ಭೀಕರವಾಯ್ತು ಬದುಕು: ರಾತ್ರೋರಾತ್ರಿ ಸ್ಟಾರ್ ಆಗಿದ್ದ ‘ಕಚ್ಚಾ ಬಾದಾಮ್​’ ಗಾಯಕನಿಗೆ ಇದೆಂಥಾ ದುಸ್ಥಿತಿ

| Updated By: Digi Tech Desk

Updated on: Mar 10, 2023 | 8:03 AM

Bhuban Badyakar: ಭುಬನ್ ಅವರು ಇದೇ ಹಾಡನ್ನು ಹೇಳಿ, ನೆಲಗಡಲೆ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರು ಈ ಹಾಡನ್ನು ಹಾಡುವಂತಿಲ್ಲ.

ಭೀಕರವಾಯ್ತು ಬದುಕು: ರಾತ್ರೋರಾತ್ರಿ ಸ್ಟಾರ್ ಆಗಿದ್ದ ‘ಕಚ್ಚಾ ಬಾದಾಮ್​’ ಗಾಯಕನಿಗೆ ಇದೆಂಥಾ ದುಸ್ಥಿತಿ
ಭುಬ್ಯಾನ್
Follow us on

ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾ ವ್ಯಾಪ್ತಿ ಹಿರಿದಾಗಿದೆ. ಇದರಿಂದ ಅನೇಕರಿಗೆ ಜನಪ್ರಿಯತೆ ಸಿಗುತ್ತಿದೆ. ರಾತ್ರಿ ಬೆಳಗಾಗುವುದರೊಳಗೆ ಅನೇಕರು ಸ್ಟಾರ್ ಆದ ಉದಾಹರಣೆ ಇದೆ. ‘ಕಚ್ಚಾ ಬಾದಮ್​’ ಹಾಡನ್ನು (Kacha Badam) ಹಾಡುವ ಮೂಲಕ ಪಶ್ಚಿಮ ಬಂಗಾಳದ ಭುಬನ್ ಬಡ್ಯಾಕರ್ ಅವರು ರಾತ್ರೋರಾತ್ರಿ ಸ್ಟಾರ್ ಆಗಿದ್ದರು. ಎಲ್ಲೆಲ್ಲೂ ಅವರದ್ದೇ ಸುದ್ದಿ ಆಗಿತ್ತು. ಇನ್​ಸ್ಟಾಗ್ರಾಮ್ ರೀಲ್ಸ್​​ನಲ್ಲಿ ಈ ಸಾಂಗ್ ಹೆಚ್ಚು ಪ್ರಚಲಿತದಲ್ಲಿತ್ತು. ಈ ಸಂಭ್ರಮ ಕೆಲವೇ ಕೆಲವು ತಿಂಗಳು ಮಾತ್ರ ಇತ್ತು. ಈಗ ‘ಕಚ್ಚಾ ಬಾದಾಮ್’ ಗಾಯಕನ ಪರಿಸ್ಥಿತಿ ಭೀಕರ ಆಗಿದೆ. ಮನೆ ಬಾಡಿಗೆ ಕಟ್ಟಲೂ ಹಣ ಇಲ್ಲದಂತಾಗಿದೆ.

ಪಶ್ಚಿಮ ಬಂಗಾಳದ ಹಳ್ಳಿಗಳಲ್ಲಿ ಹಾಡು ಹೇಳುತ್ತ ಕಡಲೆಕಾಯಿ (ಶೇಂಗಾ) ಮಾರುತ್ತಾ ಭುಬನ್ ಜೀವನ ಸಾಗಿಸುತ್ತಿದ್ದವರು. ಈ ಹಾಡನ್ನು ಊರಿನವರೇ ಕೆಲವರು ರೆಕಾರ್ಡ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದರು. ಈ ವಿಡಿಯೋ ಸಖತ್​ ಸೆನ್ಸೇಷನ್​ ಸೃಷ್ಟಿ ಮಾಡಿತ್ತು. ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ, ಭುಬನ್​ ಹಾಡಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಈ ಹಾಡು ಸಖತ್​ ಸೌಂಡ್ ಮಾಡಿತ್ತು. ಭುಬನ್ ಅವರನ್ನು ಇಟ್ಟುಕೊಂಡು ‘ಕಚ್ಚಾ ಬಾದಾಮ್​..’ ವಿಡಿಯೋ ಸಾಂಗ್ ಮಾಡಲಾಗಿದೆ. ಈಗ ಜನಪ್ರಿಯತೆ ಅವರಿಗೆ ಮುಳುವಾಗಿದೆ.

