Bigg Boss Elimination: ಈ ವಾರದ ಎಲಿಮಿನೇಷನ್​ಗೆ ಹೊಸ ಮಾರ್ಗ ಅನುಸರಿಸಿದ ಬಿಗ್​ ಬಾಸ್​!

ಸಿನಿಮಾ ಕೆಲಸಗಳಿಗೆ ಸುದೀಪ್​ ಬೇರೆ ಬೇರೆ ಕಡೆಗಳಿಗೆ ತೆರಳಿದರೂ ವೀಕೆಂಡ್​ನಲ್ಲಿ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಇದು 8 ವರ್ಷಗಳಿಂದಲೂ ನಡೆದುಕೊಂಡೇ ಬಂದಿದೆ.

Bigg Boss Elimination: ಈ ವಾರದ ಎಲಿಮಿನೇಷನ್​ಗೆ ಹೊಸ ಮಾರ್ಗ ಅನುಸರಿಸಿದ ಬಿಗ್​ ಬಾಸ್​!
ಬಿಗ್​ ಬಾಸ್​ ಕನ್ನಡ

Updated on: Apr 18, 2021 | 7:48 PM

ಬಿಗ್​ ಬಾಸ್​ ಮನೆಯ ಏಳನೆ ವಾರದ ವೀಕೆಂಡ್​ ಭಿನ್ನ ರೀತಿಯ ಎಪಿಸೋಡ್​ಗೆ ಸಾಕ್ಷಿಯಾಗಿದೆ. ಪ್ರತಿ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಬಂದು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ, ಅನಾರೋಗ್ಯ ಕಾರಣದಿಂದ ಸುದೀಪ್​ ಬಂದಿಲ್ಲ. ಹೀಗಾಗಿ, ಎಲಿಮಿನೇಷನ್​ ಬೇರೆ ರೀತಿಯಲ್ಲಿ ನಡೆದಿದೆ.

ಸಿನಿಮಾ ಕೆಲಸಗಳಿಗೆ ಸುದೀಪ್​ ಬೇರೆ ಬೇರೆ ಕಡೆಗಳಿಗೆ ತೆರಳಿದರೂ ವೀಕೆಂಡ್​ನಲ್ಲಿ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಇದು 8 ವರ್ಷಗಳಿಂದಲೂ ನಡೆದುಕೊಂಡೇ ಬಂದಿದೆ. ಆದರೆ, ಈ ಬಾರಿ ಅನಾರೋಗ್ಯದ ಕಾರಣದಿಂದ ಅವರು ನಿರೂಪಣೆ ಮಾಡುತ್ತಿಲ್ಲ. ಈ ವಿಚಾರವನ್ನು ಅವರು ಇತ್ತೀಚೆಗೆ ಅಧಿಕೃತಗೊಳಿಸಿದ್ದರು.

ಸುದೀಪ್​ ಈ ವಾರ ಬರುವುದಿಲ್ಲ ಎಂಬುದು ಮನೆ ಮಂದಿಗೆ ಗೊತ್ತಿರಲಿಲ್ಲ. ಸ್ಪರ್ಧಿಗಳಿಗೆ ಈ ವಿಚಾರ ತಿಳಿದಾಗ ಶಾಕ್​ ಆಗಿದ್ದರು. ಸುದೀಪ್​ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದರು. ಈ ವಾರ ಟಾಸ್ಕ್​ಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಕೆಲಸವನ್ನು ಬಿಗ್​ ಬಾಸ್​ ಮಾಡಿದೆ.

ಪ್ರತಿವಾರ ಎಲಿಮಿನೇಷ್​ನಗೆ ನಾಮಿನೇಟ್​ ಆದವರ ಪೈಕಿ ಸೇಫ್​ ಆದ ಕೆಲವರ ಹೆಸರನ್ನು ಸುದೀಪ್​ ಶನಿವಾರವೇ ಘೋಷಣೆ ಮಾಡುತ್ತಿದ್ದರು. ನಂತರ ಭಾನುವಾರ ಅಂತಿಮವಾಗಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದು ಘೋಷಣೆ ಆಗುತ್ತಿತ್ತು. ಆದರೆ, ಈ ಬಾರಿ ಬಿಗ್​ ಬಾಸ್​ ಬೇರೆಯದೇ ಮಾರ್ಗ ಅನುಸರಿಸಿದ್ದಾರೆ.

ಈ ವಾರ ಎಲ್ಲಾ ಸ್ಪರ್ಧಿಗಳನ್ನು ಲಿವಿಂಗ್​ ಏರಿಯಾದಲ್ಲಿ ಕೂರಿಸಲಾಗಿದೆ. ಕೊನೆಗೆ ಪರದೆ ಮೇಲೆ ಈ ವಾರ ನಾಮಿನೇಟ್​ ಆದವರ ವಿಡಿಯೋವನ್ನು ವಿಟಿಯನ್ನು ತೋರಿಸಲಾಗಿದೆ. ಇದನ್ನು ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಮೂಲಕ ಹಂಚಿಕೊಂಡಿದೆ. ಸುದೀಪ್​ ಇಲ್ಲ ಎಂದ ಮಾತ್ರಕ್ಕೆ ಬೇರೆ ಯಾವುದೇ ಸ್ಟಾರ್​ ಕಲಾವಿದರಿಗೂ ಕಲರ್ಸ್​ ಕನ್ನಡ ವಾಹಿನಿ ಮಣೆ ಹಾಕಿಲ್ಲ.

ಅಂದಹಾಗೆ, ಈ ವಾರ ವಿಶ್ವನಾಥ್​ ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ. ಅವರು ಈ ವಾರ ಅಷ್ಟಾಗಿ ಪರ್ಫಾರ್ಮೆನ್ಸ್​ ನೀಡಿಲ್ಲ. ಹೀಗಾಗಿ, ಅವರಿಗೆ ಕಡಿಮೆ ವೋಟ್​ಗಳು ಬಿದ್ದಿವೆ.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ವೀಕೆಂಡ್ ಶೋ ನಡೆಸಿಕೊಡುವ ಸ್ಟಾರ್ ಯಾರು?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us