ಅರವಿಂದ್​ಗೆ ಪ್ರೀತಿಯ ರಿಂಗ್​ ತೊಡಿಸಿದ ದಿವ್ಯಾ! ಮರುಕ್ಷಣವೇ ಇಬ್ಬರ ಲವ್​ನಲ್ಲಿ ಸುನಾಮಿ

ಅರವಿಂದ್​ಗೆ ಪ್ರೀತಿಯ ರಿಂಗ್​ ತೊಡಿಸಿದ ದಿವ್ಯಾ! ಮರುಕ್ಷಣವೇ ಇಬ್ಬರ ಲವ್​ನಲ್ಲಿ ಸುನಾಮಿ
ದಿವ್ಯಾ ಉರುಡುಗ - ಅರವಿಂದ್​ ಕೆ.ಪಿ.

Bigg Boss Kannada: ‘ಅರವಿಂದ್​ ಜೀವನಪರ್ಯಂತ ನನ್ನ ಜೊತೆಗೆ ಇರಬೇಕು. ಅವನು ನನಗೆ ನಿಜಕ್ಕೂ ಸ್ಪೆಷಲ್​. ನಮ್ಮ ಅಪ್ಪಾಜಿ ಕೊಟ್ಟಿರುವ ರಿಂಗ್​ ಅನ್ನು ನಾನು ಅರವಿಂದ್​ಗೆ ನೀಡುತ್ತೇನೆ’ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ!

Madan Kumar

|

Apr 12, 2021 | 1:18 PM

ಬಿಗ್​ ಬಾಸ್​ನಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ನಡುವೆ ಏನು ನಡೆಯುತ್ತಿದೆ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ದಿನದಿಂದ ದಿನಕ್ಕೆ ಅವರಿಬ್ಬರ ಪ್ರೀತಿ ಒಂದೊಂದು ಹಂತ ಮೇಲೇರುತ್ತಿದೆ. ಅವರ ನಡುವಿನ ಸ್ನೇಹ-ಪ್ರೀತಿ ಕಂಡು ಮನೆಯ ಸದಸ್ಯರು ಅಚ್ಚರಿಪಡುತ್ತಿದ್ದಾರೆ. ಬಿಗ್​ ಬಾಸ್​ನಿಂದ ಹೊರಬಂದ ಬಳಿಕ ಅವರಿಬ್ಬರು ಮದುವೆ ಆದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡುವಂತಹ ಘಟನೆ ನಡೆದಿದೆ. ಅರವಿಂದ್​ಗೆ ದಿವ್ಯಾ ಪ್ರೀತಿಯ ರಿಂಗ್​ ತೊಡಿಸಿದ್ದಾರೆ!

ಮನೆಯ ಸದಸ್ಯರಿಗೆ ಬಿಗ್​ ಬಾಸ್​ ಒಂದು ಚಟುವಟಿಕೆ ನೀಡಿದ್ದಾರೆ. ತಮ್ಮ ಮನಸ್ಸು ಗೆದ್ದ ಹುಡುಗಿಗೆ ಹುಡುಗರು ಹಾರ್ಟ್​ ಶೇಪ್​ನ ಬಲೂನ್​ ನೀಡಬೇಕು. ಹುಡುಗರಿಗೆ ಹುಡುಗಿಯರು ತಮ್ಮಿಷ್ಟದ ಒಂದು ವಸ್ತುವನ್ನು ನೀಡಬೇಕು. ಈ ವೇಳೆ ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ನಡುವಿನ ಪ್ರೀತಿಯ ತೀವ್ರತೆ ಜಗಜ್ಜಾಹೀರಾಗಿದೆ. ‘ನಾನು ಜಾಸ್ತಿ ಮಾತನಾಡುವುದಿಲ್ಲ. ಮಾತು ಇಲ್ಲದೆಯೂ ಅವಳಿಗೆ ಅರ್ಥವಾಗುತ್ತದೆ’ ಎಂದು ದಿವ್ಯಾ ಬಗ್ಗೆ ಅರವಿಂದ್​ ಹೇಳಿದ್ದಾರೆ.

