BAFTA 2023: ಬ್ರಿಟಿಷ್​ ಅಕಾಡೆಮಿ ಫಿಲ್ಮ್​ ಅವಾರ್ಡ್ಸ್​ನಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಸಿಕ್ಕಿಲ್ಲ ಮನ್ನಣೆ; ಕಾರಣ ಏನು?

|

Updated on: Feb 21, 2023 | 12:30 PM

BAFTA Awards 2023 | RRR Movie: ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಇದರಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

BAFTA 2023: ಬ್ರಿಟಿಷ್​ ಅಕಾಡೆಮಿ ಫಿಲ್ಮ್​ ಅವಾರ್ಡ್ಸ್​ನಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಸಿಕ್ಕಿಲ್ಲ ಮನ್ನಣೆ; ಕಾರಣ ಏನು?
ಜೂನಿಯರ್​ ಎನ್​ಟಿಆರ್​
Follow us on

ಭಾರತದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಳ್ಳುವಲ್ಲಿಯೂ ಯಶಸ್ವಿ ಆಗುತ್ತಿವೆ. ‘ಆರ್​ಆರ್​ಆರ್​’ (RRR Movie) ಚಿತ್ರಕ್ಕೆ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಸಿಕ್ಕಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್​ ಪ್ರಶಸ್ತಿಗೂ ನಾಮಿನೇಟ್​ ಆಗಿದೆ. ಆದರೆ ಈ ಸಿನಿಮಾವನ್ನು ‘ಬ್ರಿಟಿಷ್​ ಅಕಾಡೆಮಿ ಫಿಲ್ಮ್​ ಅವಾರ್ಡ್ಸ್​’ (British Academy Film Awards) ಕಡೆಗಣಿಸಿದೆ. 77ನೇ ಸಾಲಿನ BAFTA ಸಮಾರಂಭದಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಒಂದು ವಿಭಾಗದಲ್ಲೂ ನಾಮಿನೇಟ್​ ಆಗಿಲ್ಲ. ಇದು ಭಾರತೀಯರ ಕೋಪಕ್ಕೆ ಕಾರಣ ಆಗಿದೆ. ಹಾಗಾಗಿ ಈ ಪ್ರಶಸ್ತಿ ಬಗ್ಗೆ ನೆಟ್ಟಿಗರು ಖಾರವಾಗಿ ಕಮೆಂಟ್​ ಮಾಡುತ್ತಿದ್ದಾರೆ. ಹಾಗಾದರೆ ‘ಆರ್​ಆರ್​ಆರ್’ ಚಿತ್ರವನ್ನು BAFTA (BAFTA 2023) ಅವಾರ್ಡ್ಸ್​ನಲ್ಲಿ ಕಡೆಗಣಿಸಲು ಕಾರಣ ಏನು? ಇಲ್ಲಿದೆ ಉತ್ತರ..

‘ಆರ್​ಆರ್​ಆರ್’​ ಸಿನಿಮಾದಲ್ಲಿ ಸ್ವಾತಂತ್ರ್ಯಪೂರ್ವದ ಕಥೆಯನ್ನು ಹೇಳಲಾಗಿದೆ. ಬ್ರಿಟಿಷರು ಭಾರತೀಯರ ಮೇಲೆ ಮಾಡಿದ ದಬ್ಬಾಳಿಕೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಬ್ರಿಟಿಷರ ಶೋಷಣೆ ವಿರುದ್ಧ ಹೋರಾಡಿದ ಕೊಮರಮ್​ ಭೀಮ್​ ಮತ್ತು ಅಲ್ಲುರಿ ಸೀತಾರಾಮ ರಾಜು ಅವರ ಪಾತ್ರಗಳು ಈ ಚಿತ್ರದಲ್ಲಿ ವಿಜೃಂಭಿಸಿವೆ. ಬ್ರಿಟಿಷರ ಕರಾಳ ಇತಿಹಾಸವನ್ನು ತೋರಿಸಿದ್ದರಿಂದಲೇ ‘ಬ್ರಿಟಿಷ್​ ಅಕಾಡೆಮಿ ಫಿಲ್ಮ್​ ಅವಾರ್ಡ್ಸ್​’ಗೆ ‘ಆರ್​ಆರ್​ಆರ್’ ಸಿನಿಮಾ ನಾಮಿನೇಟ್​ ಆಗಿಲ್ಲ ಮತ್ತು ಯಾವುದೇ ಪ್ರಶಸ್ತಿ ಸಿಕ್ಕಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ
Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು
RRR: ಜಪಾನ್​ನಲ್ಲಿ ಮೊದಲ ದಿನವೇ 1 ಕೋಟಿ ರೂಪಾಯಿ ಗಳಿಸಿದ ‘ಆರ್​ಆರ್​ಆರ್​’: ಜೋರಾಗಿದೆ ಕ್ರೇಜ್​

ಇದನ್ನೂ ಓದಿ:  ‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ

ರಾಜಮೌಳಿ ಅವರು ನಿರ್ದೇಶನದಲ್ಲಿ ಮೂಡಿಬಂದ ‘ಆರ್​ಆರ್​ಆರ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಗೆದ್ದ ಬಳಿಕ ಅನೇಕರು ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಾಲಿವುಡ್​ ನಿರ್ದೇಶಕರಾದ ಜೇಮ್ಸ್​ ಕ್ಯಾಮೆರಾನ್​, ಸ್ಟೀವನ್​ ಸ್ಪೀಲ್​ಬರ್ಗ್​ ಸೇರಿದಂತೆ ಅನೇಕ ದಿಗ್ಗಜರು ಈ ಚಿತ್ರವನ್ನು ಕೊಂಡಾಡಿದ್ದಾರೆ. ಆದರೆ ಬ್ರಿಟಿಷ್​ ಮಂದಿ ಮಾತ್ರ ನಿರ್ಲಕ್ಷ್ಯ ಮಾಡಿದ್ದಾರೆ.

ಇದನ್ನೂ ಓದಿ: SS Rajamouli: ಎಸ್​ಎಸ್​​ ರಾಜಮೌಳಿ ಬಿಜೆಪಿ ಪರವೇ? ಮೌನ ಮುರಿದ ನಿರ್ದೇಶಕ  

ಆಸ್ಕರ್​ ಗೆಲ್ಲುವ ಭರವಸೆಯಲ್ಲಿ ‘ನಾಟು ನಾಟು..’ ಸಾಂಗ್​:

ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ನಾಟು ನಾಟು..’ ಹಾಡು ಜನಮನ ಗೆದ್ದಿದೆ. ಈ ಹಾಡಿಗೆ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಸಿಕ್ಕಿದೆ. ಈಗ ಆಸ್ಕರ್​ಗೂ ನಾಮಿನೇಟ್​ ಆಗಿದೆ. ಈ ಹಾಡಿಗೆ ಖಂಡಿತವಾಗಿಯೂ ಆಸ್ಕರ್​ ಪ್ರಶಸ್ತಿ ಸಿಗಲಿದೆ ಎಂದು ಫ್ಯಾನ್ಸ್​ ನಿರೀಕ್ಷಿಸಿದ್ದಾರೆ. ಮಾರ್ಚ್​ 12ರಂದು ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ‘ನಾಟು ನಾಟು..’ ಹಾಡಿನಲ್ಲಿ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ. ಪ್ರೇಮ್​ ರಕ್ಷಿತ್ ಅವರು ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:30 pm, Tue, 21 February 23