ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದ ಪ್ರಭಾಸ್ ನಟನೆಯ ಟಾಪ್ ಐದು ಚಿತ್ರಗಳು ಇವು
‘ಸಲಾರ್’ ಪಕ್ಕಾ ಆ್ಯಕ್ಷನ್ ಚಿತ್ರ. ಈ ಸಿನಿಮಾ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದರು. ಶ್ರೀಯಾ ರೆಡ್ಡಿ, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ‘ಉಗ್ರಂ’ ರಿಮೇಕ್ ಎನ್ನುವ ಕಾರಣಕ್ಕೆ ಟೀಕೆ ಪಡೆಯಿತು. ಈ ಚಿತ್ರದ ಗಳಿಕೆ 625 ಕೋಟಿ ರೂಪಾಯಿ.
ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ‘ಸಲಾರ್’ ಗೆದ್ದ ಬೆನ್ನಲ್ಲೇ ಅವರ ನಟನೆಯ ಈ ಚಿತ್ರ ಕೂಡ ಗೆದ್ದಿದೆ. ಹೀಗಾಗಿ, ಅವರಿಗೆ ಬ್ಯಾಕ್ ಟು ಬ್ಯಾಕ್ ಗೆಲುವು ಸಿಕ್ಕಂತೆ ಆಗಿದೆ. ‘ಕಲ್ಕಿ 2898 ಎಡಿ’ ಚಿತ್ರದ ಬಜೆಟ್ 600 ಕೋಟಿ ರೂಪಾಯಿ. ಹೀಗಾಗಿ, ಈ ಚಿತ್ರ ಕನಿಷ್ಠ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಬೇಕಾದ ಅನಿವಾರ್ಯತೆ ಇದೆ. ಈಗ ಈ ಚಿತ್ರ ಹೋಗುತ್ತಿರುವ ವೇಗ ನೋಡಿದರೆ ಅನಾಯಾಸವಾಗಿ ಸಿನಿಮಾ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಬಹುದು ಎನ್ನಲಾಗುತ್ತಿದೆ. ಪ್ರಭಾಸ್ ನಟನೆಯ ಟಾಪ್ ಐದು ಸಿನಿಮಾಗಳ ಕಲೆಕ್ಷನ್ ವಿವರ ಇಲ್ಲಿದೆ.
‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿದ್ದಾರೆ. ದುಲ್ಖರ್ ಸಲ್ಮಾನ್, ರಾಮ್ ಗೋಪಾಲ್ ವರ್ಮಾ, ರಾಜಮೌಳಿ ಸೇರಿ ಅನೇಕರು ಅತಿಥಿ ಪಾತ್ರ ಮಾಡಿದ್ದಾರೆ. ಈ ಎಲ್ಲಾ ಸೆಲೆಬ್ರಿಟಿಗಳ ಫ್ಯಾನ್ಸ್ ತೆರಳಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ 180 ಕೋಟಿ ರೂಪಾಯಿ ಇತ್ತು. ಎರಡನೇ ದಿನ ಈ ಚಿತ್ರ ಒಳ್ಳೆಯ ಗಳಿಕೆ ಮಾಡಿದ್ದು, 300 ಕೋಟಿ ರೂಪಾಯಿ ಸಮೀಪಿಸಿದೆ.
ಬಾಹುಬಲಿ 2: ದಿ ಕನ್ಕ್ಲೂಶನ್
‘ಬಾಹುಬಲಿ 2’ ಚಿತ್ರದ ಮೂಲಕ ಪ್ರಭಾಸ್ ಅವರು ದೊಡ್ಡ ಮಟ್ಟದ ಗೆಲುವು ಕಂಡರು. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಹಲವು ದಾಖಲೆಗಳನ್ನು ಬರೆದಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಮೊದಲಾದವರು ನಟಿಸಿದ್ದರು. ಈ ಚಿತ್ರ 1,345 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್ಸ್ಟಾರ್, ನೆಟ್ಫ್ಲಿಕ್ಸ್, ಸೋನಿ ಲಿವ್ನಲ್ಲಿ ಪ್ರಸಾರ ಕಾಣುತ್ತಿದೆ.
ಸಲಾರ್
‘ಸಲಾರ್’ ಪಕ್ಕಾ ಆ್ಯಕ್ಷನ್ ಚಿತ್ರ. ಈ ಸಿನಿಮಾ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದರು. ಶ್ರೀಯಾ ರೆಡ್ಡಿ, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ‘ಉಗ್ರಂ’ ರಿಮೇಕ್ ಎನ್ನುವ ಕಾರಣಕ್ಕೆ ಟೀಕೆ ಪಡೆಯಿತು. ಈ ಚಿತ್ರದ ಗಳಿಕೆ 625 ಕೋಟಿ ರೂಪಾಯಿ. ಈ ಚಿತ್ರಕ್ಕೆ ಸೀಕ್ವೆಲ್ ಬರಬೇಕಿದೆ.
ಬಾಹುಬಲಿ
ಅಂದಿನ ಕಾಲಕ್ಕೆ ಹೊಸ ಲೋಕವನ್ನು ಕಟ್ಟಿಕೊಟ್ಟಿತ್ತು ‘ಬಾಹುಬಲಿ’. ಈ ಕಾರಣಕ್ಕೆ ಜನರು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡಿದರು. ಎರಡು ಪಾರ್ಟ್ಗಳಲ್ಲಿ ಸಿನಿಮಾನ ತೆರೆಗೆ ತರುವ ಟ್ರೆಂಡ್ ಸೃಷ್ಟಿ ಆಗಿದ್ದೇ ‘ಬಾಹುಬಲಿ’ ಚಿತ್ರದಿಂದ ಎಂಬುದು ವಿಶೇಷ. ಈ ಸಿನಿಮಾ 600 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಸಾಹೋ
ವಿಮರ್ಶೆಯಲ್ಲಿ ಸೋಲು ಕಂಡ ಚಿತ್ರ ಎಂದರೆ ಅದು ‘ಸಾಹೋ’. 2019ರಲ್ಲಿ ಈ ಚಿತ್ರ ರಿಲೀಸ್ ಆಯಿತು. ಆದಾಗ್ಯೂ ಸಿನಿಮಾ ಒಂದು ಹಂತಕ್ಕೆ ಬಿಸ್ನೆಸ್ ಮಾಡಿತ್ತು. ಈ ಚಿತ್ರದಲ್ಲಿ ನೀಲ್ ನಿತಿನ್ ಮುಕೇಶ್, ಮಂದಿರಾ ಬೇಡಿ, ಅರುಣ್ ವಿಜಯ್, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 359 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಆದಿಪುರುಷ್
ಆದಿಪುರುಷ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಆದಾಗ್ಯೂ ಪ್ರಭಾಸ್ ನಟನೆಯ ಈ ಚಿತ್ರ ಅವರ ಟಾಪ್ ಐದು ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾ 397.8 ಕೋಟಿ ರೂಪಾಯಿ ಬಾಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.