‘ಅರವಿಂದ್​ ಜೀವನಪರ್ಯಂತ ನನ್ನ ಜೊತೆಗೆ ಇರಬೇಕು. ಅವನು ನನಗೆ ನಿಜಕ್ಕೂ ಸ್ಪೆಷಲ್​. ನಮ್ಮ ಅಪ್ಪಾಜಿ ಕೊಟ್ಟಿರುವ ರಿಂಗ್​ ಅನ್ನು ನಾನು ಅರವಿಂದ್​ಗೆ ನೀಡುತ್ತೇನೆ’ ಎಂದು ದಿವ್ಯಾ ಹೇಳಿದಾಗ ಅರವಿಂದ್​ ಕಣ್ಣಲ್ಲಿ ಆನಂದಬಾಷ್ಪ ಸುರಿದಿದೆ. ಎಲ್ಲರ ಸಮ್ಮುಖದಲ್ಲಿ ಅವರಿಗೆ ದಿವ್ಯಾ ರಿಂಗ್​ ತೊಡಿಸಿದ್ದಾರೆ. ಇಬ್ಬರ ಪ್ರೀತಿ ಕಂಡು ಮನೆಯ ಸದಸ್ಯರೆಲ್ಲ ಚಪ್ಪಾಳೆ ತಟ್ಟಿದ್ದಾರೆ. ಆದರೆ ರಿಂಗ್​ ಪಡೆದುಕೊಂಡ ಕೆಲವೇ ಕ್ಷಣಗಳಲ್ಲಿ ಅಚಾತುರ್ಯ ನಡೆದುಹೋಗಿದೆ!

ಅರವಿಂದ್ ಮೇಲಿನ ಪ್ರೀತಿಗಾಗಿ ದಿವ್ಯಾ ಉರುಡುಗ ಆ ಉಂಗುರ ನೀಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಆ ಉಂಗುರುವನ್ನು ಅರವಿಂದ್​ ಕಳೆದುಕೊಂಡಿದ್ದಾರೆ! ಅಷ್ಟು ಪ್ರೀತಿಯಿಂದ ನೀಡಿದ ಉಂಗುರು ಈಗ ಕಳೆದುಹೋಗಿದೆ ಎಂಬ ವಿಷಯ ದಿವ್ಯಾಗೆ ಗೊತ್ತಾದರೆ ಆಘಾತ ಆಗುವುದು ಗ್ಯಾರಂಟಿ. ಹಾಗಾಗಿ ಈ ವಿಷಯವನ್ನು ಮುಚ್ಚಿಟ್ಟು, ಉಂಗುರು ಹುಡುಕುವ ಕಾಯಕದಲ್ಲಿ ಅರವಿಂದ್​ ತೊಡಗಿಕೊಂಡಿದ್ದಾರೆ. ಅವರಿಗೆ ಇಡೀ ಮನೆಯ ಸದಸ್ಯರು ಸಾಥ್​ ನೀಡುತ್ತಿದ್ದಾರೆ.

ಬಿರು ಬಿಸಿಲನ್ನೂ ಲೆಕ್ಕಿಸದೇ ಪೂರ್ತಿ ಮನೆಯನ್ನು ಗುಡಿಸಲಾಗುತ್ತಿದೆ. ಎಲ್ಲರೂ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ದಿವ್ಯಾಗೆ ಗೊತ್ತಾಗಿಲ್ಲ. ಎಷ್ಟೇ ಹುಡುಕಿದರೂ ಉಂಗುರು ಸಿಗುವುದು ಅನುಮಾನವಾಗಿದೆ. ಸತ್ಯವನ್ನು ದಿವ್ಯಾಗೆ ಹೇಳಿಬಿಡುತ್ತೇನೆ ಎಂದು ಅರವಿಂದ್​ ನಿರ್ಧಾರ ಮಾಡಿಕೊಂಡಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋನಲ್ಲಿ ಈ ಎಲ್ಲ ವಿಚಾರಗಳು ಗೊತ್ತಾಗಿವೆ. ಮುಂದೇನಾಯಿತು ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಏ.12ರ ಎಪಿಸೋಡ್​ನಲ್ಲಿ ಈ ಎಲ್ಲ ಘಟನೆಗಳು ಪ್ರಸಾರ ಆಗಲಿವೆ.

ಇದನ್ನೂ ಓದಿ: ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!

ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?

(Bigg Boss Kannada 8 : Divya Uruduga gives her favourite ring to Aravind KP in BBK8 )

Follow us on

Most Read Stories

Click on your DTH Provider to Add TV9 Kannada