್ದಾರೆ. ಇದು ಗಿಲ್ಲಿ ಮೇಲೆ ಅನುಶ್ರೀಗೆ ಎಷ್ಟು ಪ್ರೀತಿ ಹಾಗೂ ಗೌರವ ಇದೆ ಎಂಬುದನ್ನು ತೋರಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Sat, 7 February 26

ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ
ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ
ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ..
ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ..
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