Avatar The Way Of Water: ಜೇಮ್ಸ್ ಕ್ಯಾಮೆರಾನ್​ ಅವರ ಪ್ರತಿಭೆಗೆ ತಲೆಬಾಗುವೆ ಎಂದ ಅಕ್ಷಯ್ ಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2022 | 9:06 PM

'ಅವತಾರ್ ದಿ ವೇ ಆಫ್ ವಾಟರ್' ಚಿತ್ರವನ್ನು ನೋಡಿದ ನಟ ಅಕ್ಷಯ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಚಿತ್ರ ಭವ್ಯತೆಯಿಂದ ಕೂಡಿದ್ದು, ನಾನು ಮಂತ್ರಮುಗ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

Avatar The Way Of Water: ಜೇಮ್ಸ್ ಕ್ಯಾಮೆರಾನ್​ ಅವರ ಪ್ರತಿಭೆಗೆ ತಲೆಬಾಗುವೆ ಎಂದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್, ಜೇಮ್ಸ್ ಕ್ಯಾಮರೂನ್
Follow us on

ಹಾಲಿವುಡ್​ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಅವರ ‘ಅವತಾರ್’ (Avatar)  ಚಿತ್ರ 2009ರಲ್ಲಿ ತೆರೆಗೆ ಬಂದಿತ್ತು. ‘ಅವತಾರ್’ ಚಿತ್ರವನ್ನು ನೋಡಿದ ಜನ ಅಕ್ಷರಶಃ ಮಂತ್ರ ಮುಗ್ಧರಾಗಿದ್ದರು. ದೊಡ್ಡ ದೊಡ್ಡ ಸ್ಟಾರ್​ಗಳು, ನಿರ್ದೇಶಕರು ‘ಅವತಾರ್’​ ಚಿತ್ರವನ್ನು ನೋಡಿ ಕೊಂಡಾಡಿದ್ದರು. ಈಗ ಅದೇ ಚಿತ್ರದ ಮುಂದುವರೆದ ಭಾಗ ‘ಅವತಾರ್ ದಿ ವೇ ಆಫ್ ವಾಟರ್’ (Avatar The Way Of Water) ಚಿತ್ರ 12 ವರ್ಷಗಳ ಬಳಿಕ ಡಿ. 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದಕ್ಕೂ ಮುಂಚೆ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರು ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಬಾಲಿವುಡ್​ನ ನಟರಾದ ಅಕ್ಷಯ್ ಕುಮಾರ್, (Akshay Kumar) ಕಾರ್ತಿಕ್ ಆರ್ಯನ್ ಮತ್ತು ಇತರರು ಈ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ‘ಅವತಾರ್ ದಿ ವೇ ಆಫ್ ವಾಟರ್’ ಚಿತ್ರವನ್ನು ನೋಡಿದ ನಟ ಅಕ್ಷಯ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಚಿತ್ರ ಭವ್ಯತೆಯಿಂದ ಕೂಡಿದ್ದು, ನಾನು ಮಂತ್ರಮುಗ್ಧನಾಗಿದ್ದೇನೆ. ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರ ಕಾರ್ಯ ಕ್ಷಮತೆಯ ಮುಂದೆ ತಲೆಬಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

‘ಅವತಾರ್ ದಿ ವೇ ಆಫ್ ವಾಟರ್’ ಚಿತ್ರ ನೋಡಿರುವ ನಟ ಅಕ್ಷಯ್ ಕುಮಾರ್ ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘ನಿನ್ನೆ ರಾತ್ರಿ ಅವತಾರ್ ದಿ ವೇ ಆಫ್ ವಾಟರ್​ ಚಿತ್ರವನ್ನು ವೀಕ್ಷಿಸಿದೆ. ಚಿತ್ರ ಭವ್ಯತೆಯಿಂದ ಕೂಡಿದ್ದು, ನಾನು ಇನ್ನೂ ಮಂತ್ರಮುಗ್ಧನಾಗಿದ್ದೇನೆ. ನಿಮ್ಮ ಪ್ರತಿಭೆಯ ಮುಂದೆ ತಲೆಬಾಗಲು ಬಯಸುತ್ತೇನೆ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್​’ ಎಂದು ಅಕ್ಷಯ್ ಕುಮಾರ್​ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಚ್ಚರಿಗಳ ಲೋಕವಾಯಿತು ‘ಅವತಾರ್ 2’ ಸಿನಿಮಾ ಟ್ರೇಲರ್; ಹೊಸ ಜಗತ್ತು ಪರಿಚಯಿಸಿದ ಜೇಮ್ಸ್ ಕ್ಯಾಮೆರಾನ್

ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ‘ಅವತಾರ್ ದಿ ವೇ ಆಫ್ ವಾಟರ್’​ ಚಿತ್ರದ ನಿರ್ಮಾಣ ವೆಚ್ಚ ಮೊದಲಿಗೆ 2,555 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು. ಆದರೆ ಚಿತ್ರದಲ್ಲಿ ಗ್ರಾಫಿಕ್ಸ್​ ಬಳಕೆ ಹೆಚ್ಚಾಗಿರುವುದರಿಂದ ಈ ಚಿತ್ರದ ಒಟ್ಟು ವೆಚ್ಚ 3,351 ಕೋಟಿ. ರೂ. ಎನ್ನಲಾಗುತ್ತಿದೆ. ಹೀಗಾಗಿ ‘ಅವತಾರ್ ದಿ ವೇ ಆಫ್ ವಾಟರ್’ ಅತೀ ಹೆಚ್ಚು ಬಜೆಟ್​ನಲ್ಲಿ ನಿರ್ಮಾಣವಾದ ಚಿತ್ರವೆಂಬ ಹೆಗ್ಗಳಿಗೆ ಪಾತ್ರವಾಗಿದೆ.

‘ಅವತಾರ್ ದಿ ವೇ ಆಫ್ ವಾಟರ್’ ಚಿತ್ರಕ್ಕೆ ಸದ್ಯ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ‘ಅವತಾರ್’ ಮೊದಲ ಭಾಗ 2009ರಲ್ಲಿ ತೆರೆಗೆ ಬಂದು 18, 900 ಕೋಟಿ ರೂ. ಅಧಿಕ ಗಳಿಗೆ ಮಾಡಿತ್ತು. ಇದೀಗ ‘ಅವತಾರ್ ದಿ ವೇ ಆಫ್ ವಾಟರ್​​’ನ ಸರದಿ. ದೇಶಾದ್ಯಂತ ಮೂರು ಸಾವಿರ ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಸಾಮಾನ್ಯವಾಗಿ ನಿರೀಕ್ಷೆ ಹೆಚ್ಚಿಸಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:03 pm, Wed, 14 December 22