Bigg Boss Kannada: ‘ಎಲ್ಲವೂ ಫೇಕ್ ಅನಿಸುತ್ತಿದೆ’; ಬಿಗ್ ಬಾಸ್ ಮನೆಯಲ್ಲಿ 50 ದಿನ ಕಳೆದ ಬಳಿಕ ಅರವಿಂದ್ ಹೀಗೆ ಹೇಳಿದ್ದೇಕೆ?

BBK8: ಬಿಗ್​ ಬಾಸ್​ನಲ್ಲಿ ಅರವಿಂದ್​ ಕೆಪಿ ಅವರ ಆಟ ಎಲ್ಲರಿಗೂ ಇಷ್ಟ ಆಗುತ್ತಿದೆ. ಟಾಸ್ಕ್​ನಲ್ಲಿ ಚೆನ್ನಾಗಿ ಪರ್ಫಾಮ್​ ಮಾಡುತ್ತಿರುವ ಅವರು ವ್ಯಕ್ತಿತ್ವದ ಕಾರಣದಿಂದಲೂ ಎಲ್ಲರ ಮನ ಗೆಲ್ಲುತ್ತಿದ್ದಾರೆ.

Bigg Boss Kannada: ‘ಎಲ್ಲವೂ ಫೇಕ್ ಅನಿಸುತ್ತಿದೆ’; ಬಿಗ್ ಬಾಸ್ ಮನೆಯಲ್ಲಿ 50 ದಿನ ಕಳೆದ ಬಳಿಕ ಅರವಿಂದ್ ಹೀಗೆ ಹೇಳಿದ್ದೇಕೆ?
ದಿವ್ಯಾ ಉರುಡುಗ - ಅರವಿಂದ್​ ಕೆಪಿ
Edited By:

Updated on: Apr 21, 2021 | 6:29 AM

ಬಿಗ್​ ಬಾಸ್​ ಕನ್ನಡ ಸೀಸನ್​ 8 ಸರಾಗವಾಗಿ ಸಾಗುತ್ತಿದೆ. ಈಗಾಗಲೇ 7 ಜನರ ಎಲಿಮಿನೇಷನ್​ ಆಗಿದೆ. ಇನ್ನುಳಿದ ಸ್ಪರ್ಧಿಗಳು ಎಂಟನೇ ವಾರಕ್ಕೆ ಕಾಲಿಟ್ಟಿದ್ದಾರೆ. ಆಟದ ವೈಖರಿ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಇಲ್ಲಿ ಯಾರು ಫೇಕ್​, ಯಾರು ರಿಯಲ್​ ಎಂಬುದನ್ನು ಕಂಡುಹಿಡಿಯುವುದು ಸುಲಭವಲ್ಲ. ದಿನದಿನವೂ ಒಬ್ಬೊಬ್ಬರ ಬಣ್ಣ ಬಯಲಾಗುತ್ತಿದೆ. ಈ ಸಂದರ್ಭದಲ್ಲಿ ‘ಎಲ್ಲವೂ ಫೇಕ್​ ಅನಿಸುತ್ತಿದೆ’ ಎಂಬ ಮಾತು ಅರವಿಂದ್​ ಕೆ.ಪಿ. ಅವರ ಬಾಯಿಂದ ಬಂದಿದೆ!

ಬಿಗ್​ ಬಾಸ್​ನಲ್ಲಿ 50ನೇ ದಿನ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಮಾತನಾಡುತ್ತಿದ್ದರು. ಆಗ ಅರವಿಂದ್​ ಯಾಕೋ ಸ್ವಲ್ಪ ಬೇಜಾರಾದಂತೆ ಕಂಡರು. ನನ್ನಿಂದ ಏನಾದರೂ ಕಷ್ಟ ಆಗುತ್ತಿದೆಯೇ ಎಂದು ದಿವ್ಯಾ ಪ್ರಶ್ನೆ ಮಾಡಿದರು. ಅದಕ್ಕೆ ‘ಇಲ್ಲ’ ಎಂಬ ಉತ್ತರ ಅರವಿಂದ್​ ಕಡೆಯಿಂದ ಬಂತು. ಮುಂದುವರಿದು ಮಾತನಾಡಿದ ಅವರು, ‘ನನಗೆ ಎಲ್ಲವೂ ಫೇಕ್​ ಅನಿಸುತ್ತಿದೆ. ಆದರೆ ನೀನಲ್ಲ. ಸ್ವಲ್ಪ ದೂರದಿಂದ ನೋಡಬೇಕು. ಆಗ ಸ್ವಲ್ಪ ಸ್ಪಷ್ಟತೆ ಸಿಗುತ್ತದೆ. ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಕಡೆಯಿಂದ ನಿಧಿ ನಂಬಿಕೆ ದ್ರೋಹ ಮಾಡಿಸಿದಳು. ನನ್ನ ಪ್ರಕಾರ ಇದೆಲ್ಲ ತುಂಬಾ ತಪ್ಪು’ ಎಂದು ಹೇಳಿದ್ದಾರೆ.

