AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್ಯ 3’ ಟೈಟಲ್ ನೋಂದಣಿ ಮಾಡಿಸಿದ ದಿಲ್ ರಾಜು; ಥ್ರಿಲ್ ಆದ ಅಲ್ಲು ಅರ್ಜುನ್ ಫ್ಯಾನ್ಸ್

ದಿಲ್ ರಾಜು ಅವರು 'ಆರ್ಯ 3' ಚಿತ್ರದ ಟೈಟಲ್​ನ ತೆಲುಗು ಚಿತ್ರರಂಗದಲ್ಲಿ ದಾಖಲಿಸಿದ್ದಾರೆ. ಆದರೆ, ಅಲ್ಲು ಅರ್ಜುನ್ ಮತ್ತು ಸುಕುಮಾರ್ ಈ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾರಾ ಎಂಬುದು ಖಚಿತವಾಗಿಲ್ಲ. ಅಲ್ಲು ಅರ್ಜುನ್ ಅವರು ಇತರ ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ, 'ಆರ್ಯ 3' ಚಿತ್ರದ ಭವಿಷ್ಯ ಇನ್ನೂ ನಿಶ್ಚಿತವಾಗಿಲ್ಲ.

‘ಆರ್ಯ 3’ ಟೈಟಲ್ ನೋಂದಣಿ ಮಾಡಿಸಿದ ದಿಲ್ ರಾಜು; ಥ್ರಿಲ್ ಆದ ಅಲ್ಲು ಅರ್ಜುನ್ ಫ್ಯಾನ್ಸ್
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: May 21, 2025 | 12:26 PM

Share

2004ರಲ್ಲಿ ರಿಲೀಸ್ ಆದ ‘ಆರ್ಯ’ ಸಿನಿಮಾ (Arya Movie) ತೆಲುಗು ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಅಲ್ಲು ಅರ್ಜುನ್ ಅವರು ಈ ಚಿತ್ರಕ್ಕೆ ಹೀರೋ ಆದರೆ, ಸುಕುಮಾರ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಇವರ ಮೇಲೆ, ಇವರ ಕಥೆ ಮೇಲೆ ನಂಬಿಕೆ ಇಟ್ಟು ದಿಲ್ ರಾಜು ಬಂಡವಾಳ ಹಾಕಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಅದೇ ರೀತಿ ‘ಆರ್ಯ 2’ ಸಿನಿಮಾ ಇದೇ ಕಾಂಬಿನೇಷನ್​ನಲ್ಲಿ ಬಂತು. ಈ ಚಿತ್ರ ನಿರೀಕ್ಷೆ ತಲುಪದೇ ಇದ್ದರೂ ಜನರು ಚಿತ್ರವನ್ನು ಇಷ್ಟಪಟ್ಟರು. ಈಗ ಈ ಇತ್ರಕ್ಕೆ ಮೂರನೇ ಪಾರ್ಟ್ ಮೂಡಿ ಬರುತ್ತಿದೆ.

ಸಿನಿಮಾ ಮಾಡುವುದಕ್ಕೂ ಮೊದಲು ಫಿಲ್ಮ್ ಚೇಂಬರ್​ನಲ್ಲಿ ಸಿನಿಮಾದ ಟೈಟಲ್ ನೋಂದಣಿ ಮಾಡಿಸಬೇಕು. ಅಂದಾಗ ಮಾತ್ರ ನಿರ್ಮಾಪಕರು ಮುಂದುವರಿಯಬಹುದು. ಈಗ ದಿಲ್ ರಾಜು ಅವರು ತೆಲುಗು ಫಿಲ್ಮ್​ ಚೇಂಬರ್​ನಲ್ಲಿ ‘ಆರ್ಯ 3’ ಟೈಟಲ್​ನ ನೋಂದಣಿ ಮಾಡಿಸಿದ್ದಾರೆ. ಇದು ಅಭಿಮಾನಿಗಳ ಕುತೂಹಲಕ್ಕೆ ಕಾರಣ ಆಗಿದೆ.

ಮೊದಲ ಪಾರ್ಟ್​ನಲ್ಲಿ ನಟನೆ ಮಾಡಿದವರು ಎರಡು ಹಾಗೂ ಮೂರನೇ ಪಾರ್ಟ್​​ನಲ್ಲಿ ಕೆಲಸ ಮಾಡಬೇಕು ಎನ್ನುವ ನಿಯಮ ಎಲ್ಲೂ ಇಲ್ಲ. ಈ ಕಾರಣಕ್ಕೆ ದಿಲ್ ರಾಜು ಅವರು ‘ಆರ್ಯ 3’ ಚಿತ್ರದ ಮೂಲಕ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಅವರನ್ನು ಒಟ್ಟಿಗೆ ಕರೆತರುತ್ತಾರಾ ಅಥವಾ ಅವರಿಗೆ ಬೇರೆ ಕಲಾವಿದರ ಕರೆತರುವ ಆಲೋಚನೆ ಇದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.

ಇದನ್ನೂ ಓದಿ: ಕೈ ಕೊಟ್ಟ ಅಲ್ಲು ಅರ್ಜುನ್, ರಾಮ್ ಚರಣ್ ಜೊತೆ ಸಿನಿಮಾ ಮಾಡಲಿರುವ ಸ್ಟಾರ್ ನಿರ್ದೇಶಕ

ಅಲ್ಲು ಅರ್ಜುನ್ ಅವರು ಅಟ್ಲಿ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಇದಾದ ಬಳಿಕ ತ್ರಿವಿಕ್ರಂ ಜೊತೆ ಅವರು ಸಿನಿಮಾ ಮಾಡಬೇಕಿದೆ. ಈ ಕಮಿಟ್​ಮೆಂಟ್​ಗಳು ಮುಗಿದ ಬಳಿಕ ಸುಕುಮಾರ್ ಅವರ ‘ಪುಷ್ಪ 3’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಳ್ಳಬೇಕಿದೆ. ಪ್ರತಿ ಚಿತ್ರಕ್ಕೆ ಕನಿಷ್ಠ ಒಂದು ವರ್ಷ ಹಿಡಿದರೂ ಮೂರು ವರ್ಷಗಳ ಕಾಲ ಅಲ್ಲು ಅರ್ಜುನ್ ಸಿಗೋದಿಲ್ಲ. ಈ ಕಾರಣಕ್ಕೆ ದಿಲ್ ರಾಜು ಅವರು ಬೇರೆ ಪ್ಲ್ಯಾನ್​ನ ಯೋಚಿಸಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಹಾಗಾದಲ್ಲಿ ಫ್ಯಾನ್ಸ್ ಇದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಕೂಡ ಮುಖ್ಯವಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್