Kannadathi Serial: ಸಾನಿಯಾಗೆ ಪಾಠ ಕಲಿಸಿದ ಭುವಿ; ಮತ್ತೆ ನೆನಪಾದ ರತ್ನಮಾಲಾ

Kannadathi Serial Update: ಹರ್ಷ ಅರೆಸ್ಟ್​ ಆದಾಗ ಭುವಿ ಹೊಸ ಪ್ಲ್ಯಾನ್ ಮಾಡಿದ್ದಳು. ಸಾನಿಯಾ ಮಾಡಿದ ಕರ್ಮಕಾಂಡದ ವಿಡಿಯೋ ಇಟ್ಟುಕೊಂಡು ಹೆದರಿಸಿದ್ದಳು. ಆದರೆ, ಈ ಬಾರಿ ಆ ವಿಡಿಯೋ ಸಹಾಯಕ್ಕೆ ಬರಲಿಲ್ಲ.

Kannadathi Serial: ಸಾನಿಯಾಗೆ ಪಾಠ ಕಲಿಸಿದ ಭುವಿ; ಮತ್ತೆ ನೆನಪಾದ ರತ್ನಮಾಲಾ
ಕನ್ನಡತಿ ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 15, 2022 | 7:00 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
Image
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
Image
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
Image
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾ ಬಳಿ ಸಾನಿಯಾ ಅಧಿಕಾರ ಪಡೆದುಕೊಂಡಿದ್ದಳು. ಈ ಅಧಿಕಾರವನ್ನು ಹರ್ಷ ಕಿತ್ತುಕೊಂಡಿದ್ದ. ಈಗ ಭುವಿಗೆ ಅಧಿಕಾರ ಸಿಕ್ಕಿರುವ ವಿಚಾರ ಕೇಳಿ ಸಾನಿಯಾಗೆ ಶಾಕ್ ಆಗಿದೆ. ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕು ಎಂಬ ಹಠಕ್ಕೆ ಬಿದ್ದಿದ್ದಾಳೆ. ಈ ಕಾರಣಕ್ಕೆ ವೇದಿಕೆ ಮೇಲೆ ಗನ್ ಇಟ್ಟುಕೊಂಡು ಶೂಟ್ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾಳೆ. ಭುವಿ ಇದಕ್ಕೆ ಹೆದರುತ್ತಾಳೆ ಎಂದು ಸಾನಿಯಾ ಭಾವಿಸಿದ್ದಳು. ಅಧಿಕಾರ ಸಿಗುತ್ತದೆ ಎನ್ನುವ ಖುಷಿಯಲ್ಲಿದ್ದಳು.

ಸಮಸ್ಯೆ ಬಗೆಹರಿಸಿದ ಭುವಿ

ಭುವಿ ಸಾಕಷ್ಟು ಸಮಸ್ಯೆಗಳು ಎದುರಿಸಿ ಬಂದವಳು. ಇದೆಲ್ಲವನ್ನೂ ಅವಳು ತನ್ನ ಚಾಕಚಕ್ಯತೆಯಿಂದ ಎದುರಿಸಿದ್ದಾಳೆ. ಆದರೆ, ಸಾನಿಯಾ ವಿಚಾರದಲ್ಲಿ ಅವಳಿಗೆ ಕೊಂಚ ಅಂಜಿಕೆ ಮೊದಲಿನಿಂದಲೂ ಇತ್ತು. ಆಕೆ ಸಂಚು ಮಾಡುತ್ತಾಳೆ, ಆಕೆ ಕೆಟ್ಟವಳು ಎನ್ನುವುದು ಭುವಿಗೆ ಅರ್ಥವಾಗಿದೆ. ಆದರೆ, ಅವಳನ್ನು ಹೇಗೆ ಎದುರಿಸುವುದು ಎನ್ನುವ ವಿಚಾರ ಆಕೆಗೆ ಗೊತ್ತಿರಲಿಲ್ಲ. ಆದರೆ, ಈಗ ನಿಧಾನವಾಗಿ ಎಲ್ಲವೂ ಅರ್ಥವಾಗುತ್ತಿದೆ.

