AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್, ದೀಪಿಕಾ ಸಿನಿಮಾ ಬಗ್ಗೆ ಅಟ್ಲಿ ಕೊಟ್ಟರು ಅಪ್​​ಡೇಟ್

Deepika Padukone-Allu Arjun: ಪಿಕಲ್​​ಬಾಲ್​​​ ಟೂರ್ನಿಯಲ್ಲಿ ಬೆಂಗಳೂರು ತಂಡವನ್ನು ಖರೀದಿ ಮಾಡಿರುವ ಅಟ್ಲಿ, ತಮ್ಮ ತಂಡದ ಇವೆಂಟ್​​ಗೆಂದು ಬಂದಾಗ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ. ‘ಅಲ್ಲು ಅರ್ಜುನ್ ಅವರ ಹೊಸ ಸಿನಿಮಾಕ್ಕಾಗಿ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಈ ರೀತಿಯ ಸಿನಿಮಾ ನನಗೂ ಹೊಸತು, ಅಲ್ಲು ಅರ್ಜುನ್ ಅವರಿಗೂ ಹೊಸತು. ಹಾಗಾಗಿ ಇಬ್ಬರೂ ಸಹ ಪ್ರತಿ ದಿನ ಸೆಟ್​​ನಲ್ಲಿ ಹೊಸ-ಹೊಸ ವಿಷಯಗಳನ್ನು ಕಲಿಯುತ್ತಾ ಇದ್ದೇವೆ’ ಎಂದಿದ್ದಾರೆ ಅಟ್ಲಿ.

ಅಲ್ಲು ಅರ್ಜುನ್, ದೀಪಿಕಾ ಸಿನಿಮಾ ಬಗ್ಗೆ ಅಟ್ಲಿ ಕೊಟ್ಟರು ಅಪ್​​ಡೇಟ್
Allu Arjun Atlee
ಮಂಜುನಾಥ ಸಿ.
|

Updated on: Jan 28, 2026 | 6:56 PM

Share

‘ಪುಷ್ಪ’ ಮತ್ತು ‘ಪುಷ್ಪ 2’ (Pushpa 2) ಸಿನಿಮಾಗಳ ಮೂಲಕ ಭಾರಿ ದೊಡ್ಡ ಹಿಟ್ ಸಿನಿಮಾ ನೀಡಿದ ಅಲ್ಲು ಅರ್ಜುನ್ (Allu Arjun), ಮುಂದಿನ ಸಿನಿಮಾ ಆಗಿ ಅಟ್ಲಿಯ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಸ್ವತಃ ಅಲ್ಲು ಅಭಿಮಾನಿಗಳಿಗೇ ಗೊಂದಲ ಮೂಡಿಸಿತ್ತು. ಅಟ್ಲಿ ಕೆಲವಾರು ಹಿಟ್ ಸಿನಿಮಾ ನೀಡಿದ್ದಾರಾದರೂ ಅಟ್ಲಿ ಸ್ವಂತ ಸಿನಿಮಾ ಮಾಡುವುದಿಲ್ಲ ಬದಲಿಗೆ ನಕಲು ಮಾಡಿ ಸಿನಿಮಾ ಮಾಡುವ ನಿರ್ದೇಶಕ ಎಂಬ ಕೆಟ್ಟ ಹೆಸರಿದೆ. ಅದೂ ಅಲ್ಲದೆ, ಅಟ್ಲಿಯ ಈ ಬಾರಿ ಅಲ್ಲು ಅರ್ಜುನ್​​ಗಾಗಿ ಸೈ-ಫೈ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಅಟ್ಲಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಪಿಕಲ್​​ಬಾಲ್​​​ ಟೂರ್ನಿಯಲ್ಲಿ ಬೆಂಗಳೂರು ತಂಡವನ್ನು ಖರೀದಿ ಮಾಡಿರುವ ಅಟ್ಲಿ, ತಮ್ಮ ತಂಡದ ಇವೆಂಟ್​​ಗೆಂದು ಬಂದಾಗ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ. ‘ಅಲ್ಲು ಅರ್ಜುನ್ ಅವರ ಹೊಸ ಸಿನಿಮಾಕ್ಕಾಗಿ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಈ ರೀತಿಯ ಸಿನಿಮಾ ನನಗೂ ಹೊಸತು, ಅಲ್ಲು ಅರ್ಜುನ್ ಅವರಿಗೂ ಹೊಸತು. ಹಾಗಾಗಿ ಇಬ್ಬರೂ ಸಹ ಪ್ರತಿ ದಿನ ಸೆಟ್​​ನಲ್ಲಿ ಹೊಸ-ಹೊಸ ವಿಷಯಗಳನ್ನು ಕಲಿಯುತ್ತಾ ಇದ್ದೇವೆ’ ಎಂದಿದ್ದಾರೆ ಅಟ್ಲಿ.

