‘ನಾನು ಪ್ರಭಾಸ್​ಗೆ ಜೋಕರ್ ಎಂದಿಲ್ಲ’; ಅರ್ಷದ್ ವಾರ್ಸಿ ಸ್ಪಷ್ಟನೆ

ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಈ ವೇಳೆ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಬೇಸರ ಹೊರಹಾಕಿದ್ದರು. ‘ಕಲ್ಕಿ 2898 ಎಡಿ ಸಿನಿಮಾ ನೋಡಿದೆ. ನನಗೆ ಅದು ಇಷ್ಟ ಆಗಲೇ ಇಲ್ಲ. ಪ್ರಭಾಸ್ ಬಗ್ಗೆ ನನಗೆ ಬೇಸರ ಇದೆ’ ಎಂದು ಅವರು ಹೇಳಿದ್ದರು.

‘ನಾನು ಪ್ರಭಾಸ್​ಗೆ ಜೋಕರ್ ಎಂದಿಲ್ಲ’; ಅರ್ಷದ್ ವಾರ್ಸಿ ಸ್ಪಷ್ಟನೆ
ಪ್ರಭಾಸ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 30, 2024 | 11:26 AM

ಹಿಂದಿ ಚಿತ್ರರಂಗದ ನಟ ಅರ್ಷದ್ ವಾರ್ಸಿ ಅವರ ಇತ್ತೀಚಿಗಿನ ಹೇಳಿಕೆಯನ್ನು ನೀವು ಕೇಳಿಯೇ ಇರುತ್ತೀರಿ. ಪ್ರಭಾಸ್ ಬಗ್ಗೆ ಅವರು ಟೀಕೆ ಮಾಡಿ ಸಾಕಷ್ಟು ಸುದ್ದಿ ಆದರು. ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಪಾತ್ರವನ್ನು ಜೋಕರ್ ಎಂದು ಕರೆದರು. ಈ ಬಗ್ಗೆ ಸ್ವತಃ ನಿರ್ದೇಶಕ ನಾಗ್ ಅಶ್ವಿನ್ ಬೇಸರ ಹೊರಹಾಕಿದ್ದರು. ಈ ಬಗ್ಗೆ ಕೊನೆಗೂ ಅರ್ಷದ್ ವಾರ್ಸಿ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ್ದು ಏನು ಗೊತ್ತಾ? ನಾವು ಹೇಳುತ್ತೇವೆ ನೋಡಿ.

ಅರ್ಷದ್ ವಾರ್ಸಿ ಹೇಳಿದ್ದು ಏನು?

ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಈ ವೇಳೆ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಬೇಸರ ಹೊರಹಾಕಿದ್ದರು. ‘ಕಲ್ಕಿ 2898 ಎಡಿ ಸಿನಿಮಾ ನೋಡಿದೆ. ನನಗೆ ಅದು ಇಷ್ಟ ಆಗಲೇ ಇಲ್ಲ. ಪ್ರಭಾಸ್ ಬಗ್ಗೆ ನನಗೆ ಬೇಸರ ಇದೆ. ಅವರು ಜೋಕರ್ ರೀತಿ ಕಾಣಿಸಿದ್ದಾರೆ’ ಎಂದು ಅವರು ಹೇಳಿದ್ದರು. ಇದರಿಂದ ಪ್ರಭಾಸ್ ಫ್ಯಾನ್ಸ್ ಸಿಟ್ಟಾದರು. ತೆಲುಗು ಮಂದಿ ಅರ್ಷದ್ ವಿರುದ್ಧ ತಿರುಗಿಬಿದ್ದರು.

ಟೀಕೆ

ನಟ ನಾನಿ, ಸುಧೀರ್ ಬಾಬು ಸೇರಿದಂತೆ ಎಲ್ಲರೂ ಅರ್ಷದ್ ವಿರುದ್ಧ ಕೋಪ ಹೊರಹಾಕಿದ್ದರು. ನಾಗ್ ಅಶ್ವಿನ್ ಅವರು ಎಕ್ಸ್​ ಮೂಲಕ ಈ ಬಗ್ಗೆ ಅಪಸ್ವರ ತೆಗೆದಿದ್ದರು. ‘ಅರ್ಷದ್ ಸರ್ ತಮ್ಮ ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳಬೇಕಿತ್ತು. ಅವರ ಮಕ್ಕಳಿಗೆ ಬುಜಿ ಆಟಿಕೆ ಕಳುಹಿಸುವೆ. ಪ್ರಭಾಸ್ ಅವರು ಬೆಸ್ಟ್​ ಎಂದು ಹೇಳುವ ರೀತಿಯಲ್ಲಿ ಕಲ್ಕಿ ಸೀಕ್ವೆಲ್​ಗಾಗಿ ಕೆಲಸ ಮಾಡುವೆ’ ಎಂದಿದ್ದರು.

ಇದನ್ನೂ ಓದಿ: ‘ಕಲ್ಕಿ ಚಿತ್ರದಲ್ಲಿ ಪ್ರಭಾಸ್​ನ ಜೋಕರ್ ರೀತಿ ತೋರಿಸಲಾಗಿದೆ’; ಬಾಲಿವುಡ್ ನಟನ ಬೇಸರ

ಅರ್ಷದ್ ಸ್ಪಷ್ಟನೆ..

ಐಫಾ ಅವಾರ್ಡ್​ನಲ್ಲಿ ಮಾತನಾಡಿದ ಅರ್ಷದ್,  ‘ನಾನು ಪಾತ್ರದ ಬಗ್ಗೆ ಮಾತನಾಡಿದ್ದೇನೆಯೇ ಹೊರತು ವೈಯಕ್ತಿಕ ಅಲ್ಲ. ಪ್ರಭಾಸ್ ಓರ್ವ ಅದ್ಭುತ ಕಲಾವಿದ. ಅವರು ಆಗಾಗ ತಮ್ಮನ್ನು ಸಾಬೀತು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದು ನಮಗೆ ಗೊತ್ತು’ ಎಂದಿದ್ದಾರೆ. ‘ಒಳ್ಳೆಯ ಕಲಾವಿದನಿಗೆ ಕೆಟ್ಟ ಪಾತ್ರ ಕೊಟ್ಟರೆ ಬೇಸರ ಆಗುತ್ತದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?
Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?