AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಯಾವ ಪ್ರಾಣಿ ಪರಚಿದ್ದು ಎಂದು ಟೀಕಿಸಿದ ಅಶ್ವಿನಿ; ಚೈತ್ರಾ ಖಡಕ್ ತಿರುಗೇಟು

ಬಿಗ್ ಬಾಸ್ ಮುಗಿದರೂ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ನಡುವಿನ ಕಿತ್ತಾಟ ಮುಂದುವರಿದಿದೆ. ಮನೆಯೊಳಗೆ ಆದ ಗಾಯಗಳ ಬಗ್ಗೆ ಅಶ್ವಿನಿ ಈಗ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. ಇದಕ್ಕೆ ಚೈತ್ರಾ ತಿರುಗೇಟು ನೀಡಿದ್ದು, "ನನಗೂ ನೋವಾಗಿದೆ, ಆದರೆ ಆಟವನ್ನು ಆಟವಾಗಿಯೇ ನೋಡುತ್ತೇನೆ" ಎಂದಿದ್ದಾರೆ.

ಇದು ಯಾವ ಪ್ರಾಣಿ ಪರಚಿದ್ದು ಎಂದು ಟೀಕಿಸಿದ ಅಶ್ವಿನಿ; ಚೈತ್ರಾ ಖಡಕ್ ತಿರುಗೇಟು
ಅಶ್ವಿನಿ ಹಾಗೂ ಚೈತ್ರಾ
ರಾಜೇಶ್ ದುಗ್ಗುಮನೆ
|

Updated on:Feb 10, 2026 | 1:28 PM

Share

ಬಿಗ್ ಬಾಸ್ (Bigg Boss) ಆಟ ಪೂರ್ಣಗೊಂಡ ಬಳಿಕವೂ ಅದರ ಬಗ್ಗೆ ಚರ್ಚೆಗಳು ಇದ್ದೇ ಇರುತ್ತವೆ. ದೊಡ್ಮನೆ ಒಳಗೆ ನಡೆದ ವಿಷಯ ಹೊರಗೂ ಚರ್ಚೆ ಆಗುತ್ತದೆ. ಈ ಬಾರಿ ಸೀಸನ್​ ಅಲ್ಲಿ ಅದು ಕೊಂಚ ಹೆಚ್ಚೇ ಇದೆ ಎನ್ನಬಹುದು. ಚೈತ್ರಾ ಕುಂದಾಪುರ ಹಾಗೂ ಅಶ್ವಿನಿ ಗೌಡ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಆಗಿತ್ತು. ಈ ಕಿರಿಕ್ ಹೊರ ಬಂದಮೇಲೂ ಮುಂದುವರಿದಿದೆ. ಪರಸ್ಪರ ಮಾತಿನ ಕಿತ್ತಾಟ ನಡೆದಿದೆ.

ಮಾಧ್ಯದಮವರ ಬಳಿ ಮಾತನಾಡುವಾಗ ಅಶ್ವಿನಿ ಗೌಡ ಅವರು ಚೈತ್ರಾ ಕುಂದಾಪುರ ಮೇಲೆ ನೇರವಾಗಿ ಆರೋಪ ಮಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಗಾಯಗಳಾಗಿವೆ. ಚೈತ್ರಾ ಕುಂದಾಪುರ ಅವರು ನನಗೆ ಪರಚಿದ್ದರು’ ಎಂದು ಅಶ್ವಿನಿ ಗೌಡ ಆರೋಪ ಮಾಡಿದ್ದರು. ಅಲ್ಲದೆ ಕೈಗೆ ಆದ ಗಾಯಗಳನ್ನು ಮಾಧ್ಯಮಗಳಿಗೆ ತೋರಿಸಿದ್ದರು.  ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಗಾಯದ ಪೋಸ್ಟ್ ಹಾಕಿ, ‘ಇದು ಯಾವ ಪ್ರಾಣಿ ಪರಚಿದ್ದು’ ಎಂದು ಕಳಿದ್ದರು. ಇದಕ್ಕೆ ಚೈತ್ರಾ ಉತ್ತರಿಸಿದ್ದಾರೆ.

‘ನನಗೂ ಪರಚಿದ ಕಲೆಗಲಿವೆ. ಆದರೆ ಕ್ಷಮಿಸಿ ನನ್ನ ಬಳಿ ಪಿ.ಆರ್ ಟೀಮ್ ಇಲ್ಲ. ನನಗೂ ನೋವು, ಕಲೆಗಳಿದೆ. ಆದರೆ ನನಗೆ ಆಟವನ್ನು ಆಟವಾಗಿಯೇ ನೋಡುವ ಮನಸ್ಥಿತಿ ಇದೆ’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಬಿಗ್ ಬಾಸ್ ಟಾಸ್ಕ್ ಮುಗಿದ ಬಳಿಕ ಪರಸ್ಪರ ಕ್ಷಮೆ ಕೇಳಿ ಪ್ರಕರಣವನ್ನು ಅಶ್ವಿನಿ-ಚೈತ್ರಾ ಅಲ್ಲಿಯೇ ಮುಗಿಸಿದ್ದರು. ಆದರೆ, ಹೊರ ಬಂದ ಬಳಿಕ ಅಶ್ವಿನಿ ಗೌಡ ಈ ವಿಷಯವನ್ನು ಮತ್ತೆ ತೆಗೆದಿದ್ದಾರೆ.

ಟಾಸ್ಕ್ ವೇಳೆ ಅನೇಕರಿಗೆ ಗಾಯಗಳಾಗುತ್ತವೆ. ಅದನ್ನು ಎಲ್ಲರೂ ಅಲ್ಲಿಗೇ ಬಿಡುತ್ತಾರೆ. ಆದರೆ, ಕೆಲವರು ಅದನ್ನು ಹೊರಕ್ಕೂ ತೆಗೆದುಕೊಂಡು ಹೋಗುತ್ತಾರೆ. ಈಗ ಆ ಕೆಲಸವನ್ನು ಅಶ್ವಿನಿ ಮಾಡಿದ್ದಾರೆ. ಈ ಕಾರಣಕ್ಕೆ ಚೈತ್ರಾ ಕುಂದಾಪುರ ಅವರು ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?

ಇನ್ನು ಗಿಲ್ಲಿ ಬಗ್ಗೆ ಅಶ್ವಿನಿ ಗೌಡ ಅವರು ಗಂಭೀರ ಆರೋಪ ಮಾಡಿದ್ದರು. ‘ಗಿಲ್ಲಿ ಬಡವ ಎಂದು ಬಿಂಬಿಸಿಕೊಂಡಿದ್ದಾನೆ. ಆತ ನಿಜವಾಗಲೂ ಬಡವನಾ’ ಎಂದು ಅವರು ಪ್ರಶ್ನೆ ಮಾಡಿದ್ದರು. ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:10 pm, Tue, 10 February 26

Follow Us
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು