Bigg Boss Kannada: ರಘು ಹೆಂಡತಿ ತನ್ನ ಪತಿ ಬದಲು ವೈಷ್ಣವಿಗೆ ವೋಟ್ ಮಾಡಿದ್ದೇಕೆ?
Vaishnavi: ವೈಷ್ಣವಿ ಅವರದ್ದು ಎಲ್ಲರಿಗೂ ಇಷ್ಟವಾಗುವ ಗುಣ. ಹೀಗಾಗಿ, ಅವರು ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿದ್ದು ತುಂಬಾನೇ ಕಡಿಮೆ. ನಾಮಿನೇಟ್ ಆದರೂ ಅವರು ಸುಲಭವಾಗಿ ಬಚಾವ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಾಮಿನೇಟ್ ಆದಾಗ ಕುಟುಂಬದವರು, ನೆಂಟರಿಷ್ಟರು, ಅಭಿಮಾನಿಗಳು ಅವರಿಗೆ ವೋಟ್ ಮಾಡುತ್ತಾರೆ. ಆದರೆ, ಬಿಗ್ ಬಾಸ್ ಮನೆ ಸೇರಿರುವ ರಘು ಗೌಡ ವಿಚಾರದಲ್ಲಿ ಇದು ಉಲ್ಟಾ ಆಗಿರಬಹುದು. ಅವರ ಹೆಂಡತಿ ರಘುಗೆ ವೋಟ್ ಮಾಡುವ ಬದಲು ವೈಷ್ಣವಿಗೆ ವೋಟ್ ಮಾಡಿದ್ದಾರಂತೆ! ಇದಕ್ಕೆ ಕಾರಣವನ್ನು ಕೂಡ ರಘು ಬಿಚ್ಚಿಟ್ಟಿದ್ದಾರೆ.
ವೈಷ್ಣವಿ ಅವರದ್ದು ಎಲ್ಲರಿಗೂ ಇಷ್ಟವಾಗುವ ಗುಣ. ಹೀಗಾಗಿ, ಅವರು ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿದ್ದು ತುಂಬಾನೇ ಕಡಿಮೆ. ನಾಮಿನೇಟ್ ಆದರೂ ಅವರು ಸುಲಭವಾಗಿ ಬಚಾವ್ ಆಗಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಿರುವುದರಿಂದ ಅವರಿಗೆ ಹೆಚ್ಚು ಮತ ಬಿದ್ದಿದೆ. ಅಷ್ಟಕ್ಕೂ ಅವರ ಅಭಿಮಾನಿ ಬಳಗ ದೊಡ್ಡದಾಗೋಕೆ ಕಾರಣ ಏನು ಎನ್ನುವುದನ್ನು ರಘು ಹಾಗೂ ಮಂಜು ವಿವರಿಸಿದ್ದಾರೆ.
ವೈಷ್ಣವಿ ಮನೆಯ ಗಾರ್ಡನ್ ಏರಿಯಾದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಆಗ ಅಲ್ಲಿದ್ದ ಮಂಜು ಹಾಗೂ ರಘು, ವೈಷ್ಣವಿ ಕಾಲೆಳೆಯೋಕೆ ಆರಂಭಿಸಿದ್ದಾರೆ. ರಘುಗೆ ಒಳ್ಳೆದಾಗ್ಲಿ. ಅವನ ಬಾಳು ಬಂಗಾರ ಆಗಲಿ. ನನ್ನ ಪಾಲಿನ ಸುಖ ಅವನಿಗೆ ಹೋಗಲಿ. ನನ್ನ ಪೇಮೆಂಟ್ ರಘು ಖಾತೆಗೆ ಹೋಗಲಿ ಎಂದು ವೈಷ್ಣವಿ ಬೇಡಿಕೊಳ್ಳುತ್ತಿದ್ದಾರೆ ಎಂದರು ರಘು. ಆಗ ಮಂಜು, ದೇವರೇ ಅವನು ಹೇಳಿದ್ದು ಬೇಗೆ ಸುಳ್ಳಾಗಲಿ ಎಂದರು.
ಈ ಸಂಭಾಷಣೆ ಕೇಳುತ್ತಿದ್ದ ವೈಷ್ಣವಿ ನಕ್ಕಿದ್ದಾರೆ. ಯಾಕೆ ನಗ್ತೀರಾ? ಏಕಾಗ್ರತೆಯೇ ಇಲ್ಲ. ವೈಷ್ಣವಿ ಕಣ್ಮು ಮುಚ್ಚಿಕೊಂಡು ನಾಟಕ ಆಡ್ತಾಳೆ. ಕ್ಯಾಮೆರಾ ಮೆನ್ ಪಾಪ ಇವಳು ಧ್ಯಾನ ಮಾಡ್ತಾಳೆ ಅಂದುಕೊಂಡಿರುತ್ತಾನೆ. ಏಳುವರೆ ಕೋಟಿ ಜನರನ್ನು ನೀನು ಯಾಮಾರಿಸಿಬಿಟ್ಟೆಯಲ್ಲಮ್ಮ ಎಂದು ಮಂಜು ಹೇಳಿದರು.
ಆಗ ರಘು ಮಾತು ಆರಂಭಿಸಿದರು. ನನಗೆ ಬಂಟಿ ಬಂಟಿ ಎಂದು ನಾಯಿ ಲವರ್ಸ್ ವೋಟ್ ಪಡೆದುಕೊಂಡರು. ಧ್ಯಾನ ಮಾಡುವ ಮೂಲಕ ಯೋಗ ಹಾಗೂ ಜಿಮ್ ಮಾಡುವವರ ವೋಟ್ ಪಡೆದುಕೊಂಡರು. ಕಿಚನ್ನಲ್ಲಿದ್ದಾಗ ಆಂಟಿಯರ ವೋಟ್, ಜೀನ್ಸ್ ಹಾಕಿಕೊಂಡು ಟಾಂ ಬಾಯ್ಸ್ ವೋಟ್ ಸಿಕ್ಕಿದೆ. ಸಖತ್ ಆಗಿ ಡ್ರೆಸ್ ಮಾಡಿಕೊಂಡಿದ್ದನ್ನು ನೋಡಿ ನನ್ನ ಹೆಂಡ್ತಿನೇ ಇವಳಿಗೆ ವೋಟ್ ಮಾಡಿರ್ತಾಳೆ ಎಂದರು. ಇದನ್ನು ಕೇಳಿ ಮೂವರು ನಕ್ಕರು.
ಇದನ್ನೂ ಓದಿ: ವೈಷ್ಣವಿ ಜತೆ ರಘು ಗೌಡ ಕ್ಲೋಸ್ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?
ಕ್ಯಾಪ್ಟನ್ ಆದ ಮರುದಿನವೇ ಚಕ್ರವರ್ತಿಗೆ ದ್ರೋಹ ಬಗೆದ ರಘು; ಮಾಡಿದ ಸಹಾಯ ಇಷ್ಟು ಬೇಗ ಮರೆತೋಯ್ತಾ?
Published On - 3:42 pm, Mon, 3 May 21