Ashu Reddy: ಡ್ರಗ್ ಕೇಸ್ನಲ್ಲಿ ಅಶು ರೆಡ್ಡಿ ಮೊಬೈಲ್ ನಂಬರ್ ಲೀಕ್; ನಟಿಗೆ ಬರ್ತಿದೆ ಸಾವಿರಾರು ಕರೆಗಳು
ಡ್ರಗ್ಸ್ ಮಾರಾಟ ಮಾಡಿ ಸಿಕ್ಕಿಬಿದ್ದಿರುವ ಕೆ.ಪಿ. ಚೌಧರಿ ಅವರ ಸಂಪರ್ಕ ಪಟ್ಟಿಯಲ್ಲಿ ಅಶು ರೆಡ್ಡಿ ಇದ್ದಾರೆ. ಪೊಲೀಸರು ಬಿಡುಗಡೆ ಮಾಡಿರುವ ವರದಿಯಲ್ಲಿ ಅಶು ರೆಡ್ಡಿ ಹೆಸರು, ಫೋನ್ ನಂಬರ್ ಕೂಡ ಇದೆ.
ಟಾಲಿವುಡ್ನಲ್ಲಿ ಡ್ರಗ್ಸ್ ದಂಧೆಯ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ‘ಕಬಾಲಿ’ ನಿರ್ಮಾಪಕ ಕೆ.ಪಿ. ಚೌಧರಿ ಡ್ರಗ್ಸ್ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರ ವಿಚಾರಣೆ ವೇಳೆ ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಹೊರಬಿದ್ದಿದೆ. ಅವರ ಜೊತೆ ಸಂಪರ್ಕದಲ್ಲಿ ಇರುವ ಸಾಕಷ್ಟು ಮಂದಿಯ ಹೆಸರು ಲೀಕ್ ಆಗಿದೆ. ಈ ಪೈಕಿ ಟಾಲಿವುಡ್ ನಟಿ ಅಶು ರೆಡ್ಡಿ (Ashu Reddy) ಕೂಡ ಇದ್ದಾರೆ. ಅವರು ಕೆಪಿ ಚೌಧರಿ ಜೊತೆ ಸಂಪರ್ಕದಲ್ಲಿ ಇದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಈಗ ಅವರಿಗೆ ತೊಂದರೆ ಎದುರಾಗಿದೆ. ಅಶು ರೆಡ್ಡಿ ಮೊಬೈಲ್ ಸಂಖ್ಯೆ ಲೀಕ್ ಆಗಿದ್ದು, ಇದರಿಂದ ಅವರಿಗೆ ನಿತ್ಯ ಸಾವಿರಾರು ಕರೆಗಳು ಬರುತ್ತಿವೆ.
ಚೌಧರಿ ಜೊತೆ ಸಂಪರ್ಕದಲ್ಲಿದ್ದವರ ಪಟ್ಟಿಯಲ್ಲಿ ರಘು ತೇಜ ಅವರ ಹೆಸರು ಪ್ರಮುಖವಾಗಿದೆ. ಹಾಗೆಯೇ ಶ್ವೇತಾ, ಸುಶಾಂತ್ ರೆಡ್ಡಿ, ಸನಾ ಮಿಶ್ರಾ, ಶ್ವೇತಾ, ಟ್ಯಾಗೋರ್ ಪ್ರಸಾದ್, ಚಿಂತಾ ರಾಕೇಶ್ ಮೊದಲಾದವರಿದ್ದಾರೆ. ಚೌಧರಿ ಜೊತೆ ಸೆಲೆಬ್ರಿಟಿಗಳಾದ ಅಶು ರೆಡ್ಡಿ, ಸುರೇಖಾ ವಾಣಿ, ಜ್ಯೋತಿ ಅವರ ಹಲವು ಕರೆಗಳು ವಿನಿಮಯವಾಗಿವೆ ಎಂದು ವರದಿಯಾಗಿದೆ. ಇವರೆಲ್ಲರೂ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಅಶು ರೆಡ್ಡಿ ಈ ವಿಚಾರವಾಗಿ ಮತ್ತೊಮ್ಮೆ ಮಾತನಾಡಿದ್ದಾರೆ. ‘ನನಗೂ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿಲ್ಲ’ ಎಂದು ಅಶು ರೆಡ್ಡಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಡ್ರಗ್ಸ್ ಮಾರಾಟ ಮಾಡಿ ಸಿಕ್ಕಿಬಿದ್ದಿರುವ ಕೆ.ಪಿ. ಚೌಧರಿ ಅವರ ಸಂಪರ್ಕ ಪಟ್ಟಿಯಲ್ಲಿ ಅಶು ರೆಡ್ಡಿ ಇದ್ದಾರೆ. ಪೊಲೀಸರು ಬಿಡುಗಡೆ ಮಾಡಿರುವ ವರದಿಯಲ್ಲಿ ಅಶು ರೆಡ್ಡಿ ಹೆಸರು, ಫೋನ್ ನಂಬರ್ ಕೂಡ ಇದೆ. ಇದರಿಂದ ಅವರಿಗೆ ಪ್ರತಿ ಸೆಕೆಂಡ್ಗೆ ಒಂದೊಂದು ಕರೆ ಬರುತ್ತಿದೆ.
View this post on Instagram
ಇದನ್ನೂ ಓದಿ: ಡ್ರಗ್ ಕೇಸ್ನಲ್ಲಿ ಸುದ್ದಿ ಆದ ಆಶು ರೆಡ್ಡಿ ಯಾರು? ಸಂದರ್ಶನದಲ್ಲಿ ಈ ನಟಿಯ ಕಾಲಿಗೆ ಮುತ್ತಿಟ್ಟಿದ್ರು ಆರ್ಜಿವಿ
‘ನನಗೂ ಡ್ರಗ್ ಕೇಸ್ಗೂ ಸಂಬಂಧವಿಲ್ಲ. ನಾನು ಸದ್ಯ ವಿದೇಶದಲ್ಲಿದ್ದೇನೆ. ನನಗೆ ಮಾನಹಾನಿ ಮಾಡಲಾಗಿದೆ. ಕೆಲವರು ಬೇಕಾಬಿಟ್ಟಿ ಸುದ್ದಿ ಪ್ರಕಟ ಮಾಡಿದ್ದಾರೆ. ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನನಗೆ ಸೆಕೆಂಡ್ಗೆ ಒಂದು ಕಾಲ್ ಬರುತ್ತಿದೆ. ನಾನು ಈ ಮೊಬೈಲ್ ಸಂಖ್ಯೆ ಬಳಕೆ ನಿಲ್ಲಿಸಿದ್ದೇನೆ’ ಎಂದಿರುವ ಅಶು ರೆಡ್ಡಿ ಅವರು, ಮೊಬೈಲ್ಗೆ ಬಂದಿರುವ ಕರೆಗಳನ್ನು ತೋರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