ಪ್ರಶಾಂತ್​-ಅರವಿಂದ್ ಕೈ ಮಿಲಾಯಿಸಿಕೊಳ್ಳುವುದನ್ನು ತಪ್ಪಿಸಿದ ಮನೆ ಮಂದಿ; ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳ

ದಿವ್ಯಾ ಉರುಡುಗ ಕ್ಯಾಪ್ಟನ್ಸಿಯಲ್ಲಿ ಮೋಸ ನಡೆದಿದೆ ಎಂಬುದು ಪ್ರಶಾಂತ್​ ಸಂಬರಗಿ ವಾದ. ಇದನ್ನು ಮನೆಯಲ್ಲಿ ಸಾಕಷ್ಟು ಬಾರಿ ಹೇಳಿದ್ದಾರೆ ಪ್ರಶಾಂತ್​. ಜುಲೈ 9ರ ಎಪಿಸೋಡ್​ನಲ್ಲಿ ಈ ವಿಚಾರಕ್ಕೆ ಇಡೀ ಮನೆ ರಣರಂಗವಾಗಿದೆ.

ಪ್ರಶಾಂತ್​-ಅರವಿಂದ್ ಕೈ ಮಿಲಾಯಿಸಿಕೊಳ್ಳುವುದನ್ನು ತಪ್ಪಿಸಿದ ಮನೆ ಮಂದಿ; ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳ
ಅರವಿಂದ್​-ಪ್ರಶಾಂತ್​
Edited By:

Updated on: Jul 10, 2021 | 7:00 AM

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಹಾಗೂ ಅರವಿಂದ್ ನಡುವೆ ಯಾವುದೂ ಸರಿ ಇಲ್ಲ. ಕುಂತಲ್ಲಿ ನಿಂತಲ್ಲಿ ಜಗಳವಾಗುತ್ತಿದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಇಬ್ಬರ ನಡುವಿನ ಜಗಳ ಈಗ ಮಿತಿ ಮೀರಿದೆ. ಬಿಗ್​ ಬಾಸ್​ ಮನೆಯಲ್ಲಿ ಇಬ್ಬರೂ ಕೈ ಕೈ ಮಿಲಾಯಿಸೋಕೆ ಮುಂದಾಗಿದ್ದಾರೆ. ಇದನ್ನು ಮನೆ ಮಂದಿ ತಪ್ಪಿಸಿದ್ದಾರೆ.

ದಿವ್ಯಾ ಉರುಡುಗ ಕ್ಯಾಪ್ಟನ್ಸಿಯಲ್ಲಿ ಮೋಸ ನಡೆದಿದೆ ಎಂಬುದು ಪ್ರಶಾಂತ್​ ಸಂಬರಗಿ ವಾದ. ಇದನ್ನು ಮನೆಯಲ್ಲಿ ಸಾಕಷ್ಟು ಬಾರಿ ಹೇಳಿದ್ದಾರೆ ಪ್ರಶಾಂತ್​. ಜುಲೈ 9ರ ಎಪಿಸೋಡ್​ನಲ್ಲಿ ಈ ವಿಚಾರಕ್ಕೆ ಇಡೀ ಮನೆ ರಣರಂಗವಾಗಿದೆ. ಪ್ರಶಾಂತ್​ ಸಂಬರಗಿ ಅವರು ದೊಡ್ಡ ಕೂಗಾಟ ನಡೆಸಿದ್ದಾರೆ.

‘ದಿವ್ಯಾ ಉರುಡುಗ ನಿಮ್ಮ ಕ್ಯಾಪ್ಟನ್ಸಿ ಮುಗಿದಿದೆ’ ಎನ್ನುವ ಆದೇಶ ಬಿಗ್​ ಬಾಸ್​ ಕಡೆಯಿಂದ ಬಂತು. ಆಗ ದಿವ್ಯಾ ಉರುಡುಗಗೆ ಶೇಕ್​ ಹ್ಯಾಂಡ್​ ಮಾಡಿದ ಪ್ರಶಾಂತ್​ ಗುಡ್​ ಜಾಬ್​ ಎಂದರು. ಇದು ಸುಳ್ಳು. ಇದನ್ನು ನಂಬಬೇಡ ಎನ್ನುವ ಕಿವಿಮಾತನ್ನು ಅರವಿಂದ್​ ನೇರವಾಗಿ ಹೇಳಿದರು. ಆಗ ಪ್ರಶಾಂತ್​, ನಾನು ಏನೇ ಇದ್ದರೂ ಅದನ್ನು ನೇರವಾಗಿ ಹೇಳುತ್ತೇನೆ ಎಂದು ತಿರುಗೇಟು ಕೊಡೋಕೆ ಮುಂದಾದರು.

‘ನಿಮ್ಮದನ್ನು ನೀವು ನೋಡಿಕೊಳ್ಳಿ’ ಎಂದು ಅರವಿಂದ್ ಹೇಳಿದ್ದಾರೆ. ‘ಚಪಾತಿ ಮಾಡುವಾಗ ಯಾಕೆ ತಪ್ಪು ಹೇಳೋಕೆ ಹೋದೆ. ನಾನು ಯಾರ ಹತ್ತಿರವೂ ಏನನ್ನೂ ಹೇಳಿಲ್ಲ. ಕ್ರಿಟಿಸಿಸಂ ನಾನು ಚೆನ್ನಾಗಿ ತಗೊಂಡಿದೀನಿ. ಫೇವರಿಸಂ ಆಗಿತ್ತು ಅದನ್ನು ಹೇಳಿದೆ. ಬಿಗ್​ ಬಾಸ್​ ನೀನಾ?’ ಎಂದು ಪ್ರಶಾಂತ್​ ಕೇಳಿದ್ದಾರೆ.

‘ಅನ್ಯಾಯಾವಾಗುವಾಗ ಧ್ವನಿ ಎತ್ತುತ್ತೇನೆ. ಗೇಮ್​ನಲ್ಲಿ ಚೀಟಿಂಗ್​ ನಡೆದಿದೆ. ಅದನ್ನು ಹೇಳುತ್ತಿದ್ದೇನೆ. ಕ್ರೀಡಾ ಸ್ಫೂರ್ತಿ ಇಲ್ಲ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ’ ಎಂದರು ಪ್ರಶಾಂತ್​. ಇಬ್ಬರ ನಡುವಿನ ಜಗಳ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಬಂದು ನಿಂತಿತ್ತು. ಇದನ್ನು ಮನೆಯವರು ತಡೆದಿದ್ದಾರೆ.

ನಂತರದಲ್ಲಿ ಪ್ರಶಾಂತ್​-ಅರವಿಂದ್​ ಮಾತನಾಡಿಕೊಂಡರು. ಈ ವೇಳೆ ಪ್ರಶಾಂತ್​ಗೆ ಸಮಾಧಾನದ ಮಾತುಗಳನ್ನು ಅರವಿಂದ್ ಹೇಳಿದರು. ಆಗ ಅರವಿಂದ್ ‘ಚಾಲೆಂಜ್​ ಎಂದು ಬಂದಾಗ ನಾನು ಯಾವುದಕ್ಕೆ ಬೇಕಿದ್ದರೂ ರೆಡಿ ಇದ್ದೇನೆ’ ಎಂದು ಪ್ರಶಾಂತ್​ಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಚಕ್ರವರ್ತಿ-ಪ್ರಶಾಂತ್​ ಜಗಳದಲ್ಲಿ ಕೇಳಿದ್ದು ಕೇವಲ ಬೀಪ್​ ಶಬ್ದಗಳು

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