ಭುಬನ್ ಈ ಹಾಡನ್ನು ಹಾಡುವಂತಿಲ್ಲ!

ಭುಬನ್ ಅವರು ಇದೇ ಹಾಡನ್ನು ಹೇಳಿ, ನೆಲಗಡಲೆ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರು ಈ ಹಾಡನ್ನು ಹಾಡುವಂತಿಲ್ಲ. ಕಂಪನಿಯೊಂದು ಈ ಹಾಡಿನ ಹಕ್ಕು ಪಡೆದಿದ್ದು, ಇದರ ಪ್ರಕಾರ ಭುಬನ್ ಅವರು ಇದನ್ನು ಎಂದಿಗೂ ಹಾಡುವಂತಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ‘ಕಚ್ಚಾ ಬಾದಾಮ್​’ ಹುಡುಗಿಯ ಹೊಸ ವಿಡಿಯೋ ವೈರಲ್; ಡ್ರೆಸ್ ನೋಡಿ ಖುಷಿಪಟ್ಟ ಫ್ಯಾನ್ಸ್​

‘ದುಬರಾಜಪುರದಲ್ಲಿ ನಾನು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಬಾಡಿಗೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದೇನೆ. ನನಗೆ ಆದಾಯವೇ ಇಲ್ಲದಂತಾಗಿದೆ. ಇನ್ನು ಎಷ್ಟು ದಿನ ಈ ರೀತಿ ನಡೆಯುತ್ತದೆ ಎಂಬುದು ನನಗೆ ತಿಳಿದಿಲ್ಲ. ‘ಕಚ್ಚಾ ಬಾದಾಮ್..’ ಹಾಡು ನನಗೆ ಜನಪ್ರಿಯತೆ ನೀಡಿದೆ. ಆದರೆ ಈಗ ಆ ಕಾರಣದಿಂದ ನನ್ನ ಮನೆಯಲ್ಲಿ ಇರಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ದುಃಖ ತೋಡಿಕೊಂಡಿದ್ದಾರೆ ಭುಬನ್.

ಇದನ್ನೂ ಓದಿ: ಮಾಧುರಿ ದೀಕ್ಷಿತ್​ಗೂ ಹತ್ತಿದೆ ‘ಕಚ್ಚಾ ಬಾದಾಮ್​’ ಗುಂಗು; ರಿತೇಶ್​​ ಜತೆ ಮಸ್ತ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ

ಪಶ್ಚಿಮ ಬಂಗಾಳದ ಕಂಪನಿಯೊಂದು ‘ಕಚ್ಚಾ ಬಾದಾಮ್..’ ಹಾಡಿನ ಹಕ್ಕನ್ನು ಪಡೆದಿದೆಯಂತೆ. ಇದರ ಪ್ರಕಾರ ಭುಬನ್ ಈ ಹಾಡನ್ನು ಹಾಡುವಂತಿಲ್ಲ. ನನ್ನ ಒಪ್ಪಿಗೆ ಇಲ್ಲದೆ ಈ ಹಾಡಿನ ಹಕ್ಕನ್ನು ಯಾರು ಕೊಂಡುಕೊಳ್ಳುತ್ತಾರೆ ಅನ್ನೋದು ಅವರ ಪ್ರಶ್ನೆ. ‘ನಾನು ವಿದ್ಯಾವಂತನಲ್ಲ. ನನಗೆ ಇಂಗ್ಲಿಷ್ ಓದಲೂ ಬರುವುದಿಲ್ಲ. ನನ್ನ ಹಾಡನ್ನು ಖರೀದಿಸಿರುವುದಾಗಿ ಅವರು ಹೇಳುತ್ತಿದ್ದಾರೆ. ನಾನು ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರತೋಡಿಕೊಂಡಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:30 am, Fri, 10 March 23