
‘ಯಶ್’ (Yash) ಈ ಹೆಸರು ಈಗ ವಿಶ್ವಮಟ್ಟದಲ್ಲಿ ಹಬ್ಬಿದೆ. ‘ಕೆಜಿಎಫ್ 2’ ಚಿತ್ರ ರಿಲೀಸ್ ಆದ ಬಳಿಕ ರಾಕಿಂಗ್ ಸ್ಟಾರ್ ಜನಪ್ರಿಯತೆ ದ್ವಿಗುಣವಾಗಿದೆ. ಕರ್ನಾಟಕದವರೇ ಆಗಿರುವ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಅವರಿಗೆ ಯಶ್ ಹೆಸರು ಗೊತ್ತಿಲ್ಲವಂತೆ. ಅವರು ಮಾತನಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಯಶ್ ಫ್ಯಾನ್ಸ್ ಆಕ್ರೋಶ ಹೊರಹಾಕುತ್ತಿದ್ದಾರೆ.
ಕರಾವಳಿಯ ಜನಪ್ರಿಯ ಕ್ರೀಡೆ ‘ಕಂಬಳ’ ಬೆಂಗಳೂರಿಗೆ ಬಂದಿದೆ. ಇಂದು (ನವೆಂಬರ್ 25) ಇದರ ಉದ್ಘಾಟನೆ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯುತ್ತಿದೆ. ನವೆಂಬರ್ 25 ಹಾಗೂ 26ರಂದು ಈ ಕಾರ್ಯಕ್ರಮ ನಡೆಯಲಿದೆ. ಕಂಬಳದ ಬಗ್ಗೆ ಅಶೋಕ್ ರೈ ಮಾಹಿತಿ ನೀಡಿದ್ದಾರೆ. ಯಾರೆಲ್ಲ ಕಂಬಳಕ್ಕೆ ಬರುತ್ತಾರೆ ಎಂದು ಕೇಳಲಾಯಿತು. ಇದಕ್ಕೆ ಅವರು ನೀಡಿರೋ ಉತ್ತರ ವೈರಲ್ ಆಗುತ್ತಿದೆ.
‘ಐಶ್ವರ್ಯಾ ರೈ ಅವರನ್ನು ಕರೆಸಲು ಮಾತುಕತೆ ನಡೆಯುತ್ತಿದೆ. ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ರಜನಿಕಾಂತ್, ಕೆಎಲ್ ರಾಹುಲ್ ಬರ್ತಾರೆ. ಕನ್ನಡದಲ್ಲಿ ಯಶ್ ಪುಶ್ ಅಂತೆಲ್ಲ ಯಾರ್ಯಾರೋ ಇದಾರೆ ಅವರ ಬಗ್ಗೆ ನನಗೆ ಗೊತ್ತಿಲ್ಲ’ ಎಂದಿದ್ದಾರೆ ಅಶೋಕ್ ರೈ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ಕನ್ನಡ ಚಿತ್ರರಂಗದವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದ್ದು ‘ಕೆಜಿಎಫ್ 2’. ಆ ಚಿತ್ರದ ಹೀರೋ ಬಗ್ಗೆ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ.
ಇದನ್ನೂ ಓದಿ: ಕೆಜಿಎಫ್ಗೆ ಮುಂಚೆ ಯಶ್ ಸ್ಟಾರ್ ಆಗಿರಲಿಲ್ಲ: ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್
ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಇತ್ತೀಚೆಗೆ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದರು. ‘ಸುಮ್ಮನೆ ಕುಳಿತಿಲ್ಲ. ಶೀಘ್ರವೇ ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ’ ಅವರು ಹೇಳಿದ್ದಾರೆ. ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಕಳೆದ ವರ್ಷ ಏಪ್ರಿಲ್ 14ರಂದು ರಿಲೀಸ್ ಆಯಿತು. ಈ ಚಿತ್ರ ರಿಲೀಸ್ ಆಗಿ ಎರಡು ವರ್ಷ ಪೂರ್ಣಗೊಳ್ಳುತ್ತಾ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Sat, 25 November 23