ಬಿಗ್​ ಬಾಸ್​ ಸ್ಪರ್ಧಿಗಳಿಗೆ ಇತ್ತೀಚೆಗೆ ಗರ್ಲ್ಸ್​ ಹಾಸ್ಟೆಲ್​ ವರ್ಸಸ್​ ಬಾಯ್ಸ್​ ಹಾಸ್ಟೆಲ್​ ಎಂಬ ಟಾಸ್ಕ್​ ನೀಡಲಾಗಿತ್ತು. ಆ ಟಾಸ್ಕ್​ನಲ್ಲಿ ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ಸೇರಿಕೊಂಡು ಕುತಂತ್ರ ಮಾಡಿದ್ದರು. ಮನೆಯವರ ನಂಬಿಕೆಗೆ ಮೋಸ ಮಾಡಿದ್ದರು. ಮೂವರೂ ಸೇರಿ ಮುಚ್ಚಿಟ್ಟಿದ್ದ ಆ ವಿಚಾರ ನಂತರ ಬಹಿರಂಗವಾಯಿತು. ಅವರು ಮಾಡಿದ ಈ ಕೃತ್ಯ ನೋಡಿ ಅರವಿಂದ್​ಗೆ ಬೇಸರ ಆಗಿದೆ. ಹಾಗಾಗಿ ಅವರು ‘ಎಲ್ಲವೂ ಫೇಕ್​ ಅನಿಸುತ್ತಿದೆ’ ಎಂದು ದಿವ್ಯಾ ಸುರೇಶ್​ ಬಳಿ ಹೇಳಿಕೊಂಡಿದ್ದಾರೆ.

ಸದ್ಯ ಬಿಗ್​ ಬಾಸ್​ನಲ್ಲಿ ಅರವಿಂದ್​ ಕೆಪಿ ಅವರ ಆಟ ಎಲ್ಲರಿಗೂ ಇಷ್ಟ ಆಗುತ್ತಿದೆ. ಟಾಸ್ಕ್​ನಲ್ಲಿ ಚೆನ್ನಾಗಿ ಪರ್ಫಾಮ್​ ಮಾಡುತ್ತಿರುವ ಅವರು ವ್ಯಕ್ತಿತ್ವದ ಕಾರಣದಿಂದಲೂ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗೆ ರಘು ಗೌಡ ಮತ್ತು ಶಮಂತ್​ ಬ್ರೋ ಗೌಡ ಕೂಡ ಪರಸ್ಪರ ಮಾತನಾಡಿಕೊಂಡಿದ್ದರು. ಸನ್ನಿವೇಶಕ್ಕೆ ತಕ್ಕಂತೆ ಅರವಿಂದ್​ ಬದಲಾಗುತ್ತಾರೆ. ಅವರೇ ವಿನ್ನರ್​ ಆಗಬಹುದು ಎಂದು ಅವರಿಬ್ಬರು ಅಭಿಪ್ರಾಯ ಹಂಚಿಕೊಂಡಿದ್ದರು.

ಟಾಸ್ಕ್​ ಮಾತ್ರವಲ್ಲದೆ ದಿವ್ಯಾ ಉರುಡುಗ​ ಜೊತೆಗಿನ ಪ್ರೇಮ್​ ಕಹಾನಿಯ ಕಾರಣದಿಂದಲೂ ಅರವಿಂದ್​ ಹೈಲೈಟ್​ ಆಗುತ್ತಿದ್ದಾರೆ. ದಿವ್ಯಾ ಜೊತೆಗಿನ ಅವರ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮನೆಯಲ್ಲಿ ಸಮಯ ಸಿಕ್ಕಾಗಲೆಲ್ಲ ಅವರು ದಿವ್ಯಾ ಜೊತೆಗೆ ಸಮಯ ಕಳೆಯುತ್ತಾರೆ. ಇಬ್ಬರ ನಡುವಿನ ಸಲುಗೆ ನೋಡಿದರೆ ಬಿಗ್​ ಬಾಸ್​ ಮುಗಿದ ಬಳಿಕ ಅವರಿಬ್ಬರು ಮದುವೆ ಆಗಬಹುದು ಎಂದು ಅಭಿಪ್ರಾಯ ಎಲ್ಲರಿಂದಲೂ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅರವಿಂದ್​ ಆಗಲೀ, ದಿವ್ಯಾ ಆಗಲೀ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.

ಇದನ್ನೂ ಓದಿ: ಅರವಿಂದ್​ಗೆ ಪ್ರೀತಿಯ ರಿಂಗ್​ ತೊಡಿಸಿದ ದಿವ್ಯಾ! ಮರುಕ್ಷಣವೇ ಇಬ್ಬರ ಲವ್​ನಲ್ಲಿ ಸುನಾಮಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us