ಭೀಕರ ರಸ್ತೆ ಅಪಘಾತ; ಖ್ಯಾತ ನಟಿ ಅರುಂಧತಿಗೆ ತೀವ್ರ ಪೆಟ್ಟು
ಕೇರಳದ ಕೊವಲಂ ಬೈಪಾಸ್ ಬಳಿ ಈ ಅಪಘಾತ ಸಂಭವಿಸಿದೆ. ಅರುಂಧತಿ ತಲೆಗೆ ಗಾಯ ಉಂಟಾಗಿದೆ. ಅವರು ಸಹೋದರನ ಜೊತೆ ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅರುಂಧತಿ ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

ತಮಿಳು ಹಾಗೂ ಮಲಯಾಳಂ ನಟಿ ಅರುಂಧತಿ ನಾಯರ್ (Arundhati Nair) ಅವರು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಕೇರಳದಲ್ಲಿ ಈ ಅಪಘಾತ ಸಂಭವಿಸಿದೆ. ಅವರ ಸಹೋದರಿ ಆರತಿ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆರತಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಅರುಂಧತಿ ಅವರ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ.
ಕೇರಳದ ಕೊವಲಂ ಬೈಪಾಸ್ ಬಳಿ ಈ ಅಪಘಾತ ಸಂಭವಿಸಿದೆ. ಅರುಂಧತಿ ತಲೆಗೆ ಗಾಯ ಉಂಟಾಗಿದೆ. ಅವರು ಸಹೋದರನ ಜೊತೆ ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅರುಂಧತಿ ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ತಲೆಗೆ ಏಟಾಗಿದೆ ಎನ್ನುವ ವಿಚಾರದಿಂದ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಉಂಟಾಗಿದೆ.
‘ತಮಿಳುನಾಡು ಮಾಧ್ಯಮಗಳಲ್ಲಿ ಅರುಂಧತಿ ನಾಯರ್ ಅವರ ಅಪಘಾತದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ನಿಜ. ಅವರಿಗೆ ಮೂರು ದಿನಗಳ ಹಿಂದೆ ಅಪಘಾತ ಆಗಿದೆ’ ಎಂದು ಆರತಿ ಪೋಸ್ಟ್ ಮಾಡಿದ್ದಾರೆ. ‘ಅವರಿಗೆ ತೀವ್ರ ಗಾಯಗಳು ಉಂಟಾಗಿವೆ. ಅವರ ಪರಿಸ್ಥಿತಿ ಗಂಭೀರವಾಗಿದೆ. ಅವರನ್ನು ವೆಂಟಿಲೇಟರ್ನಲ್ಲಿ ಇಡಲಾಗಿದೆ. ತಿರುವನಂಪುರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಸಹೋದರಿಯ ಪೋಸ್ಟ್
View this post on Instagram
ಅರುಂಧತಿ ನಾಯರ್ ಸಹೋದರಿ ಮಾಡಿದ ಪೋಸ್ಟ್ಗೆ ‘ಬೇಗ ಚೇತರಿಸಿಕೊಳ್ಳಿ’ ಎಂಬ ಕಮೆಂಟ್ಗಳು ಬಂದಿವೆ. ‘ನಿಜಕ್ಕೂ ಬೇಸರದ ವಿಚಾರ. ಅವರು ಬೇಗ ಚೇತರಿಕೆ ಕಾಣಲಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಬಳಿಕ ಅವರು ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ. ಅಪಘಾತದ ವೇಳೆ ಅವರು ಬೈಕ್ನಲ್ಲಿ ಇದ್ದರು.
ಇದನ್ನೂ ಓದಿ: ಮಂಗ್ಲಿ ಕಾರು ಅಪಘಾತದ ವದಂತಿ; ಅಸಲಿ ವಿಷಯ ಏನೆಂದು ತಿಳಿಸಿದ ಗಾಯಕಿ
2014ರಲ್ಲಿ ರಿಲೀಸ್ ಆದ ತಮಿಳಿನ ‘ಪೊಂಗಿ ಎಳು ಮನೋಹರ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಇದು ಅವರ ನಟನೆಯ ಮೊದಲ ತಮಿಳು ಸಿನಿಮಾ. ಇದಾದ ಬಳಿಕ ಮಲಯಾಳಂ ಸಿನಿಮಾಗಳಲ್ಲೂ ಅವರು ನಟಿಸಿದರು. 2023ರಲ್ಲಿ ಅವರ ನಟನೆಯ ‘ಆಯಿರಂ ಪೊರ್ಕಾಸುಕಲ್’ ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




