AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ವೃತ್ತಿಜೀವನದ ಮೊದಲ ಗೋಲ್ಡನ್ ಡಕ್; ಅನಗತ್ಯ ದಾಖಲೆ ಬರೆದ ಅಭಿಷೇಕ್

ಐಪಿಎಲ್ ವೃತ್ತಿಜೀವನದ ಮೊದಲ ಗೋಲ್ಡನ್ ಡಕ್; ಅನಗತ್ಯ ದಾಖಲೆ ಬರೆದ ಅಭಿಷೇಕ್

ಪೃಥ್ವಿಶಂಕರ
|

Updated on: Apr 13, 2026 | 9:15 PM

Share

Abhishek Sharma golden duck: 2026 ರ ವರ್ಷ ಭಾರತದ ಕ್ರಿಕೆಟಿಗ ಅಭಿಷೇಕ್ ಶರ್ಮಾಗೆ ಏರಿಳಿತಗಳಿಂದ ಕೂಡಿದೆ. ಐಪಿಎಲ್ ಮತ್ತು ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಅಭಿಷೇಕ್, ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟರ್ ಎಂಬ ಅನಗತ್ಯ ದಾಖಲೆ ಮಾಡಿದ್ದಾರೆ. ಸತತ ಡಕ್ ಔಟ್​ಗಳಿಂದ ಅವರ ಬ್ಯಾಟಿಂಗ್ ಫಾರ್ಮ್ ಕುಸಿದಿದೆ. ಅವರ ಈ ಪ್ರದರ್ಶನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

2026 ರ ವರ್ಷ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾಗೆ ಏರಿಳಿತಗಳಿಗಳಿಂದ ಕೂಡಿದೆ. ವರ್ಷ ಪ್ರಾರಂಭವಾಗುವ ಮೊದಲು ಸುಮಾರು 20 ತಿಂಗಳುಗಳ ಕಾಲ ನಿರಂತರವಾಗಿ ಸ್ಫೋಟಕ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾಗೆ ಇದೀಗ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದಿಂದ ಬಳಲಿದ್ದ ಅಭಿಷೇಕ್ ಪ್ರಸ್ತುತ ಐಪಿಎಲ್​ನಲ್ಲೂ ಅದೇ ಸಮಸ್ಯೆಗೀಡಾಗಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಅಭಿಷೇಕ್ ಶಮಅರ್ ಶೂನ್ಯಕ್ಕೆ ಅತಿ ಹೆಚ್ಚು ಬಾರಿ ಔಟ್ ಆದ ದಾಖಲೆಯನ್ನು ಮುರಿದಿದ್ದಾರೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾದ ಅಭಿಷೇಕ್ ಸತತ ಒಂಬತ್ತನೇ ಐಪಿಎಲ್ ಸೀಸನ್​ನಲ್ಲಿ ಐದನೇ ಬಾರಿಗೆ ಡಕ್‌ಗೆ ಔಟಾದರು. 79 ಇನ್ನಿಂಗ್ಸ್‌ಗಳ ಐಪಿಎಲ್ ವೃತ್ತಿಜೀವನದಲ್ಲಿ ಅಭಿಷೇಕ್ ಗೋಲ್ಡನ್ ಡಕ್‌ಗೆ ಔಟಾಗಿದ್ದು ಇದೇ ಮೊದಲು. ಈ ಆವೃತ್ತಿಯಲ್ಲಿ ಅಭಿಷೇಕ್ ಎರಡನೇ ಬಾರಿಗೆ ಡಕ್ ಆಗಿದ್ದಾರೆ. ಆದರೆ ಹಿಂದಿನ ಬಾರಿ ಎರಡು ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟಾಗಿದ್ದರು.

ಇಷ್ಟೇ ಅಲ್ಲ, ಅಭಿಷೇಕ್ ಕೇವಲ 3 ಮತ್ತು ಅರ್ಧ ತಿಂಗಳಲ್ಲಿ ಸಂಜು ಸ್ಯಾಮ್ಸನ್ ಮತ್ತು ರೋಹಿತ್ ಶರ್ಮಾ ಅವರ ಅನಗತ್ಯ ದಾಖಲೆಯನ್ನು ಮುರಿದಿದ್ದಾರೆ. ಈ ವರ್ಷ ಅಭಿಷೇಕ್ ಟಿ20 ಕ್ರಿಕೆಟ್‌ನಲ್ಲಿ 7 ನೇ ಬಾರಿ ಡಕ್ ಔಟ್ ಆಗಿದ್ದಾರೆ. 2026 ರಲ್ಲಿ ಅಭಿಷೇಕ್ ಒಟ್ಟು 18 ಟಿ20 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಇದರಲ್ಲಿ 5 ಅರ್ಧಶತಕಗಳನ್ನು ಬಾರಿಸಿದರೆ, ಏಳು ಬಾರಿ ಶೂನ್ಯಕ್ಕೆ ಔಟಾದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಟಿ20 ಯಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟರ್ ಎಂಬ ಬೇಡದ ದಾಖಲೆ ಅಭಿಷೇಕ್ ಪಾಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us