‘ಎಲ್ಲರೂ ಸಹ ಸಿನಿಮಾದ ಅಪ್​​ಡೇಟ್ ಕೊಡಿ ಎಂದು ಕೇಳುತ್ತಿದ್ದಾರೆ. ಅಸಲಿಗೆ ಸಿನಿಮಾದ ಅಪ್​​ಡೇಟ್ ನೀಡಲು ನಾನು ಬಹಳ ಉತ್ಸುಕನಾಗಿದ್ದೇನೆ. ಪ್ರೇಕ್ಷಕರಿಗಾಗಿ ವಿಶೇಷ ಸರ್ಪ್ರೈಸ್ ಒಂದನ್ನು ರೆಡಿ ಮಾಡುತ್ತಿದ್ದೇವೆ. ಅದನ್ನು ಜನರ ಮುಂದೆ ತರಲು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಶೀಘ್ರವೇ ಅದನ್ನು ಜನರ ಮುಂದೆ ತರುತ್ತೇವೆ’ ಎಂದಿದ್ದಾರೆ ಅಟ್ಲಿ.

ಇದನ್ನೂ ಓದಿ: ‘ತುಂಬಾ ಚೆನ್ನಾಗಿ ಮಾಡಿದಿರಾ’ ಟ್ವೀಟ್​​ನಲ್ಲಿ ಕನ್ನಡ ಬಳಸಿದ ಅಲ್ಲು ಅರ್ಜುನ್, ಕಾರಣ?

ಇನ್ನು ನಟಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿರುವ ಅಟ್ಲಿ, ‘ದೀಪಿಕಾ ಪಡುಕೋಣೆ ನನ್ನ ಲಕ್ಕಿ ಚಾರ್ಮ್. ಇದು ಎರಡನೇ ಬಾರಿ ಅವರೊಟ್ಟಿಗೆ ನಾನು ಕೆಲಸ ಮಾಡುತ್ತಿದ್ದೇನೆ. ಅವರೊಟ್ಟಿಗೆ ಕೆಲಸ ಮಾಡುವುದು ಒಂದು ವಿಶೇಷ ಅನುಭವ. ತಾಯ್ತನದ ಬಳಿಕ ಅವರು ನಟಿಸುತ್ತಿರುವ ಮೊದಲ ಸಿನಿಮಾ ನಮ್ಮದು’ ಎಂದಿದ್ದಾರೆ ಅಟ್ಲಿ.

ಅಟ್ಲಿ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ಸಿನಿಮಾ ಹಾಲಿವುಡ್​ನ ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ ಮಾದರಿಯ ಸಿನಿಮಾ ಆಗಿರಲಿದೆ. ಕೆಲವು ಬಲು ಜನಪ್ರಿಯ, ಯಶಸ್ವಿ ಹಾಲಿವುಡ್ ಸ್ಟುಡಿಯೋಗಳೊಟ್ಟಿಗೆ ಸೇರಿಕೊಂಡು ಅಟ್ಲಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾನಲ್ಲಿ ಚಿತ್ರ, ವಿಚಿತ್ರ ಜೀವಿಗಳು, ಅನಿಮೇಟೆಡ್ ವಿಲನ್, ಅತ್ಯಾಧುನಿಕ ವಾಹನಗಳು, ಆಯುಧಗಳು ಇರಲಿವೆ. ಸಿನಿಮಾದ ಕತೆ ಸಹ ಭೂಮಿಯ ಮೇಲಲ್ಲದೆ ಬೇರೆ ಯಾವುದೋ ಲೋಕದಲ್ಲಿ ನಡೆಯುತ್ತದೆಯಂತೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