ಇದನ್ನೂ ಓದಿ: ಅಮ್ಮಮ್ಮನಂತೆ ಶಾಂತಮೂರ್ತಿಯಾದ ಹರ್ಷ; ಸಾನಿಯಾ ಕೂಗಿದರೂ ಇಲ್ಲ, ಕಿರುಚಾಡಿದರೂ ಇಲ್ಲ

ಹರ್ಷನ ಅರೆಸ್ಟ್​ ಆದಾಗ ಭುವಿ ಹೊಸ ಪ್ಲ್ಯಾನ್ ಮಾಡಿದ್ದಳು. ಸಾನಿಯಾ ಮಾಡಿದ ಕರ್ಮಕಾಂಡದ ವಿಡಿಯೋ ಇಟ್ಟುಕೊಂಡು ಹೆದರಿಸಿದ್ದಳು. ಆದರೆ, ಈ ಬಾರಿ ವೇದಿಕೆ ಮೇಲೆ ಆ ವಿಡಿಯೋ ಸಹಾಯಕ್ಕೆ ಬರಲೇ ಇಲ್ಲ. ‘ನೀನು ಅಧಿಕಾರ ನೀಡದೇ ಇದ್ದರೆ ನಾನು ಶೂಟ್ ಮಾಡಿಕೊಳ್ಳುತ್ತೇನೆ’ ಎಂದು ಸಾನಿಯಾ ಗನ್ ತೋರಿಸಿ ಬೆದರಿಕೆ ಹಾಕಿದ್ದಳು. ಆರಂಭದಲ್ಲಿ ಭುವಿಗೆ ಅಂಜಿಕೆ ಆಗಿತ್ತು. ಆದರೆ, ಅವಳ ಸಹಾಯಕ್ಕೆ ಬಂದಿದ್ದು ಅಮ್ಮಮ್ಮ.

ಭುವಿಯ ಕಣ್ಣೆದುರು ಅಮ್ಮಮ್ಮನ ಛಾಯೆ ಪ್ರತ್ಯಕ್ಷವಾಗಿದೆ. ಆಕೆ ಭುವಿಗೆ ಕಿವಿಮಾತು ಹೇಳಿದ್ದಾಳೆ. ‘ನಾನು ನಿನಗೆ ಒಮ್ಮೆ ಹಂದಿಯ ಕಥೆ ಹೇಳಿದ್ದೆ. ಈ ಹಂದಿ ತುಂಬಾನೇ ಕೊಳಕು. ನೀನು ದಾರಿ ಮೇಲೆ ಹೋದಾಗ ಹೊಡೆದಾಟಕ್ಕೆ ಆಹ್ವಾನ ನೀಡುತ್ತವೆ. ಒಂದೊಮ್ಮೆ ನೀನು ಹೋಗಿಲ್ಲ ಎಂದರೆ ಮರುದಿನ ನಿನ್ನ ಮನೆ ಬಾಗಿಲಿಗೆ ಬಂದು ಕಾದಾಡುತ್ತದೆ. ಇದು ಒಳ್ಳೆಯದಲ್ಲ. ಹೀಗಾಗಿ, ಅವರ ಜಾಗಕ್ಕೆ ಇಳಿಯದೇ ಬುದ್ಧಿ ಕಲಿಸಬೇಕು’ ಎಂದು ರತ್ನಮಾಲಾ ಹೇಳಿದಂತೆ ಭುವಿಗೆ ಭಾಸವಾಯಿತು.

