‘ಕಚ್ಚಾ ಬಾದಾಮ್’ ಹುಡುಗಿಯ ಹೊಸ ವಿಡಿಯೋ ವೈರಲ್; ಡ್ರೆಸ್ ನೋಡಿ ಖುಷಿಪಟ್ಟ ಫ್ಯಾನ್ಸ್
ಅಂಜಲಿ ಅವರು ಬರ್ತ್ಡೇ ದಿನ ಕೆಂಪು ಬಣ್ಣದ ಗೌನ್ ತೊಟ್ಟಿದ್ದರು. ವೆಲ್ವೆಟ್ ಡ್ರೆಸ್ ಎಲ್ಲರ ಗಮನ ಸೆಳೆದಿದೆ. ಅವರು ಬ್ಯಾಕ್ಲೆಸ್ ಆಗಿ ಕಾಣಿಸಿಕೊಂಡಿದ್ದರು. ಉರ್ಫಿ ಜಾವೇದ್ ಕೂಡ ವಿಚಿತ್ರ ಡ್ರೆಸ್ ಹಾಕಿದ್ದರು.

‘ಕಚ್ಚಾ ಬಾದಮ್..’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಂಜಲಿ ಅರೋರಾ (Anjali Arora) ಫೇಮಸ್ ಆದರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರು ಸಿಕ್ಕರು. ಈಗ ಅವರು ಗ್ರ್ಯಾಂಡ್ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರ ಡ್ರೆಸ್ ಸಾಕಷ್ಟು ಗಮನ ಸೆಳೆದಿದೆ. ಈ ಬರ್ತ್ಡೇ ಸಂಭ್ರಮದಲ್ಲಿ ವೈರಲ್ ಹುಡುಗಿಗೆ ನಟಿ ಉರ್ಫಿ ಜಾವೇದ್ (Urfi Javed) ಕೂಡ ಸಾಥ್ ನೀಡಿದ್ದಾರೆ. ಉರ್ಫಿ ಹಾಗೂ ಅಂಜಲಿ ಡ್ರೆಸ್ ಎಲ್ಲರ ಗಮನ ಸೆಳೆಯುತ್ತಿದೆ.
ಅಂಜಲಿ ಅವರು ಬರ್ತ್ಡೇ ದಿನ ಕೆಂಪು ಬಣ್ಣದ ಗೌನ್ ತೊಟ್ಟಿದ್ದರು. ವೆಲ್ವೆಟ್ ಡ್ರೆಸ್ ಎಲ್ಲರ ಗಮನ ಸೆಳೆದಿದೆ. ಅವರು ಬ್ಯಾಕ್ಲೆಸ್ ಆಗಿ ಕಾಣಿಸಿಕೊಂಡಿದ್ದರು. ಉರ್ಫಿ ಜಾವೇದ್ ಕೂಡ ವಿಚಿತ್ರ ಡ್ರೆಸ್ ಹಾಕಿದ್ದರು. ಇಬ್ಬರೂ ಒಂದೇ ಕಡೆ ಸೇರಿರುವುದರಿಂದ ಪಾಪರಾಜಿಗಳಿಗೆ ಹಬ್ಬ ಆಗಿದೆ. ಅವರು ವಿಡಿಯೋಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಉರ್ಫಿ ಜಾವೇದ್ ಅವರು ಒಂದು ಮ್ಯೂಸಿಕ್ ವೀಡಿಯೋದಲ್ಲಿ ನಟಿಸಿದ್ದಾರೆ. ‘ಹಾಯ್ ಹಾಯ್ ಯೇ ಮಜ್ಬೂರಿ..’ ಗೀತೆಯ ರಿಮಿಕ್ಸ್ ಆಗಿರುವ ಈ ಹಾಡಿನಲ್ಲಿ ಅವರು ಹಾಟ್ ಆಗಿ ಸೀರೆ ಉಟ್ಟಿದ್ದರು. ಉರ್ಫಿ ಜಾವೇದ್ ಅವರು ಈ ರೀತಿ ಬಟ್ಟೆ ಧರಿಸುವ ಮೂಲಕ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂದು ಕೇಸ್ ಹಾಕಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಉರ್ಫಿ ಜಾವೇದ್ ಪ್ರತಿಕ್ರಿಯೆ ನೀಡಿಲ್ಲ. ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿದ ಬಳಿಕ ಉರ್ಫಿ ಜಾವೇದ್ ಅವರ ಖ್ಯಾತಿ ಹೆಚ್ಚಿತು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.
View this post on Instagram
ಇದನ್ನೂ ಓದಿ: Urfi Javed: ಬೇಕಾಬಿಟ್ಟಿ ಡ್ರೆಸ್ ಹಾಕುವ ಉರ್ಫಿ ಜಾವೇದ್ ಮೇಲೆ ಬಿತ್ತು ಕೇಸ್; ಸೀರೆಯಲ್ಲೂ ನಟಿಗೆ ಸಂಕಷ್ಟ
‘ಕಚ್ಚಾ ಬಾದಮ್..’ ಹಾಡು ಇತ್ತೀಚೆಗೆ ಸಾಕಷ್ಟು ಖ್ಯಾತಿ ಗಳಿಸಿತ್ತು. ಈ ಹಾಡಿಗೆ ಅಂಜಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದಾದ ಬಳಿಕ ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿತ್ತು.








