AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss: ನಾನು ಆತ್ಮಹತ್ಯೆಗೆ ಚಿಂತಿಸಿದ್ದೆ; ಬಿಗ್​ ಬಾಸ್​ ಸ್ಪರ್ಧಿ ಬಿಚ್ಚಿಟ್ರು ಜೀವನದ ಕರಾಳ ಅನುಭವ

Jasmin Bhasin : ಕೈಯಲ್ಲಿ ಕೆಲಸ ಇರುತ್ತಿರಲಿಲ್ಲ. ಹೀಗಾಗಿ, ಬೇರೆ ಬೇರೆ ಆಲೋಚನೆಗಳು ಬರುತ್ತಿದ್ದವು ಎಂದು ಇಂಗ್ಲಿಷ್​ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜಾಸ್ಮಿನ್​ ಈ ವಿಚಾರ ಹೇಳಿಕೊಂಡಿದ್ದಾರೆ.

Bigg Boss: ನಾನು ಆತ್ಮಹತ್ಯೆಗೆ ಚಿಂತಿಸಿದ್ದೆ; ಬಿಗ್​ ಬಾಸ್​ ಸ್ಪರ್ಧಿ ಬಿಚ್ಚಿಟ್ರು ಜೀವನದ ಕರಾಳ ಅನುಭವ
ಜಾಸ್ಮಿನ್​
ರಾಜೇಶ್ ದುಗ್ಗುಮನೆ
| Edited By: |

Updated on: May 03, 2021 | 4:45 PM

Share

ಸೆಲೆಬ್ರಿಟಿಗಳ ಲೈಫ್​ ಎಂದರೆ ಕಲರ್​ಫುಲ್​ ಎಂಬುದು ಅನೇಕರ ನಂಬಿಕೆ. ಆದರೆ, ಬಹುತೇಕ ಸೆಲೆಬ್ರಿಟಿಗಳು ಕಷ್ಟದ ದಿನಗಳನ್ನು ಎದುರಿಸಿ ಗೆಲುವು ಸಾಧಿಸಿರುತ್ತಾರೆ. ಈಗ ಹಿಂದಿ ಬಿಗ್​ ಬಾಸ್ 14ನೇ ಸೀಸನ್​ ಸ್ಪರ್ಧಿ ಜಾಸ್ಮಿನ್ ಭಸಿನ್ ಕೂಡ ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ. ಅಷ್ಟೇ ಅಲ್ಲ, ಅವರ ತಲೆಯಲ್ಲಿ ಹಾದು ಹೋಗುತ್ತಿದ್ದ ಆತ್ಮಹತ್ಯೆ ಆಲೋಚನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇಂಗ್ಲಿಷ್​ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜಾಸ್ಮಿನ್​ ಈ ವಿಚಾರ ಹೇಳಿಕೊಂಡಿದ್ದಾರೆ. ನಾನು ಬಣ್ಣದ ಬದುಕು ಆರಂಭಿಸಿದ ದಿನಗಳು ಅವು. ಮುಂಬೈಗೆ ಬಂದಾಗ ನಾನು ತುಂಬಾನೇ ಕಷ್ಟ ಅನುಭವಿಸಿದ್ದೆ. ಹೊರಗಿನ ಜಗತ್ತಿನ ಜತೆಗೆ ನನ್ನ ಒಳಗೆ ಒಂದು ತಿಕ್ಕಾಟ ನಡೆಯುತ್ತಿತ್ತು. ನಾನು ಕಾನ್ಫಿಡೆನ್ಸ್​ ಕಳೆದುಕೊಂಡಿದ್ದೆ. ನನ್ನಲ್ಲಿ, ನನ್ನ ಚರ್ಮದಲ್ಲಿ ಏನೋ ದೋಷವಿದೆ. ನಾನು ಸುಂದರವಾಗಿ ಕಾಣುತ್ತಿಲ್ಲ. ಎಲ್ಲರೂ ನನ್ನನ್ನು ರಿಜೆಕ್ಟ್​ ಮಾಡುತ್ತಿದ್ದಾರೆ ಎಂದು ನನಗೆ ಭಾಸವಾಗುತ್ತಿತ್ತು ಎಂದರು.

ಕೈಯಲ್ಲಿ ಕೆಲಸ ಇರುತ್ತಿರಲಿಲ್ಲ. ಹೀಗಾಗಿ, ಬೇರೆ ಬೇರೆ ಆಲೋಚನೆಗಳು ಬರುತ್ತಿದ್ದವು. ಆತ್ಮಹತ್ಯೆ ಆಲೋಚನೆಗಳು ಕೂಡ ಹರಿದಾಡಿದ್ದವು. ಆದರೆ, ನನ್ನಲ್ಲಿ ಒಂದು ಕಾನ್ಫಿಡೆನ್ಸ್​ ಬೆಳೆಸಿಕೊಂಡೆ. ನಂತರ ನನಗೆ ಆಫರ್​ಗಳು ಕೂಡ ಸಿಗೋಕೆ ಆರಂಭವಾದವು. ನಂತರ ಎಲ್ಲವೂ ಬದಲಾಯಿತು ಎಂದಿದ್ದಾರೆ ಜಾಸ್ಮಿನ್​.

ಜಾಸ್ಮಿನ್​ ರಾಜಸ್ಥಾನ ಮೂಲದವರು. ಮಾಡೆಲಿಂಗ್​ ಮೂಲಕ ಕೆರಿಯರ್​ ಆರಂಭಿಸಿದ ಅವರು ತಾಶನ್​-ಎ-ಇಷ್ಕ್​ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಅವರಿಗೆ ಸಿನಿಮಾಗಳಲ್ಲಿಯೂ ನಟಿಸೋಕೆ ಅವಕಾಶ ಸಿಕ್ಕಿತ್ತು.

ಸಾಕಷ್ಟು ಸೆಲೆಬ್ರಿಟಿಗಳು ಅವಕಾಶ ಸಿಗದಿದ್ದಾಗ ಖಿನ್ನತೆಗೆ ಒಳಗಾದ ಬಗ್ಗೆ ಹೇಳಿಕೊಂಡಿದ್ದರು. ನಟಿ ದೀಪಿಕಾ ಪಡುಕೋಣೆ ಕೂಡ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಅವರು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಬಣ್ಣದ ಲೋಕದ ಕನಸು ಕಂಡಿದ್ದ ಜಯಶ್ರೀಗೆ ಮನಸಿನ ಬಣ್ಣವೇ ಮಾಸಿಹೋಗಿತ್ತು; ಜೀವವನ್ನೇ ಕಸಿಯಿತು ಖಿನ್ನತೆಯೆಂಬ ಕೂಪ

ಮಾನಸಿಕ‌ ಖಿನ್ನತೆ: ಜೀವನದಲ್ಲಿ ಗೆಲ್ಲಲು ಆಗಲಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಏಕಲವ್ಯ ಪ್ರಶಸ್ತಿ ವಿಜೇತೆ

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