ಇದನ್ನೂ ಓದಿ: Kannadathi: ‘ಆಸ್ತಿ ಭುವಿ ಬಳಿ ಇದ್ದರೇನು, ನನ್ನ ಬಳಿ ಇದ್ದರೇನು?’; ಹರ್ಷನ ಮಾತಿನಿಂದ ಸಾನಿಯಾ-ವರು ಶಾಕ್

ಆ ಬಳಿಕ ಸಾನಿಯಾ ಕಡೆ ತಿರುಗಿದ ಭುವಿ ತನ್ನದೇ ಶೈಲಿಯಲ್ಲಿ ತಿರುಗೇಟು ಕೊಟ್ಟಳು. ‘ನೋಡಿ ಈ ಮೊಬೈಲ್​ನಲ್ಲಿರುವ ನಿಮ್ಮ ವಿಡಿಯೋನ ಹರ್ಷನಿಗೆ ಕಳುಹಿಸಲೇಬೇಕಿದೆ. ಇದಕ್ಕೆ ಕಾರಣ ನೀವು ನಡೆದುಕೊಳ್ಳುತ್ತಿರುವ ರೀತಿ. ಹಾಗೆ ಮಾಡಿದರೆ ನಿಮಗೆ ಉಳಿಯೋದು ಎರಡೇ ಆಯ್ಕೆ. ಒಂದೋ ಹರ್ಷ ಗುಂಡು ಹಾರಿಸ್ತಾರೆ. ಇಲ್ಲ ನೀವೇ ಗುಂಡು ಹಾರಿಸಿಕೊಳ್ಳಬೇಕು. ನೀವೇ ಗುಂಡು ಹಾರಿಸಿಕೊಂಡರೆ ಅದು ಆತ್ಮಹತ್ಯೆ ಎಂದು ಪರಿಗಣಿಸಲ್ಪಡುತ್ತದೆ. ಹೀಗಾಗಿ, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಅನ್ನೋದು ನಿಮಗೆ ಬಿಟ್ಟ ವಿಚಾರ’ ಎಂದು ಸಾನಿಯಾಗೆ ಭುವಿ ಹೇಳಿದ್ದಾಳೆ. ಇದನ್ನು ಕೇಳಿ ಸಾನಿಯಾಗೆ ಶಾಕ್ ಆಗಿದೆ. ಭುವಿಯಲ್ಲಿ ರತ್ನಮಾಲಾನ್ನು ನೋಡಿದಂತೆ ಅವಳಿಗೆ ಆಗಿದೆ.

ವರುಧಿನಿ ಅಸಲಿ ಮುಖ ಬಯಲು

ವರುಧಿನಿ ಸರಿ ಇಲ್ಲ, ಆಕೆ ಕೆಟ್ಟವಳು ಎಂಬುದನ್ನು ಸುಚಿ ಹೇಳಿದ್ದಳು. ಆದರೆ, ಇದನ್ನು ಹರ್ಷ ನಂಬಿರಲಿಲ್ಲ. ಇದನ್ನು ನಂಬುವಂತೆ ಮಾಡಿದ್ದು ವಕೀಲರು. ಹರ್ಷನ ಗೆಳೆಯ ವಕೀಲ. ಆತ ಹರ್ಷನ ಬಳಿ ವರುಧಿನಿಯ ಬಗ್ಗೆ ಮಾತನಾಡಿದ್ದ. ‘ವರುಧಿನಿ ವಿಲ್ ವಿಚಾರಕ್ಕೆ ಹಿಂದೆ ಬಿದ್ದಿದ್ದಳು. ಆಕೆಯನ್ನು ಸುಧಾರಿಸುವವರೆಗೆ ನನಗೆ ಸಾಕಾಗಿ ಹೋಗಿತ್ತು. ಅವಳ ಸಹವಾಸ ಮಾತ್ರ ಬೇಡ’ ಎಂದು ಲಾಯರ್ ಹೇಳಿದ್ದಾನೆ. ಇದನ್ನು ಕೇಳಿ ಹರ್ಷನಿಗೆ ನಿಜ ವಿಚಾರ ಏನು ಎಂಬುದು ಗೊತ್ತಾಗಿದೆ. ವರುಧಿನಿಗೆ ಕ್ಲಾಸ್ ತೆಗೆದುಕೊಳ್ಳಲು ಹರ್ಷ ಮುಂದಾಗಬಹುದು.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್